ಬಿಜೆಪಿಗೆ ಮತ ನೀಡಿ ಸದೃಢ ಸರ್ಕಾರ ರಚಿಸಲು ಕೇಂದ್ರ ಸಚಿವೆ ಸ್ಮತಿ ಇರಾನಿ  ಮನವಿ

ದಾವಣಗೆರೆ.ಮೇ.೮: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಮತದಾರರು ಭಾರತೀಯ ಜನತಾ ಪಾರ್ಟಿಯ ಕಮಲಕ ಗುರುತಿಗೆ ಮತ ನೀಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಕರೆ ನೀಡಿದರು.ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ರೋಡ್ ಷೋನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಮತಗಟ್ಟೆಗೆ ಬನ್ನಿ ಪ್ರತಿಯೊಬ್ಬರು ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಅಲ್ಲದೇ ಕಾಂಗ್ರೆಸ್ಸಿನ ಒಡೆದಾಳುವ ನೀತಿಯ ವಿರುದ್ಧ ಬಿಜೆಪಿ ಎಲ್ಲರನ್ನು ಬೆಸೆಯುವ ಕರ್ಮಣೆ ರಾಜಕೀಯ ಮಾಡುತ್ತಿದೆ ಎಂದರು.ಪ್ರಧಾನ ಮಂತ್ರಿ ನರೇಂದ್ರ ಮಂತ್ರಿ ಅವರ ರೋಡ್ ಶೋನಲ್ಲಿ ಬೆಂಗಳೂರಿನಲ್ಲಿ 30 ಕಿಲೋಮಿಟರ್ ಉದ್ದಕ್ಕೂ ಭಾರೀ ಜನಸ್ತೋಮ ಸೇರಿದ್ದನ್ನು ಗಮನಿಸಿದರೆ ಎಲ್ಲರಿಗೂ ಆಶ್ಚರ್ಯ ಆಗುತ್ತದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅಲ್ಲದೇ ದಾವಣಗೆರೆಯಲ್ಲಿ ಇಲ್ಲಿಯ ಜನತೆಯನ್ನು ನೋಡಿದರೆ ನನಗೆ ಸಂತೋಷವಾಗಿದೆ ಎಂದು ಹೇಳಿದರು.ಈ ವೇಳೆ ಸಂಸದ ಡಾ.ಜಿಎಂ.ಸಿದ್ದೇಶ್ವರ್, ಉತ್ತರವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಲೋಕಿಕೆರೆನಾಗರಾಜ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಜಿ.ಅಜಯ್‌ಕುಮಾರ್, ಯಶವಂತರಾವ್‌ ಜಾಧವ್ ಇತರರು ಇದ್ದರು.