ಬಿಜೆಪಿಯಿಂದ ಕೇಂದ್ರದ ಸಾಧನೆ ಕುರಿತು ಜಾಗ್ರತಿ

ಬೀದರ್:ಜು.26: ಬಿಜೆಪಿ ಕಾರ್ಯಕರ್ತರು ಇಲ್ಲಿಯ ವಾರ್ಡ್ ಸಂಖ್ಯೆ 18 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಎಂಟು ವರ್ಷಗಳ ಸಾಧನೆಯ ಜನ ಜಾಗೃತಿ ಮೂಡಿಸಿದರು.

ಯುವ ಮುಖಂಡ ವಿಕ್ರಮ ಮುದಾಳೆ ನೇತೃತ್ವದಲ್ಲಿ ವಾರ್ಡ್ ವ್ಯಾಪ್ತಿಯ ನಂದಿ ಕಾಲೊನಿ, ಶಹಾಗಂಜ್ ಸೇರಿದಂತೆ ವಿವಿಧೆಡೆ ಮನೆ ಮನೆಗೆ ಭೇಟಿ ನೀಡಿ, ಕೇಂದ್ರ ಸರ್ಕಾರದ ವಿವಿಧ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳ ಮಾಹಿತಿ ಒಳಗೊಂಡ ಕರಪತ್ರ ವಿತರಿಸಿದರು.

ಕೇಂದ್ರ ಸರ್ಕಾರವು ಸರ್ವ ಸಮುದಾಯಗಳ ಏಳಿಗೆಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅರ್ಹರು ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ನಂದಿ ಕಾಲೊನಿಯಲ್ಲಿ ಯುವ ಪಡೆಯ ಜಾಗೃತಿ ಕಾರ್ಯಕ್ಕೆ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ನಗರಸಭೆ ಸದಸ್ಯೆ ಉಲ್ಲಾಸಿನಿ ವಿಕ್ರಮ ಮುದಾಳೆ, ಬಿಜೆಪಿ ಬೀದರ್ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ನಿತಿನ್ ಕರ್ಪೂರ ಸಾಥ್ ನೀಡಿದರು.

ಪ್ರಮುಖರಾದ ಸಿದ್ಧರಾಮೇಶ್ವರ ರೆಡ್ಡಿ, ವಿವೇಕ ಧನ್ನೂರ, ಡಾ. ಸಂಗಮೇಶ ವಡಗಾವೆ, ಸಂತೋಷ ನಿಂಬೂರ, ಸೂರ್ಯಕಾಂತ ರಾಮಶೆಟ್ಟಿ, ನಿತಿನ್ ನವಲಕಿಲೆ ಗಣೇಶ ಭೋಸ್ಲೆ ಇದ್ದರು.