ಬಿಜೆಪಿಗೆ ಸೇರುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರಿಂದ ಬೆದರಿಕೆಯ ಆರೋಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.18: ನೀವು ಬಿಜೆಪಿಗೆ ಸೇರಿ  ಎಂದು ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟಿದ್ದಾರಲ್ಲದೆ, ಅವರ ಮೇಲೆ ಹಲ್ಲೆ ಮಾಡಿದ್ದಾರೆಂದು ಕೆಪಿಸಿಸಿ ಕೋರ್ಡಿನೇಟರ್ ವಿಷ್ಣುವರ್ಧನ ಬೋಯಪಾಟಿ ಆರೋಪ ಮಾಡಿದ್ದಾರೆ.
ಇಲ್ಲಿನ ಶಾಂತಿನಗರದ ಬೂತ್  ಬೂತ್ ಅಧ್ಯಕ್ಷ ವೆಂಕಟೇಶ್, ಇಟ್ಟಗಿ ಬಟ್ಟಿ ಇಟ್ಟಿದ್ದಾರೆ. ಉತ್ತಮವಾಗಿ ದುಡಿಮೆ ಮಾಡಿಕೊಂಡು ಜೀವನ‌ ನಡೆಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ನೂರಾರು ಬೆಂಬಲಿಗರೊಂದಿಗೆ ಮೇಯರ್ ಅವರನ್ನು ಕರೆದು ಬರ್ತಡೆ ಆಚರಿಸಿಕೊಂಡಿದ್ದ. ನಗರ ಶಾಸಕರಿಗೆ ಕಣ್ಣು ಕೆಂಪಗೆ ಮಾಡಿದೆ. ಅದಕ್ಕಾಗಿ  ಇಲ್ಲಿನ ಬಿಜೆಪಿ ಮುಖಂಡರುಗಳಾದ
ಯು.ಪ್ರಭಾಕರ್, ರಮೇಶ್ ರೆಡ್ಡಿ ಅವರಿಂದ. ಇಟ್ಟಗಿ ಬಟ್ಟಿಯಿಂದ ಧೂಳು ಬರುತ್ತಿದೆಂದು ಪರಿಸರ ಇಲಾಖೆಗೆ ದೂರು ನೀಡಿ ಬಂದ್ ಮಾಡಿಸಿದ್ದಾರೆ‌‌.  ವಿನಾ ಕಾರಣ ಹೀಗೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಠಾಣೆಗೆ ಕರೆದು ಹಲ್ಲೆ ಮಾಡಿ. ನೀವು ಬಿಜೆಪಿ ಸೇರಿ ಬಿಟ್ಟು ಬಿಡುತ್ತೇವೆ ಎಂದಿದ್ದಾರಂತೆ.
ಹೀಗೆ ಮಾಡಿದ್ದನ್ನು ಪ್ರಶ್ನೆ ಮಾಡಲು ಹೋದ ನನಗೂ ಗ್ರಾಮೀಣ ಸಿಪಿಐ ನಿರಂಜನ್ ಮತ್ತು ಪಿಎಸ್ ಐ ತಿಮ್ಮಪ್ಪ ಅವರು ನಿನಗೂ ಅವರಿಗಾದ ಪರಿಸ್ಥಿತಿ ಆಗುತ್ತದೆಂದು ಬೆದರಿಕೆ ಹಾಕುತ್ತಾರೆ. ಪೊಲೀಸರೇ ಹೀಗೆ ಬೆದರಿಕೆ ಹಾಕಿದರೆ ಹೇಗೆ ಎಂದು ಆರೋಪಿಸಿದ್ದಾರೆ.
ಆದರೆ ಈ ಬಗ್ಗೆ ಗ್ರಾಮೀಣ ಠಾಣೆಯ ಸಿಪಿಐ ಅವರು. ಆ ರೀತಿ ಯಾವುದೂ ಇಲ್ಲ. ಇವರು ದೂರು ಕೊಟ್ಟವರ ಮನೆಗೆ ತೆರಳಿ ಬೆದರಿಕೆ ಹಾಕಿದ್ದರಿಂದ. ಅವರು ನೀಡಿದ ದೂರಿನ ಮೇರೆಗೆ ಕರೆಸಿ ವಿಚಾರಣೆ ಮಾಡಿ ಕಳಿಸಿದೆ. ಇದರಲ್ಲಿ ರಾಜಕೀಯ ಸಲ್ಲ ಎಂದಿದ್ದಾರೆ.