ಬಿಜೆಪಿಗೆ ಸಂಪೂರ್ಣ ಬೆಂಬಲ ಇದೆ: ಮಾಜಿ ಶಾಸಕ ನಂಜುಂಡಸ್ವಾಮಿ

ಬಸವಕಲ್ಯಾಣ,ಎ.9- ಇಲ್ಲಿನ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಶರಣು ಸಲಗರ ಅವರಿಗೆ ನಮ್ಮ ದಲಿತ ಸಮುದಾಯದ ಸಂಪೂರ್ಣ ಬೆಂಬಲ ಇದೆ ಎಂದು ಕೊಳ್ಳೇಗಾಲ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ನಂಜುಂಡಸ್ವಾಮಿ ಹೇಳಿದರು.
ಗುರುವಾರ ನಗರದ ಶರಣು ಸಲಗರ ಅವರ ಜನ ಸಂಪರ್ಕ ಕಾರ್ಯಾಲಯದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ ವಿರಚಿತ ಸಂವಿಧಾನದ ಕುರಿತು ಅಪಾರ ಕಾಳಜಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ಪರ ಅನೇಕ ಕಾರ್ಯಕ್ರಮಗಳು ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅಂಬೇಡ್ಕರ ಅವರ ಅನುಯಾಯಿಗಳು ಹಾಗೂ ದಲಿತ ಬಾಂಧವರು ಬಿಜೆಪಿಯನ್ನು ಬೇಶರತ್ತಾಗಿ ಬೆಂಬಲಿಸುತ್ತಿದ್ದಾರೆ ಎಂದರು.
ಕೆಜಿಎಫ್ ಮಾಜಿ ಶಾಸಕರು ಹಾಗೂ ಬಿಜೆಪಿ ನಾಯಕರು ವೈ.ಸಂಪಗಿ ಅವರು ಮಾತನಾಡಿ, ಬಸವಕಲ್ಯಾಣದ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರಿಗೆ ಇಲ್ಲಿನ ದಲಿತ ಸಮುದಾಯ ಅಭೂತಪೂರ್ವವಾಗಿ ಬೆಂಬಲಿಸುವುದರೊಂದಿಗೆ ಅವರಿಗೆ ಗೆಲ್ಲಿಸುವ ಇಚ್ಛೆ ಹೊಂದಿದ್ದಾರೆ. ಶರಣು ಸಲಗರ ಸುಮಾರು 30 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ಖಚಿತ ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಕಲಬುರ್ಗಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು ದಿಪಕ್ ಗಾಯಕವಾಡ, ದಲಿತ ಮುಖಂಡ ಬಾಬು ಟೈಗರ್, ಜಿಲ್ಲಾ ಬಿಜೆಪಿ ಎಸ್‍ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀರಣ್ಣ ಹಲಿಂಗೆ, ಜಿಲ್ಲಾ ಬಿಜೆಪಿ ಎಸ್‍ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಕಾಂತ್ ಹಾರುಗೇರಿ, ಜಿಲ್ಲಾ ಬಿಜೆಪಿ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ಮಹೇಶ್ ಮೋರೆ, ಬಸವಕಲ್ಯಾಣ ನಗರಸಭೆ ಸದಸ್ಯೆ ಲಲಿತಾಬಾಯಿ ಡಾಂಗೆ, ಬಿಜೆಪಿ ಎಸ್‍ಸಿ ಮೋರ್ಚಾ ಮಂಡಲ ಅಧ್ಯಕ್ಷ ಪ್ರಕಾಶ್ ಸುಂಠಾಣೆ, ಎಸ್‍ಸಿ ಮೋರ್ಚಾ ನಗರಾಧ್ಯಕ್ಷರು ಅಶೋಕ್ ಸಿಂಗ್ ಇದ್ದರು.