ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ

ಕಲಬುರಗಿ,ಏ.1-ಸಿಎಂ ಯಡಿಯೂರಪ್ಪ ವಿರುದ್ದ ಸಚಿವ ಕೆ.ಎಸ್.‌ಈಶ್ವರಪ್ಪ ಹೈಕಮಾಂಡ್ ದೂರು ನೀಡಿದ್ದಾರೆಂದು ಹೇಳಲಾದ ಕುರಿತು ಟ್ವಿಟ್ ಮಾಡಿರುವ ಮಾಜಿ ಸಚಿವ, ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಜಗಜ್ಜಾಹೀರಾಗಿದೆ ಎಂದು ಬರೆದುಕೊಂಡಿದ್ದಾರೆ.
“ಶಾಸಕರಿಗೆ ಸಚಿವರ ಮೇಲೆ ನಂಬಿಕೆಯಿಲ್ಲ. ಸಚಿವರಿಗೆ ಸಿಎಂ ಮೇಲೆ ನಂಬಿಕೆಯಿಲ್ಲ. ಸಿಎಂ ಗೆ ಹೈಕಮಾಂಡ್ ಮೇಲೆ ನಂಬಿಕೆಯಿಲ್ಲ. ಒಟ್ಟಿನಲ್ಲಿ ಈ ಬಿಜೆಪಿ ಸರಕಾರ ಬಂದರೆ ರಾಜ್ಯದ ಜನರಿಗೆ ಪೀಕಲಾಟ ತಪ್ಪಿದ್ದಲ್ಲ ” ಎಂದು ಲೇವಡಿ ಮಾಡಿದ್ದಾರೆ.