ಬಿಜೆಪಿಯದು ಡರ್ಟಿ ಪಾಲಿಟಿಕ್ಸ್: ಆಯೋಗದ ವಿರುದ್ದವೂ ದೀದಿ ಗರಂ

ಕೊಲ್ಕತ್ತಾ, ಮೇ 2- ಬಿಜೆಪಿಯದು ಡರ್ಟಿ ಪಾಲಿಟಿಕ್ಸ್.ಅದಕ್ಕೆ ಚುನಾವಣಾ ಆಯೋಗ ಸಹಕಾರ ನೀಡಿದೆ. ಒಂದು ರೀತಿ ಆಯೋಗ ಭಯಂಕರವಾದುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಅಡ್ಡದಾರಿಯ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಿ ಅದು ಸಾಧ್ಯವಾಗದೆ ‌ಬಿಜೆಪಿ ಡರ್ಟಿ ರಾಜಕಾರಣವನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಂಡು ಬಿಜೆಪಿ ಪಕ್ಷ ಅಡ್ಡದಾರಿಯ ಮೂಲಕ ಗೆಲುವು ಸಾಧಿಸಲು ನಡೆಸಿದ ಪ್ರಯತ್ನಕ್ಕೆ ರಾಜ್ಯದ ಜನ ಸೂಕ್ತ ಉತ್ತರ ನೀಡಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ

ಸಂಭ್ರಮ ಬೇಡ:

ರಾಜ್ಯದಲ್ಲಿ ಅಭೂತಪೂರ್ವ ಜನಬೆಂಬಲ ನೀಡಿದ್ದಾರೆ ಇದಕ್ಕಾಗಿ ನಾವು ಜನರಿಗೆ ಕೃತಜ್ಞರಾಗಿರುವುದಾಗಿ ಅವರು ಹೇಳಿದ್ದಾರೆ.

ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ತಾವು ಸೋತಿರಬಹುದು.ಆದರೆ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ನಂದಿ ಗ್ರಾಮದ ಜನರು ನೀಡಿದ ತೀರ್ಪನ್ನು ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.

ಪಕ್ಷ ವಿಜಯಪತಾಕೆ ಆರಿಸಿರುವ ಹಿನ್ನಲೆಯಲ್ಲಿ ಯಾರು ಸಂಭ್ರಮ ಆಚರಿಸಬೇಡಿ ಮೊದಲು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡೋಣ ಎಂದು ಅವರು ಮನವಿ ಮಾಡಿದ್ದಾರೆ.

ಸರಳವಾಗಿ ಅಧಿಕಾರ ಸ್ವೀಕಾರ:

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರಳವಾಗಿ ಅಧಿಕಾರ ಸ್ವೀಕಾರ ಮಾಡಿ ಆನಂತರ ರಾಜ್ಯಾದ್ಯಂತ ಸೋಂಕಿತರ ಚಿಕಿತ್ಸೆಗೆ ಮೊದಲು ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ