ಬಿಜೆಪಿಗೆ ಲಸಿಕೆ ಬಗ್ಗೆ ನಂಬಿಕೆ ಇರಲಿಲ್ಲ

 ದಾವಣಗೆರೆ.ಜೂ.೮; ಲಸಿಕೆ ಬಗ್ಗೆ ಬಿಜೆಪಿಗೆ ಅಪನಂಬಿಕೆ ಮತ್ತು ಭಯ ಇತ್ತು. ಹಾಗಾಗಿಯೇ ಜನವರಿಯಲ್ಲೇ ದೇಶಕ್ಕೆ ಲಸಿಕೆ ಬಂದಿದ್ದರು ಪ್ರಧಾನಿ ನರೇಂದ್ರ ಮೋದಿ, ಜಿಲ್ಲೆಯಲ್ಲಿ ಸಂಸದ ಜಿ.ಎಂ.ಸಿದ್ಧೇಶ್ವರ ಮಾರ್ಚ್ ವರಗೆ ಕಾದು ಬಳಿಕ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಡಿ.ಬಸವರಾಜ್ ಆರೋಪಿಸಿದ್ದಾರೆ.ಕೋವ್ಯಾಕ್ಸಿನ್ ಲಸಿಕೆ ಮೂರನೇ ಪರೀಕ್ಷೆ ನಡೆಯದೇ ಜನರ ಮೇಲೆ ಪ್ರಯೋಗ ಮಾಡಲಾಗಿತ್ತು.ಅಗ ಪರೀಕ್ಷೆ ಪೂರ್ಣವಾದ ನಂತರ ಲಸಿಕೆ ಪ್ರಯೋಗ ನಡೆಯಲಿ ಪ್ರಧಾನಿ ಮೋದಿ ಮತ್ತು ಅವರ ಸಂಪುಟ ಸದಸ್ಯರು ಮೊದಲು ಲಸಿಕೆ ಪಡೆಯಲಿ ಎಂದು ಕಾಂಗ್ರೆಸ್ ಹೇಳಿದ್ದು ನಿಜ, ಬಿಜೆಪಿಯವರು ಮೊದಲು ಲಸಿಕೆ ಪಡೆಯದೆ  ಆಶಾ ಕಾರ್ಯಕರ್ತೆರು ಕೋರಾನಾ ವಾರಿಯರ್ಸ್‌ಗೆ ಹಾಕಿಸಿದ್ದರು. ಬಳಿಕ ತೆಗೆದುಕೊಂಡಿದ್ದರು. ಈಗ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಸಂಸದರು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.