ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಜ್ಜಾಗಿ-ಬಿ.ವಿ.ನಾಯಕ

ರಾಯಚೂರು.ನ.೨೫-ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರಗಳು ಅಧಿಕಾರ ದಿಂದ ಕೆಳಗಿಳಿಸಲು ಹಾಗೂ ಕೋಮುವಾದಿ ಬಿಜೆಪಿಯನ್ನು ರಾಜಕರಣ ದಿಂದ ದೂರವಿಡಲು ಎಲ್ಲರೂ ಶ್ರಮಿಸಬೇಕೆಂದು ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ನಾಯಕ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗಕ್ಕೆ ನೂತನ ಕಾರ್ಯದರ್ಶಿಯಾಗಿ ನೇಮಕವಾದ ಮೌಲಾನಾ ಫರೀದ್ ಖಾನ್ ಅವರ ನೇಮಕ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಬಿಜೆಪಿ ಸರಕಾರಗಳು ಧರ್ಮದ ಆಧಾರದ ಮೇಲೆ ದೇಶ ಒಡಯುವ ಕೆಲಸ ಮಾಡುತ್ತೀವೆ. ದೇಶದ ಇತಿಹಾಸ ಗೊತ್ತಿಲ್ಲದ ಯುವಕರಿಗೆ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ದಲಿತ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಶೋಷಿತ ಸಮುದಾಯಗಳ ಅಭಿವೃದ್ದಿ ಮತ್ತು ಜಾತ್ಯತೀತ ನಿಲುವು ಮತ್ತು ಸಂವಿಧಾನದ ಆಶಯಗಳನ್ನು ರಕ್ಷಣೆ ಕಾಂಗ್ರೆಸ್ ಪಕ್ಷದಿಂದ ಸಾಧ್ಯವೆಂದರು.
ಮುಂದಿನ ೨೦೨೩ನೇ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ ೬ ಕ್ಷೇತ್ರಗಳಲ್ಲಿ ಕಾಂಗ್ರಸ್ ಅಭ್ಯರ್ಥಿಗಳು ಗೆಲ್ಲಿಸುವ ಮೂಲಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಕೈ ಬಲ ಪಡಿಸಬೇಕೆಂದು ಕರೆ ನೀಡಿದರು.
ಕೆಪಿಸಿಸಿ ಕಾರ್ಯದರ್ಶಿ ಎ.ವಸಂತ ಕುಮಾರ ಮಾತನಾಡಿ, ಪಕ್ಷದ ಹುದ್ದೆ ಅಧಿಕಾರವಲ್ಲ, ಸೇವಾ ಮಾಡುವ ಜವಾಬ್ದಾರಿಯಾಗಿದೆ. ಇದನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದು ಸಲಹೆ ನೀಡಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಅಧಿಕಾರದಲ್ಲಿದ್ದು, ಇದರ ವಿರುದ್ದ ಎಲ್ಲರೂ ಒಗ್ಗಟಿನಿಂದ ಹೋರಾಟಕ್ಕಿಳಿಬೇಕೆಂದರು. ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೂ ಸಿಕ್ಕರೂ ಎಲ್ಲರೂ ಒಗ್ಗಟಿನಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ಮುಖಂಡರುಗಳಾದ ರಸೂಲ್ ಸಾಬ್, ನಜೀರ್ ಪಂಜಾಬಿ, ಜಾವೀದ್ ಉಲ್ ಹಕ್ ವಕೀಲರು, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ನೂತನ ಕಾರ್ಯದರ್ಶಿ ಮೌಲಾನಾ ಫರೀದ್ ಖಾನ್ ಮಾತನಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ವಜಾಹತ್ ಸಿದ್ದೀಖಿ, ಮುಖಂಡರಾದ ಅಬ್ದುಲ್ ಕರೀಂ, ಅಸ್ಲಂ ಪಾಷಾ, ಜಹೀರ್ ಅಹ್ಮದ್, ಕೆ.ಇ.ಕುಮಾರ, ಮಹ್ಮದ್ ಶಾಲಂ, ನೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.