
ಬೆಂಗಳೂರು,ಮೇ.೩- ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡ್ಯೊಯುವ ಕಾರ್ಯಮಾಡುತ್ತಿದ್ದು, ಇದು ದೇಶವೇ ಮೆಚ್ಚುವಂತ ಕೆಲಸವಾಗಿದೆ ಬಿಜೆಪಿಗೆ ಮತ ನೀಡುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸುವಂತೆ ಸರ್ವಜ್ಞ ನಗರ ಕ್ಷೇತ್ರದ
ಬಿಜೆಪಿ ಅಭ್ಯರ್ಥಿ ಪದ್ಮನಾಭರೆಡ್ಡಿ ಅವರು ಮನವಿ ಮಾಡಿದರು.
ಸರ್ವಜ್ಞನಗರ ಕ್ಷೇತ್ರದ ಸೇವಾನಗರ,ಜೀವನಹಳ್ಳಿ,ಇಂಡಿನ್ ಆಯಿಲ್,ಅಯ್ಯಪ್ಪನಗರ,ಜೈ ಭರತ್ ನಗರ,ಸುಬ್ಬಣಪಾಳ್ಯ ಸೇರಿದಂತೆ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿ ಮಾತನಾಡಿದರು.
ನರೇಂದ್ರ ಮೋದಿಯವರ ಅಭಿವೃದ್ಧಿ ಯೋಜನೆಗಳು ಜನಪರವಾಗಿ ಮನ್ನಣೆ ಗಳಿಸಿವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅವರು ಮಾಡಿರುವ ಯೋಜನೆಗಳು ಎಲ್ಲಾ ವರ್ಗದ ಜನರಿಗೆ ಮೆಚ್ಚುಗೆ ಗಳಿಸಿವೆ. ಕೇಂದ್ರ ಸರ್ಕಾರ ಬಡವರ ಬಗ್ಗೆ ವಿಶೇಷ ಚಿಂತನೆ ಹೊಂದಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಜನರಿಗೆ ಸಹಕಾರ ನೀಡಿವೆ ಎಂದರು.
ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪರಿಣಾಮ ಕಾರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬಿಜೆಪಿ ಬೆಂಬಲಿಸುವಂತೆ ಕೋರಿದರು.
ಸರ್ವಜ್ಞನಗರ ಕ್ಷೇತ್ರದಲ್ಲಿ ಜನಪರ ಕಾರ್ಯಕ್ರಮ ಮಾಡಲು ಹಾಗೂ ಉತ್ತಮ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಬಿಜೆಪಿ ಪಕ್ಷದ ಅಭ್ಯರ್ಥಿಗೆ ಅಮೂಲ್ಯ ಮತ ನೀಡುವಂತೆ ಕೋರಿದರು.
ಕ್ಷೇತ್ರದಲ್ಲಿ ಬದಲಾವಣೆ ಬಯಸಿರುವ ಮತದಾರರು ನನಗೆ ಉತ್ತಮ ಬೆಂಬಲ ನೀಡುತ್ತಿದ್ದು, ನನಗೆ ಗೆಲುವಿನ ಶ್ರೀರಕ್ಷೆಯಾಗಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಬಿ ಗೋವಿಂದರಾಜು,ಮುಖಂಡರಾದ ಎಂ.ಎನ್.ರೆಡ್ಡಿ, ಮಂಡಲದ ಅಧ್ಯಕ್ಷ ಮುನಿರಾಜು ಕಾರ್ಣಿಕ್, ಉಪಸ್ಥಿತರಿದ್ದರು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದ್ಮನಾಭರೆಡ್ಡಿ ಅವರು ಸರ್ವಜ್ಞನಗರ ಕ್ಷೇತ್ರದ ಸೇವಾನಗರ ವಾರ್ಡನ ವಿವಿಧೆಡೆ ಪ್ರಚಾರ ನಡೆಸಿದರು.