ಬಿಜೆಪಿಯದ್ದು ಜನವಿರೋಧಿ ಸರ್ಕಾರ

ಕೋಲಾರ,ಮೇ,೫:ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿರುವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು, ಈಗಾಗಲೆ ನಾಲ್ಕು ಗ್ಯಾರಂಟಿಗಳನ್ನು ನೀಡಲಾಗಿದೆ, ಅದರ ಜೊತೆಗೆ ೫ನೇ ಗ್ಯಾರಂಟಿಯಾದ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಸಹ ಕಲ್ಪಿಸಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ತಿಳಿಸಿದರು.
ವೇಮಗಲ್ ಹೋಬಳಿಯ ಚಂಜಿಮಲೆಯಲ್ಲಿ ಬುಧವಾರ ರಾತ್ರಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಸಿದ್ದರಾಮಯ್ಯರ ಸರ್ಕಾರದಲ್ಲಿ ಬಡವರಿಗಾಗಿ ಜಾರಿ ಮಾಡಲಾತಗಿದ್ದ ಅನ್ನ ಭಾಗ್ಯವನ್ನು ಬಿಜೆಪಿ ಸರ್ಕಾರ ಕಸಿದುಕೊಳ್ಳುವ ಮೂಲಕ ಮಕ್ಕಳಿಗೆ ನೀಡಲಾಗಿದ್ದ ವಿದ್ಯಾರ್ಥಿ ವೇತನವನ್ನು ರದ್ದು ಪಡಿಸಲಾಗಿದೆ ಹಾಗು ರೈತರಿಗಾಗಿ ನೀಡಲಾಗಿದ್ದ ಕೃಷಿ ಹೊಂಡ, ಡ್ರಿಪ್ ಇರಿಗೇಷನ್ ಸಬ್ಸಿಡಿ ಸೇರಿದಂತೆ ಅನೇಕ ಸೌಲಬ್ಯಗಳನ್ನು ಬಿಜೆಪಿ ಸರ್ಕಾರ ಹಾಳು ಮಾಡಿದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲವನ್ನು ಮುಂದುವರೆಸಲಾಗುವುದು ಎಂದರು.
ಬಡವರ ದಿನಬಳಕೆ ವಸ್ತುಗಳಾದ ಅಡುಗೆ ಅನಿಲ ದಿಂದ ಹಿಡಿದು ಕುಡಿಯುವ ಹಾಲು, ಮೊಸರು, ಹಣೆಗೆ ಇಡುವ ಸ್ಟಿಕರ್ ಮೇಲು ಜಿ.ಎಸ್.ಟಿ. ವಿಧಿಸಿ ಬಡವರ ಜೀವನ ದುಸ್ಥರ ಮಾಡಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತಾಗಬೇಕೆಂದರು.
ಪ್ರಧಾನಿ ನರೆಂದ್ರ ಮೋದಿ ರಾಜ್ಯದಲ್ಲಿ ಬಿಜೆಪಿ ಸೋಲುವ ಭೀತಿಯಿಂದ ಪದೇ ಪದೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಡುತ್ತಿದ್ದಾರೆ, ಅವರು ಆಗಮಿಸುತ್ತಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಶೇ.೫-೧೦ ರಷ್ಟು ಮತಗಳು ಹೆಚ್ಚಾಗಲಿವೆ ಎಂದರು. ಅತಿವೃಷ್ಟಿ ಮತ್ತು ಅನಾವೃಷ್ಠಿಯಾದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಮೃತರಾದರು, ಆಗ ರಾಜ್ಯವನ್ನು ಮರೆತ ನರೇಂದ್ರ ಮೋದಿರಿಗೆ ಈಗ ಕರ್ನಾಟಕ ಜ್ಞಾನೋದಯವಾಗಿದೆ, ಕೊರೊನಾ ಸಂದರ್ಭದಲ್ಲಿ ಸಹ ಸಾವಿರಾರು ಸಂಖ್ಯೆಲ್ಲಿ ಜನರು ಸತ್ತಮೇಲೆ ಎಚ್ಚೆತ್ತುಕೊಂಡರು. ಕರ್ನಾಟಕ ಅಭಿವೃಧಿಯನ್ನು ಮರೆತಿದ್ದವರಿಗೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಜ್ಞಾನೋದಯವಾಗಿದೆ ಎಂದು ಟೀಕಿಸಿದರು.
ನನ್ನ ಬಗ್ಗೆ ಟೀಕೆ ಮಾಡುವವರಿಗೆ ಉತ್ತರ ನೀಡುವುದಿಲ್ಲ, ಚುನಾವಣೆ ಮೂಲಕ ಉತ್ತರ ಕೊಡುತ್ತೇನೆ, ಮುಳಬಾಗಿಲಿನಲ್ಲಿ ಶಾಸಕನಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳು ಹಾಗು ದೇವಸ್ಥಾನ, ಮಂದಿರ ಮತ್ತು ಮಸೀದಿಗಳ ಜೀರ್ಣೋದ್ದಾರ ಕಾರ್ಯಗಳಂತೆ ಕೋಲಾರ ಕ್ಷೇತ್ರದಲ್ಲಿಯು ಮುಂದುವರೆಸುತ್ತಾನೆ. ನಾನ್ನ ಸಮಾಜ ಸೇವೆ ಕ್ಷೇತ್ರದಲ್ಲಿ ಮುಂದುವರೆಯುತ್ತದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕಡಗಟ್ಟೂರು ದಯಾನಂದ್, ನಂದಿನಿ ಪ್ರವೀಣ್ ಗೌಡ, ಯೂನಿಯನ್ ನಿರ್ದೇಶಕ ಚಂಜಿಮಲೆ ರಮೇಶ್, ತಿಪ್ಪೇನಹಳ್ಳಿ ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮರ್ ನಗರ ಸಭಾ ಸದಸ್ಯ ಅಂಬರೀಶ್ ಮುಂತಾದವರಿದ್ದರು.