ಬಿಜೆಪಿ ಮರಳಿ ಅಧಿಕಾರಕ್ಕೆ ಮೋದಿ ವಿಶ್ವಾಸ

ನವದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ೭೭ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೇರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ನವದೆಹಲಿ.ಆ.೧೫-. ಪ್ರಧಾನಿ ನರೇಂದ್ರಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಹೋರಾಟದ ಬಗ್ಗೆಯೂ ಪ್ರಸ್ತಾಪಿಸಿ ೨೦೨೪ರ ಲೋಕಸಭಾ ಚುನಾವಣೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ತುಷ್ಠೀಕರಣದ ವಿರುದ್ಧ ಹೋರಾಟವಾಗಲಿದೆ ಎಂದು ಬಣ್ಣಿಸಿ ಪರಿವಾರವಾದಿಗಳ ಪಕ್ಷಗಳನ್ನು ಹಿಂದಿಕ್ಕಿ ಬಿಜೆಪಿ ಮತ್ತೆ ಮರಳಿ ಅಧಿಕಾರದ ಗದ್ದುಗೆ ಏರಲಿದೆ ಎಂದರು. ರಾಜಸ್ತಾನ ಶೈಲಿಯ ಬಹುವರ್ಣದ ರುಮಾಲು ಧರಿಸಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಸತತ ೧೦ ನೇ ಬಾರಿ ೭೭ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ದೇಶದ ಜನರ ಆರ್ಶೀವಾದ ಇದ್ದರೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು ನಾವೇ ಮರಳಿ ಅಧಿಕಾರ ಹಿಡಿಯುತ್ತೇವೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ದೇಶದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನಿಷ್ಪಕ್ಷಪಾತವನ್ನು ಬಲಪಡಿಸುವ ಅಗತ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ ನರೇಂದ್ರಮೋದಿ ಅವರು, ಭ್ರಷ್ಟಾಚಾರಕ್ಕಿಂತ ದೊಡ್ಡ ಕಾಯಿಲೆ ಮತ್ತೊಂದಿಲ್ಲ ಎಂದರು. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಠೀಕರಣದ ಕಾಯಿಲೆಗಳು ದೇಶವನ್ನು ಅಭಿವೃದ್ಧಿಯಲ್ಲಿ ಹಿಂದಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳುವ ಮೂಲಕಪರಿವಾರವಾದಿ ವಿಪಕ್ಷಗಳ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆಮೀಸಲಿಟ್ಟಿದ್ದ ಆಸನವನ್ನು ಗಮನಿಸಿ ರಾಜಕೀಯ ವಿಷಯವನ್ನು ಪ್ರಸ್ತಾಪಿಸಿದವರು, ಖಾಲಿ ಕುರ್ಚಿ ದೇಶಕ್ಕೆ ಯಾವ ಸಂದೇಶ ಕಳುಹಿಸುತ್ತಿದೆ. ಗೈರು ಹಾಜರಿ ಆರೋಗ್ಯಕರ ಬೆಳವಣಿಗೆಯಲ್ಲ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿ ಇವರು ಏನೇ ಮಾಡಲಿ ಲೋಕಸಭಾ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಕುಟುಂಬ ರಾಜಕಾರಣದಿಂದ ಕಳೆದ ೭೫ ವರ್ಷಗಳಲ್ಲಿ ಹಲವು ಸಮಸ್ಯೆಗಳು ನಮ್ಮ ವ್ಯವಸ್ಥೆಯ ಭಾಗವಾಗಿದೆ. ಕುಟುಂಬದಿಂದ, ಕುಟುಂಬಕ್ಕಾಗಿ ಕೆಲ ಪಕ್ಷಗಳು ಇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ನ್ನು ಹೆಸರಿಸದೆ ಗೇಲಿ ಮಾಡಿದರು. ಪ್ರಧಾನಿ ನರೇಂದ್ರಮೋದಿ ಅವರು ೨ನೇ ಅವಧಿಗೆ ಪ್ರಧಾನಿಯಾಗಿ ಕೊನೆಯ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಸಾಧನೆಗಳ ಮೇಲೆ ಮತ್ತೆ ಅಧಿಕಾರಕ್ಕೆ ಮರಳುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ದೇಶದ ಅಭಿವೃದ್ಧಿಯ ಹಾದಿಯಲ್ಲಿ ಬರಬಹುದಾದ ಏಕೈಕ ಅಡಚಣೆ ಎಂದರೆ ಭ್ರಷ್ಟಾಚಾರ ಕುಟುಂಬ ರಾಜಕಾರಣ ಮತ್ತು ತುಷ್ಠೀಕರಣ ಇವೆಲ್ಲವನ್ನು ಹಿಮ್ಮೆಟ್ಟಿಸಿ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿದ್ದೇವೆ ಎಂದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ತುಷ್ಠೀಕರಣದ ವಿರುದ್ಧ ಹೋರಾಡಬೇಕಿದೆ. ಭ್ರಷ್ಟಾಚಾರದ ವಿರುದ್ಧದ ವಾತಾವರಣವನ್ನು ಸೃಷ್ಟಿಸಬೇಕಿದೆ ಎಂದು ಅವರು ಹೇಳಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸ್ವಜನ ಪಕ್ಷಪಾತವನ್ನು ತೊಡೆದು ಹಾಕುವುದು ಅವಶ್ಯಕ ಎಂದರು. ಭಾರತ ಹೊಸ ಆತ್ಮವಿಶ್ವಾಸ ಮತ್ತು ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯ ” ತ್ರಿವಳಿ” ಗಳು ದೇಶದ ಎಲ್ಲಾ ಕನಸುಗಳನ್ನು ನನಸಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ. ಯುವಶಕ್ತಿಯಿಂದಲೇ ದೇಶದ ಪ್ರಗತಿ ಸಾಧ್ಯ ಎಂದು ಪ್ರತಿಪಾದಿಸಿದ ಪ್ರಧಾನಿ, ಯುವಶಕ್ತಿಯಿಂದಲೇ ಭಾರತ ವಿಶ್ವ ಗುರುವಾಗುವ ಕಾಲ ಬಂದಿದೆ. ಈ ಅವಕಾಶವನ್ನು ಬಳಸಿಕೊಂಡು ಯುವಕರು ಕನಸನ್ನು ನನಸು ಮಾಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಾಧ್ಯವಾದರೆ ( iಜಿs ) ಮತ್ತು ಆದರೆ ( buಣs ) ಆತ್ಮವಿಶ್ವಾಸ ಹೆಚ್ಚಿಸಿದೆ.ಈ ಅವಕಾಶವನ್ನು ನಾವು ತಪ್ಪಿಸಿಕೊಳ್ಳಬಾರದು. ಭಾರತದ ಉದಯ ಮತ್ತು ಅಭಿವೃದ್ಧಿ ತಂತ್ರಜ್ಞಾನ ಚಾಲಿತವಾಗಿದೆ. ತಂತ್ರಜ್ಞಾನ, ಪ್ರತಿಭೆಯೊಂದಿಗೆ, ಭಾರತ ಜಾಗತಿಕ ವೇದಿಕೆಯಲ್ಲಿ ಹೊಸ ಪಾತ್ರ ಮತ್ತು ಪ್ರಭಾವ ಹೊಂದಿದೆ ಎಂದಿದ್ದಾರೆ. ಭಾರತದ ಅತ್ಯಂತ ದೊಡ್ಡ ಸಾಮರ್ಥ್ಯವೆಂದರೆ ನಂಬಿಕೆ. ಸರ್ಕಾರದ ಮೇಲೆ ಜನರ ನಂಬಿಕೆ, ದೇಶದ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಿದೆ. ಭಾರತದ ಮೇಲೆ ವಿಶ್ವದ ನಂಬಿಕೆಗೆ ಪೂರಕವಾಗಿದೆ ಎಂದಿದ್ದಾರೆ. ಮುಗಿದ ಸರಣಿ ಸ್ಫೋಟದ ಯುಗ ದೇಶದಲ್ಲಿ ಸರಣಿ ಸ್ಫೋಟಗಳ ಯುಗ ಮುಗಿದಿದೆ. ಇಂದು ದೇಶದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಇಳಿಕೆ ಕಾಣುತ್ತಿದೆ. ನಕ್ಸಲ್ ಪೀಡಿತ ಪ್ರದೇಶಗಳೂ ತೀವ್ರ ಬದಲಾವಣೆ ಕಂಡಿವೆ ಎಂದು ಅವರು ಹೇಳಿದ್ದಾರೆ. ಭಾರತ ಈಗ ನಿಲ್ಲುವುದಿಲ್ಲ ಎಂದು ಜಾಗತಿಕ ತಜ್ಞರು ಹೇಳಿದ್ದಾರೆ, ಎಲ್ಲಾ ರೇಟಿಂಗ್ ಏಜೆನ್ಸಿಗಳು ದೇಶವನ್ನು ಹೊಗಳುತ್ತಿವೆ. ಬದಲಾಗುತ್ತಿರುವ ಜಗತ್ತನ್ನು ರೂಪಿಸುವಲ್ಲಿ ಭಾರತೀಯ ಜನರ ಸಾಮರ್ಥ್ಯಗಳು ಸ್ಪಷ್ಟವಾಗಿವೆ ಎಂದು ಹೇಳಿದ್ದಾರೆ. ೨೦೧೪ರಲ್ಲಿ ದೇಶವನ್ನು ಮುನ್ನಡೆಸಲು, ಸ್ಥಿರ ಮತ್ತು ಬಲವಾದ ಸರ್ಕಾರ ಬೇಕು ಎಂದು ಜನರು ನಿರ್ಧರಿಸಿದ್ದರು.ಅದರ ಫಲ. ಭಾರತ ಅಸ್ಥಿರತೆಯ ಯುಗದಿಂದ ಮುಕ್ತವಾಗಿ ಅಭಿವೃದ್ದಿಯ ಹಾದಿಯಲ್ಲಿ ಸಾಗಿದೆ ಎಂದಿದ್ದಾರೆ. ನೇಷನ್ ಫಸ್ಟ್ : ’ನೇಷನ್ ಫಸ್ಟ್’ ಎಂಬುದು ನರ್ಕಾರದ ನಮ್ಮ ನೀತಿಗಳ ಮೂಲಾಧಾರವಾಗಿದೆ. ೨೦೧೪ ಮತ್ತು ೨೦೧೯ ರಲ್ಲಿ ಜನರು ಅಂತಹ ಸರ್ಕಾರವನ್ನು ರಚಿಸಲು ಅವಕಾಶ ಮಾಡಿಕೊಟ್ಟರು, ಇದು ಸುಧಾರಣೆಗಳನ್ನು ತರಲು ಶಕ್ತಿ ನೀಡಿದೆ ಎಂದು ತಿಳಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ೨೦೦ ಕೋಟಿ ಲಸಿಕೆ ನೀಡಿದ್ದೇವೆ. ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಅದನ್ನು ಸಾಧ್ಯವಾಗಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ವೇಳೆ ಸಂಪುಟ ಸಚಿವರು, ರಾಜಕೀಯ ಮುಖಂಡರು, ಮೂರು ಸೇವಾ ಮುಖ್ಯಸ್ಥರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಣಿಪುರದಲ್ಲಿ ಶಾಂತಿಗೆ ಒತ್ತು ಮಣಿಪುರದಲ್ಲಿ ಶಾಂತಿಯ ಮೂಲಕ ಪರಿಹಾರದ ಮಾರ್ಗ ಕಂಡುಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಮಣಿಪುರದಲ್ಲಿ ಪರಿಹಾರಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ ಮತ್ತು ಅದನ್ನು ಮುಂದುವರೆಸುತ್ತವೆ ಎಂದು ಹೇಳಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಮಣಿಪುರ ಹಿಂಸಾಚಾರದ ಅಲೆಗೆ ಸಾಕ್ಷಿಯಾಗಿದೆ.. ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.ಅಲ್ಲಿನ ತಾಯಿ ಮತ್ತು ಸಹೋದರಿಯರಿಗೆ ಅವಮಾನವಾಯಿತು. ಆದರೆ, ನಿಧಾನವಾಗಿ ಈ ಪ್ರದೇಶದಲ್ಲಿ ಶಾಂತಿ ಮರಳುತ್ತಿದೆ. ಭಾರತ ಮಣಿಪುರದೊಂದಿಗೆ ನಿಂತಿದೆ” ಎಂದಿದ್ದಾರೆ ಎಲ್ಲ ವಲಯಕ್ಕೆ ಆದ್ಯತೆ ಬಾಹ್ಯಾಕಾಶದಿಂದ ಹಿಡಿದು ಆಳ ಸಮುದ್ರದ ಕಾರ್ಯಾಚರಣೆಗಳು, ವಂದೇ ಭಾರತ್ ರೈಲುಗಳು, ಎಲೆಕ್ಟ್ರಿಕ್ ಬಸ್ಸುಗಳು, ಮೆಟ್ರೋ ರೈಲುಗಳು, ಗ್ರಾಮಗಳು ಇಂಟರ್ನೆಟ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆ ಸೇರಿದಂತೆ ಪ್ರತಿ ವಲಯದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರದಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಭಾರತ ತನ್ನ ಗುರಿಯತ್ತ ಸಾಗುತ್ತಿದೆ. ಈ ಸರ್ಕಾರ ಅಡಿಪಾಯ ಹಾಕುವ ಯೋಜನೆಗಳನ್ನು ಉದ್ಘಾಟಿಸುತ್ತದೆ. ದೊಡ್ಡ ಮತ್ತು ದೂರದ ಗುರ ಹೊಂದಿದ್ದು ಅವುಗಳನ್ನು ಈಡೇರಿಸುವ ಕಡೆಗೆ ಗಮನ ಹರಿಸಿದ್ದೇವೆ ಎಂದಿದ್ದಾರೆ ಅಮೃತ ಮಹೋತ್ಸವ ಸಂಪನ್ನ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ಸಂಪನ್ನ ಗೊಂಡಿದೆ. ಸ್ವಾತಂತ್ರ್ಯದ ೭೫ ನೇ ವಾರ್ಷಿಕೋತ್ಸವದ ಸ್ಮರಣಾರ್ಥ ೨೦೨೧ ರಲ್ಲಿ ಪ್ರಾರಂಭವಾಗಿದ್ದ ಆವರಣೆ ೨೦೨೩ ರ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಭಾಷಣದ ಮೂಲಕ ಮುಕ್ತಾಯವಾಗಿದೆ. ಬಾಕ್ಸ್ ೧ ೩ನೇ ಆರ್ಥಿಕತೆ ದೇಶ ಮುಂದಿನ ಐದು ವರ್ಷಗಳಲ್ಲಿ ಭಾರತ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯ ದೇಶವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಗ್ಯಾರಂಟಿ ನೀಡಿದ್ದಾರೆ. ೨೦೪೭ ರಲ್ಲಿ ದೇಶ ತನ್ನ ೧೦೦ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದಾಗ, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಂಪುಕೋಟೆಯ ಮೇಲೆ ೭೭ನೇ ಸ್ವಾಂತತ್ರೊತ್ಸವದ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಜನರ ಸಬಲೀಕರಣ ಮತ್ತು ದೇಶದ ಅಭಿವೃದ್ಧಿಗೆ ಮಾಡಿದ ವಿವಿಧ ಪ್ರಯತ್ನಗಳು ಭಾರತ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ ಎಂದಿದ್ಸಾರೆ. “ಭಾರತ ವಿವಿಧ ಗುರಿಗಳನ್ನು ಪೂರೈಸುವಲ್ಲಿ ಯಶಸ್ಸಿನ ಹಾದಿಯಲ್ಲಿದೆ. ಬಡತನ ನಿರ್ಮೂಲನೆಯಲ್ಲಿ ತಮ್ಮ ಸರ್ಕಾರದ ಪ್ರಯತ್ನ ಎತ್ತಿ ಹಿಡಿದ ಪ್ರಧಾನಿ, ಕಳೆದ ಐದು ವರ್ಷಗಳಲ್ಲಿ ಕೇವಲ ೧೩.೫ ಕೋಟಿ ಬಡವರು ಬಡತನದಿಂದ ಹೊರಬಂದು ನವ-ಮಧ್ಯಮ ಮತ್ತು ಮಧ್ಯಮ ವರ್ಗದ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಮತ್ತು ಮೂವರು ಸೇನಾ ಮುಖ್ಯಸ್ಥರು. ಸೇರಿದಂತೆ ೧೮೦೦ ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು. ಪ್ರಧಾನಿ ರಾಷ್ಟ್ರಧ್ವಜಾರೋಹಣ ಮಾಡಿದ ತಕ್ಷಣ, ಭಾರತೀಯ ವಾಯುಪಡೆಯ ಎರಡು ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ಗಳು ಮಾರ್ಕ್-III ಧ್ರುವ್ ಮೂಲಕ ಸ್ಥಳದಲ್ಲಿ ಹೂವಿನ ದಳಗಳನ್ನು ಸುರಿಸಲಾಯಿತು. ೧೮೦೦ ವಿಶೇಷ ಆಹ್ವಾನಿತರು ದೇಶದ ವಿವಿಧ ರಾಜ್ಯಗಳ ವಿವಿಧ ವೃತ್ತಿಗಳ ಸುಮಾರು ೧,೮೦೦ ಜನರು ಕಾರ್ಯಕ್ರಮ ಶುಶ್ರೂಷಕರು, ರೋಮಾಂಚಕ ಗ್ರಾಮಗಳ ಸರಪಂಚ್‌ಗಳು, ಶಿಕ್ಷಕರು, ರೈತರು ಮತ್ತು ಮೀನುಗಾರರನ್ನು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಹ್ವಾನಿತರಾಗಿದ್ದರು ರಾಷ್ಟ್ರೀಯ ಯುದ್ಧ ಸ್ಮಾರಕ, ಇಂಡಿಯಾ ಗೇಟ್, ನವದೆಹಲಿ ರೈಲು ನಿಲ್ದಾಣ, ಪ್ರಗತಿ ಮೈದಾನ ಮತ್ತು ರಾಜ್ ಘಾಟ್ ಈ ತಾಣಗಳಲ್ಲಿ ಸೇರಿವೆ. ರಕ್ಷಣಾ ಸಚಿವಾಲಯವು ಮೈ ಗೌ ಪೋರ್ಟಲ್‌ನಲ್ಲಿ ಆಗಸ್ಟ್ ೧೫-೨೦ ರಿಂದ ಆನ್‌ಲೈನ್ ಸೆಲ್ಫಿ ಸ್ಪರ್ಧೆಯನ್ನು ನಡೆಸುತ್ತಿದೆ.