ಬಿಜೆಪಿಯಿಂದಲೇ ಸ್ಪರ್ಧೆ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.03: ಕೆಲ ಮಾಧ್ಯಮಗಳು, ನನ್ನ ವಿರೋಧಿಗಳು ನನ್ನ ಸ್ಪರ್ಧೆ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ಅದರ ಬಗ್ಗೆ ಕಿವಿಗೊಡಬೇಡಿ. ನಾನು ಬಳ್ಳಾರಿ ನಗರದ ಬಿಜೆಪಿ ಅಭ್ಯರ್ಥಿಯಾಗಿಯೇ ಸ್ಪರ್ಧೆ ಮಾಡುವೆ ಎಂದು ನಗರ ಶಾಸಕ ಗಾಳಿ ಸೋಮಶೇಖರ ರೆಡ್ಡಿ ಮತದಾರರಿಗೆ ಸ್ಪಷ್ಟಪಡಿಸಿದ್ದಾರೆ.
ಅವರು ಇಂದು ನಗರದ 22 , 23  ಮತ್ತು 24 ನೇ ವಾರ್ಡ್ ನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದರು.
ಕೆಲವರು ನಾನು ಕೆಆರ್ ಪಿ ಪಕ್ಷಕ್ಕೆ ಹೋಗುವುದಾಗಿ, ಸ್ಪರ್ಧೆ ಮಾಡಲ್ಲ ಎಂಬುದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದನ್ನು ನಮ್ಮನ್ನು ಬೆಂಬಲುಸುವ ನಗರದ ಮತದಾರರು, ಜನತೆ ನಂಬ ಬೇಡಿ, ಎರೆಡು ಬಾರಿ ಶಾಸಕರನ್ನಾಗಿ, ಕೆ.ಎಂ.ಎಫ್ ಅಧ್ಯಕ್ಷನನ್ನಾಗಿ ಮಾಡಿರುವ ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಈ ಬಾರಿ ಮತ್ತೊಮ್ಮೆ ಶಾಸಕನಾಗಲು ಆಶಿರ್ವಾದ ಮಾಡಿ ಎಂದು ಮನವಿ ಮಾಡಿದರು.