ಬಿಜೆಪಿಯವರು ನಕಲಿ ರಾಷ್ಟ್ರ ಭಕ್ತರು ಸ್ವತಂತ್ರದ ಇತಿಹಾಸ ಬದಲಿಸಲು ಮುಂದಾಗುತ್ತಿದ್ದಾರೆ: ಖಂಡ್ರೆ ಆರೋಪ

ಬಸವಕಲ್ಯಾಣ:ಸೆ.4: ಇಲ್ಲಿಯ ಕಾಂಗ್ರೇಸ್ ಪಕ್ಷದ ಸಮಿತಿಯ ವತಿಯಿಂದ 75ನೇ ಸ್ವಾತಂತ್ಯದ ಅಮ್ರುತ ಮಹೋತ್ಸವ ನಿಮಿತ್ಯ ನಗರದಲ್ಲಿ ಶನಿವಾರ ತಿರಂಗಾ ಪಾದಯಾತ್ರೆ ಜರುಗಿತು. ನಗರದ ಐತಿಹಾಸಿಕ ಕೋಟೆಯಿಂದ ಪ್ರಾರಂಭವಾಗಿ ಗಾಂಧಿವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ, ಹರಳಯ್ಯ ವೃತ್ತದ ಮೂಲಕ ತ್ರೀಪುರಾಂತನ ವಾಲ್ಮೀಕಿ ಚೌಕ ಹಾಗೂ ಸಾಹಿಲ್ ಕಲ್ಯಾಣ ಮಂಟಪದ ವರೆಗೂ ಸಾಗಿ ಸಮಾಪ್ತಿಗೊಂಡಿತು.

ನಗರ ಪ್ರದೇಶ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಬೃಹತ್ ಪಾದಯಾತ್ರೆ ನಡೆಸಿದರು. ಎಲ್ಲರ ಕೈಯಲ್ಲೂ ರಾಷ್ಟ್ರ ಧ್ವಜ ರಾರಾಜಿಸುತ್ತಿದ್ದವು. ಹುಮ್ಮಸ್ಸಿನಿಂದ ಯುವಕರು, ಹಿರಿಯರು, ಮಹಿಳೆಯರು ಪಾಲ್ಗೊಂಡು ಯಶಸ್ವಿಗೊಳಿಸಿದರು. ಈ ತಿರಂಗಾ ಪಾದಯಾತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಪಾರಿವಾಳ ಹಾರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಈಶ್ವರ ಖಂಡ್ರೆ ಅವರು ಮಾತನಾಡಿ, ದೇಶಕ್ಕೆ ಸ್ವತಂತ್ರ ಬಂದು 75ನೇ ವಸಂತಗಳು ಮುಗಿದ ಕ್ಷಣದಲ್ಲಿದ್ದೇವೆ. ಈ ದೇಶದ ಸ್ವಾತಂತ್ರಕ್ಕಾಗಿ ಕಾಂಗ್ರೇಸ್ ಪಕ್ಷದ ಕೊಡುಗೆ ದೊಡ್ಡದಿದೆ. ಆದರೆ ಸದ್ಯ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯವರು ಸುಳ್ಳು ಹೇಳುವ ಮೂಲಕ ಅವರು ಸ್ವತಂತ್ರದ ಇತಿಹಾಸ ಬದಲಿಸಲು ಮುಂದಾಗುತ್ತಿದ್ದಾರೆ ಅವರು ನಕಲಿ ನಕಲಿ ರಾಷ್ಟ್ರ ಭಕ್ತರು ಎಂದು ಟೀಕಿಸಿದರು.

ದೇಶದ ಸ್ವತಂತ್ರಕ್ಕಾಗಿ ಅನೇಕ ಮಹಾತ್ಮರ ತ್ಯಾಗ, ಬಲಿದಾನದಿಂದಾಗಿ ಸ್ವತಂತ್ರ ಸಿಕ್ಕಿದೆ. ಆ ಹುತಾತ್ಮರು ಇದಕ್ಕಾಗಿ ತಮ್ಮ ಮನೆ, ಆಸ್ತಿ, ಪಾಸ್ತಿ ಹಾನಿಗೀಡಾಗಿದೆ. ಆದರೆ ಬಿಜೆಪಿಯವರು ಜನರಿಗೆ ಸುಳ್ಳು ಹೇಳುವ ಮೂಲಕ ಹಿಟ್ಲರ್ ಶಾಹಿಗಳಂತೆ ವರ್ತಿಸಿ ಜನರಿಗೆ ತಪ್ಪು ಮಾಹಿತಿ ಸಾರುತ್ತಿದ್ದಾರೆ ದೇಶದ ಜನರು ಪ್ರಜ್ಞಾವಂತರಾಗಿದ್ದಾರೆ ಇವರ ಮಾತಿಗೆ ಮರುಳಾಗುವುದಿಲ್ಲ ಎಂದು ಬಿಜೆಪಿ ವಿರುದ್ದ ಕಿಡಿ ಕಾರಿದರು.

ಕಳೆದ ಎಂಟು ವರ್ಷದಿಂದ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಪಕ್ಷದ ಹಿರಿಯ ಮುಖಂಡರನ್ನು ಟಾರ್ಗೆಟ್ ಮಾಡಿ ಅವರಿಗೆ ವಿವಿಧ ತನಿಖಾ ಸಂಸ್ಥೆಗಳಿಂದ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರ ಶಾಶ್ವತವಲ್ಲ ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಕಿತ್ತೊಗೆದು ಕಾಂಗ್ರೇಸ್ ಪಕ್ಷಕ್ಕೆ ಅಧಿಕಾರ ನೀಡಲು ನಿರ್ಧರಿಸಿದ್ದಾರೆ ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಅಧಿಕಾರ ನೀಡಿದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿ ಯುವಕರಿಗೆ ಉದ್ಯೋಗ ನೀಡುವದಾಗಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಯವರ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಶಾಸಕ ಶರಣು ಸಲಗರ ಅವರ ಮಧ್ಯೆಯೇ ನಡು ರಸ್ತೆಯಲ್ಲಿ ಕಿತ್ತಾಡಿಕೊಂಡ ಘಟನೆಗೆ ಬಸವಕಲ್ಯಾಣ ಸಾಕ್ಷಿಯಾಗಿದೆ.

ಇಲ್ಲಿನ ಮತದಾರರು ಇದನ್ನು ಸೂಕ್ಷಮವಾಗಿ ಗಮನಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಇಲ್ಲಿ ಬಿಜೆಪಿ ಸೋಲಿಸಲು ಎಲ್ಲರೂ ಒಂದಾಗಿ ಹೋರಾಡಿ ಬಸವಕಲ್ಯಾಣ ಕ್ಷೇತ್ರದಲ್ಲಿ ಮಾಲಾ.ಬಿ ನಾರಾಯಣ ಹಾಗೂ ವಿಜಯಸಿಂಗ್ ಅವರು ಜನರ ಮಧ್ಯೆ ಬೆರೆತು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸೂಕ್ತ ಸಂದರ್ಭದಲ್ಲಿ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಪರಾಜಿತ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ, ಬಸವಕಲ್ಯಾಣ ಉಸ್ತುವಾರಿ ಶರಣಕುಮಾರ ಮೋದಿ, ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ, ನಗರ ಘಟಕದ ಅಧ್ಯಕ್ಷ ಮೀರ ಅಜರಲಿ ನವರಂಗ, ನಗರ ಸಭೆ ಅಧ್ಯಕ್ಷೆ ಶಹಜಹಾನ ಶೇಖ್ ತನ್ವೀರ ಅಹ್ಮದ್, ತಾಪಂ ಮಾಜಿ ಅಧ್ಯಕ್ಷೆ ಯಶೋದಾ ರಾಠೋಡ, ಬಾಬು ಹೊನ್ನಾನಾಯಕ, ಶಾಂತಪ್ಪಾ ಜಿ.ಪಾಟೀಲ, ಶಿವರಾಜ ನರಶೆಟ್ಟಿ, ಕೇಶಪ್ಪಾ ಬಿರಾದಾರ, ಯುವರಾಜ ಬೆಂಡೆ, ಗೌತಮ ಬಿ.ನಾರಾಯಣ, ಆನಂದ ಹೊನ್ನಾನಾಯಕ, ಸಿಕಿಂದರ ಸಿಂಧೆ, ಗಫಾರ ಪೇಶ್ಮಾಮ್, ಅನ್ವರ್ ಭೋಸಗೆ, ಸುನೀಲ ಪಾಟೀಲ, ಶಶಿಕಾಂತ ದುರ್ಗೆ, ಬಸವರಾಜ ಸ್ವಾಮಿ, ಪ್ರಥ್ವಿರಾಜ ಗೋಸ್ವಾಮಿ, ಬಾಲಾಜಿ ಚಂಡಕಾಪೂರೆ, ರೈಸೋದ್ದಿನ್, ಚಂದ್ರಕಾಂತ ಮೇತ್ರೆ, ಮನೋಜ ಮಾಶೆಟ್ಟೆ ಸೇರಿದಂತೆ ಪಕ್ಷದ ಅನೇಕ ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯಸಿಂಗ್ ಪರ ಅಭಿಮಾನಿಗಳ ಜೈಕಾರ, ಸ್ಥಳದಲ್ಲಿದ್ದ ಮಾಲಾ ಆಕ್ಷೇಪ

ಕಾಂಗ್ರೇಸ್ ಪಕ್ಷದಿಂದ ಶನಿವಾರ ಜರುಗಿದ ತಿರಂಗಾ ಪಾದಯಾತ್ರೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅವರ ಅಭಿಮಾನಿಗಳು ಅವರ ಪರವಾಗಿ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿಯೇ ಜೈಕಾರಗಳು ಕೂಗಿದರು. ಇದಕ್ಕೆ ಸ್ಥಳದಲ್ಲಿಯೇ ಇದ್ದ ಪರಾಜಿತ ಅಭ್ಯರ್ಥಿ ಮಾಲಾ ಬಿ.ನಾರಾಯಣ
ಸ್ಥಳದಲ್ಲಿಯೇ ಇದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಸಮಾಧಾನ ಪಡಿಸಿದರು. ಇಲ್ಲಿ ನಾವು ಟಿಕೇಟ್ ನೀಡಲು ಬಂದಿಲ್ಲ 75ನೇ ಸ್ವಾತಂತ್ಯದ ಅಮ್ರುತ ಮಹೋತ್ಸವ ನಿಮಿತ್ಯ ತಿರಂಗಾ ಪಾದಯಾತ್ರೆ ನಡೆಸಲು ಬಂದಿದ್ದೇವೆ. ಚುನಾವಣೆಯಲ್ಲಿ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿ ಈ ವಿಷಯಕ್ಕೆ ತೆರೆ ಎಳೆದರು.