ಬಿಜೆಪಿಗೆ ಮಾರಾಟವಾದ ಪ್ರತಾಪಗೌಡಗೆ ಬುದ್ದಿ ಕಲಿಸಿ- ಸಿದ್ದರಾಮಯ್ಯ

ಮಸ್ಕಿ,ಮಾ.೩೦- ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿ ಬಿಜೆಪಿಗೆ ಮಾರಾಟ ವಾಗಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ್ ಅವರಿಗೆ ಮತದಾರರು ಉಪ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕು ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ನಾಮ ಪತ್ರ ಸಲ್ಲಿಸಿದ ನಂತರ ತೇರಿನ ಮನೆ ಹತ್ತಿರ ನಡೆದ ಕಾರ್ಯಕರ್ತರ ಸಭೆ ಯಲ್ಲಿ ಸೋಮವಾರ ಮಾತನಾಡಿದರು. ಕಾಂಗ್ರೆಸ್ ಪಕ್ಷ ದಿಂದ ಎರಡು ಸಲ ಶಾಸಕನಾಗಿ ಆಯ್ಕೆ ಯಾದ ನಂತರ ಹಣದ ಆಸೆಗೆ ಪ್ರತಾಪಗೌಡ ಪಾಟೀಲ್ ಬಿಜೆಪಿಗೆ ಮಾರಾಟ ವಾಗಿದ್ದಾರೆ ಪಕ್ಷಾಂತರಿ ಪ್ರತಾಪಗೌಡ ಪಾಟೀಲ್ ಅವರಿಗೆ ಮತದಾರರು ಉಪ ಚುನಾವಣೆಯಲ್ಲಿ ಮನೆಗೆ ಕಳುಹಿಸ ಬೇಕು ಎಂದರು.
ಆಪರೇಷನ್ ಕಮಲದ ಮೂಲಕ ಹಿಂಭಾಗಿಲು ಮೂಲಕ ಅಧಿಕಾರ ನಡೆಸುತ್ತಿರುವ ಸಿಎಂ.ಯಡಿಯೂರಪ್ಪ ಜನ ಪರ ಯೋಜನೆ ಗಳನ್ನು ಜಾರಿ ಗೊಳಿಸುತ್ತಿಲ್ಲ ಅನ್ನ ಭಾಗ್ಯ ಯೋಜನೆಯಲ್ಲಿ ಪಡಿತರ ಕಡಿಮೆ ಗೊಳಿಸಿ ಬಡವರ ಅನ್ನ ಕಸಿದು ಕೊಂಡಿದ್ದಾರೆ ಬಡವರ ಕಲ್ಯಾಣಕ್ಕೆ ಅನುಷ್ಟಾನ ಗೊಳಿಸಿದ್ದ ನಾನಾ ಭಾಗ್ಯಗಳ ಯೋಜನೆಗಳಿಗೆ ಯಡಿಯೂರಪ್ಪ ಸರಕಾರ ಬ್ರೇಕ್ ಹಾಕಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೆ ದಿನ್ ಇನ್ನು ಬಂದಿಲ್ಲ ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತಂದು ಬಡವರ ಖಾತೆಗೆ ಜಮಾ ಮಾಡಿಸಿಲ್ಲ ನಿರುದ್ಯೋಗಿ ಯುವಕರು ಕೆಲಸ ಕೆಳಿದರೆ ಪಕೋಡಾ ಮಾರಲು ಹೇಳುತ್ತಿದ್ದಾರೆ ರೈತ ವಿರೋದಿ ಕಾನೂನು ಗಳನ್ನು ಜಾರಿಗೆ ತಂದು ರೈತರ ಬದುಕಿಗೆ ಪ್ರಧಾನಿ ಮೋದಿ ಬರೆ ಎಳೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು . ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವು ಕುಮಾರ್, ಶಾಸಕ ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿಕಾರ್ಯಧ್ಯಕ್ಷ ಸಲೀಂ ಅಹ್ಮದ್, ಹನುಮಂತಪ್ಪ ಅಲ್ಕೋಡ್, ಕೆ. ಕರಿಯಪ್ಪ ಸಿಂಧನೂರು, ಅಭ್ಯರ್ಥಿ ಬಸನಗೌಡ ತುರ್ವಿಹಾಳ ಮಾತನಾಡಿದರು.