ಬಿಜೆಪಿಯಲ್ಲೂ  ವಂಶ ಪಾರಂಪರ್ಯ ಪದ್ದತಿ ಮುಂದುವರಿಕೆ; ಆಪ್  ಆರೋಪ

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೧೭: 2024ನೇ ಚುನಾವಣೆ ವೇಳೆಯಲ್ಲಿ ಮೋದಿಯವರು ಸುಳ್ಳಿನ ಕಂತೆಯನ್ನು ಹೊತ್ತು ತರುತ್ತಿದ್ದು, ಈಗಲೂ ಸುಳ್ಳಿನ ಸರಮಾಲೆಯನ್ನು ಹೇಳುತ್ತಾ ಭಾರತೀಯರನ್ನು ವಂಚಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಚುನಾವಣೆಯ ಪ್ರಚಾರದಲ್ಲಿ ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದ ಕಪ್ಪು ಹಣವನ್ನು ಭಾರತಕ್ಕೆ ತಂದರೆ ಪ್ರತಿ ಭಾರತೀಯನಿಗೆ 15 ಲಕ್ಷ ಕೊಡಬಹುದು ಎಂದು ಹೇಳಿದ್ದು, ಯಾಕೆ ತರಲಿಲ್ಲ. ಪ್ರತಿ ವರ್ಷ 2ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದು, ಬದಲು ನಿರುದ್ಯೋಗ ಪ್ರಮಾಣವು ಹೆಚ್ಚಾಗಿದೆ. ರೈತರ ಆದಾಯ ದ್ವಿಗುಣ ಆಗಲಿಲ್ಲ ಎಂದು ಕಿಡಿಕಾರಿದರು.ಭೇಟಿ ಪಡಾವೋ, ಭೇಟಿ ಬಚಾವೋ ಎಂದು ಹೇಳುವ ನೀವು ದೇಶದ ಹೆಣ್ಣು ಮಕ್ಕಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿಲ್ಲ. ಬ್ಲಾಕ್ ಮನಿ ಇದೆ ಎಂದು ನೋಟ್ ಬ್ಯಾನ್ ಮಾಡಿದ ನಂತರ ಎಷ್ಟು ಬ್ಲಾಕ್ ಮನಿ ಇದೆ ಅಂತಾ ಬಹಿರಂಗ ಪಡಿಸಲು ಮುಂದಾಗಲಿಲ್ಲ. ವಂಶ ಪಾರಂಪರ್ಯವಾಗಿ ರಾಜಕೀಯ ಮಾಡಲು ಬಿಡುವುದಿಲ್ಲ ಎಂದು ಹೇಳಿ, ನಿಮ್ಮ ಪಕ್ಷದಲ್ಲೇ ವಂಶ ಪಾರಂಪರ್ಯ ಪದ್ದತಿ ಮುಂದುವರೆಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.ದೇಶದ ನಿರಾಶ್ರಿತ ನಾಗರೀಕರಿಗೆ ಮನೆಗಳು ನಿರ್ಮಾಣ ಅಗಲಿಲ್ಲ. ಚುನಾವಣಾ ಬಾಂಡ್ ನೆಪದಲ್ಲಿ ಭ್ರಷ್ಟಾಚಾರ ಬೆಳೆಯಲು ಕಾರಣವಾಗಿದ್ದೀರಿ. ಹಸಿವು ಮುಕ್ತ ರಾಷ್ಟ್ರಗಳ ಪೈಕಿ ಭಾರತ 111ನೇ ಸ್ಥಾನಕ್ಕೆ ಬಂದಿದೆ. ಇದೇನಾ ನಿಮ್ಮ ಶ್ರಮದ ಸಾಧನೆ. ಮಹಾದಾಯಿ, ಭದ್ರಾ ಮೇಲ್ದಂಡೆ ಯೋಜನೆಗೆ ನೀಡಿದ ಭರವಸೆಗಳೇ ಸುಳ್ಳಾಗುವೆ. ಇದೇ ರೀತಿ ಎಲ್ಲಾ ರೀತಿಯ ಸುಳ್ಳುಗಳನ್ನು ಹೇಳುತ್ತಾ ಈ ಬಾರಿಯೂ ದೇಶದ ಜನತೆಯನ್ನು ವಂಚಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಎಸ್.ಕೆ.ಆದಿಲ್ ಖಾನ್, ಸಿ.ಆರ್.ಅರುಣ್ ಕುಮಾರ್, ಧರ್ಮನಾಯ್ಕ ಇತರರು ಇದ್ದರು.