
ಹುಬ್ಬಳ್ಳಿ,ಸೆ.18: ಬಿಜೆಪಿಯಲ್ಲಿ ಟಿಕೆಟ್ ಮಾರಾಟದ ಸಂಸ್ಕøತಿಯಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಗುಡುಗಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ಯಾರೋ ಮಾಡಿದ ಪ್ರಕರಣಕ್ಕೆ ಪಕ್ಷ ಹೊಣೆಯಾಗುವುದಿಲ್ಲ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಹೇಗೆ ಟಿಕೆಟ್ ತೆಗೆದುಕೊಂಡಿದ್ದರು. ಹೇಗೆ ಕೊಟ್ಟಿದ್ದರು. ಎಂಬುದೆಲ್ಲ ಗೊತ್ತಿದೆ ಎಂದವರು ನೇರವಾಗಿ ಮಾಜಿ ಸಿ.ಎಂ. ಜಗದೀಶ್ ಶೆಟ್ಟರ್ ಅವರಿಗೆ ಕುಟುಕಿದರು.
ಅತಿ ಹೆಚ್ಚು ಲಿಂಗಾಯತ್ ಸಮುದಾಯದ ಮುಖ್ಯಮಂತ್ರಿಗಳನ್ನು ಕೊಟ್ಟಿದ್ದು ಬಿಜೆಪಿ, ಶೆಟ್ಟರ್ ಅವರಿಗೆ 30 ವರ್ಷಗಳ ಕಾಲ ಬಿಜೆಪಿ ಎಲ್ಲವನ್ನೂ ಕೊಟ್ಟಿದೆ, ಎಂದ ಅವರು, ಅನ್ಯಾಯವಾಗಿದ್ದರೆ, ತಾಕತ್ತಿದ್ದರೆ ಸರಿ ಮಾಡಿಕೊಳ್ಳಿ ಎಂದು ನುಡಿದರು.
ರಾಜಕೀಯಕ್ಕೂ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ, ರಾಜಕೀಯದಲ್ಲಿ ಸಮುದಾಯವನ್ನು ಎಳೆದು ತರಬಾರದು ಎಂದ ಟೆಂಗಿನಕಾಯಿ ಕಾಂಗ್ರೆಸ್‍ನಲ್ಲಿ ಯಾರೂ ಶೆಟ್ಟರ್ ಅವರನ್ನು ಗುರುತಿಸುತ್ತಿಲ್ಲ. ಇದರಿಂದಾಗಿ ಮಾಧ್ಯಮಗಳಿಗೆ ಅಂಥ ಹೇಳಿಕೆ
ನೀಡುತ್ತಿದ್ದಾರೆ ಎಂದು ಹರಿಹಾಯ್ದರು.