ಬಿಜೆಪಿ,ಜೆಡಿಎಸ್ ತೊರೆದು ಹಲವರು ಕಾಂಗ್ರೆಸ್‌ಗೆ

ಕೋಲಾರ,ಅ,೩೧- ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮ ಪಂಚಾಯಿತಿಯ ಮಲ್ಲಸಂದ್ರಗ್ರಾಮದ ಹಲವಾರು ಮುಖಂಡರು ಬಿಜೆಪಿ ಮತ್ತು ಜೆ.ಡಿ.ಎಸ್. ಪಕ್ಷವನ್ನು ತೊರೆದು ಶಾಸಕ ಡಾ,ಕೊತ್ತೂರು ಮಂಜುನಾಥ್ , ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಹಾಗೂ ಹಿರಿಯ ದಲಿತ ಮುಖಂಡ ಸಿ.ಎಂ. ಮುನಿಯಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮಲ್ಲಸಂದ್ರ ಗ್ರಾಮದ ಚನ್ನ ಮರಿಯಪ್ಪ, ಚೆನ್ನರಾಯಪ್ಪ, ಮುನಿರಾಜು, ನಾರಾಯಣಪ್ಪ, ರವಿ, ಮುನಿಸ್ವಾಮಿ, ಶಿವರಾಜ, ಅಂಬರೀಶ್ ಮುಂಚಾಮಪ್ಪ, ಮುನಿರಾಜಪ್ಪ, ಮುನೇಗೌಡ, ಕೆ.ನಂಜೇಗೌಡ, ಮಂಜುನಾಥ್, ಸೀನಪ್ಪ, ಕೃಷ್ಣಪ್ಪ, ಕೀರ್ತನ, ಕಾರ್ತಿಕ್ ವೆಂಕಟೇಶ್, ಹುನಮಂತರಾಯ, ಲಕ್ಷ್ಮಣ, ರಾಜಣ್ಣ, ಚೆನ್ನಮರಿಯಪ್ಪ, ವೆಂಟೇಶಪ್ಪ, ಮುನಿಶಾಮಣ್ಣ, ವೆಂಕಟೇಶ್, ಮುನಿಕೃಷ್ಣ, ಗೋವಿಂದಪ್ಪ, ಪ್ರಕಾಶ್ ಹಾಗೂ ಇತರೆ ಮುಖಂಡರು ಸೇರ್ಪಡೆಯಾದರು,
ಈ ಸಂದರ್ಭದಲ್ಲಿ ನರಸಾಪುರ ಎಸ್.ಎಫ್.ಎಸ್.ಸಿ.ಎಸ್. ಅಧ್ಯಕ್ಷ ಖಾಜಿಹಳ್ಳಿ ಮುನಿರಾಜು, ಯೂನಿಯನ್ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ,ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸಿಎಂಎಂ. ಮಂಜುನಾಥ್, ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಬಂಗಾರಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಹಿರಿಯ ಸಹಕಾರಿ ಮಣಿಘಟ್ಟ ಸೊಣ್ಣೆಗೌಡ,ಛತ್ರಕೋಡಿಹಳ್ಳಿ ಮಂಜುನಾಥ್, ಮಂಗಸಂದ್ರ ಶ್ರೀನಿವಾಸ್, ಮಾಜಿ ಗ್ರಾಮಪಂಚಾಯಿತಿಅಧ್ಯಕ್ಷ ಮೈಲಂಡಹಳ್ಳಿ ಮುರಳಿ, ಗ್ರಾಮಾಂತರ ಯುವ ಕಾಂಗ್ರೇಸ್ ಅಧ್ಯಕ್ಷ ನವೀನ್ ಕುಮಾರ್, ರಾಮಸಂದ್ರ ಕುಮಾರ್, ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು,
ಲೋಕಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಘಟಬಂಧನ್ ಕಾರ್ಯತಂತ್ರಕ್ಕೆ ಚಾಲನೆ ನೀಡಲಾಗಿದೆ. ಪಿತೃಪಕ್ಷ, ಚಂದ್ರ ಗ್ರಹಣ ಕಳೆದ ನಂತರ ಧರ್ನುಮಾಸ ಪ್ರಾರಂಭಕ್ಕೆ ಮುನ್ನವೇ ಕಾರ್ಯತಂತ್ರವನ್ನು ಪ್ರಾರಂಭಿಸಲಾಗಿದೆ. ಚುನಾವಣೆಗೆ ಹಲವು ತಿಂಗಳು ಇರುವಾಗಲೇ ಚುನಾವಣೆಗೆ ನಾವು ಸಿದ್ದರಾಗುತ್ತಿದ್ದೇವೆ ಎಂಬ ಸಂದೇಶವನ್ನು ಘಟಬಂಧನ್ ಸಂಘಟನೆ ಮೂಲಕ ನೀಡಲಾಗಿದೆ.
ಇದು ಪ್ರಾರಂಭವಷ್ಟೆ ಮುಂದಿನ ದಿನಗಳಲ್ಲಿ ಇಂಧಹ ಕಾರ್ಯಕ್ರಮಗಳು ದೊಡ್ಡ ಮಟ್ಟದಲ್ಲಿ ನಿರಂತರವಾಗಿ ಮುಂದುವರೆಯಲಿದೆ. ಘಟಬಂಧನ್ ಉಸ್ತುವಾರಿ ವಿಧಾನಸೌಧ ಚುನಾವಣೆಯಲ್ಲಿ ಪೆಟ್ಟು ತಿಂದು ವಿಶ್ರಾಂತಿ ಪಡೆಯುತ್ತಿದ್ದು, ತನ್ನ ಕರಿನೆರಳು ಕೆ.ಹೆಚ್.ಮುನಿಯಪ್ಪ ಅವರ ಮೇಲಿಂದ ಇನ್ನು ಮಾಸುವ ಮುನ್ನವೇ ಘಟಬಂಧನ್ ತನ್ನ ಹೆಡೆಯನ್ನು ಬಿಚ್ಚಲು ಆರಂಭಿಸಿದೆ ಎಂದು ಕಾಂಗ್ರೇಸ್ ವಲಯದಲ್ಲಿ ಕೇಳಿ ಬರುತ್ತಿದೆ.