ಬಿಜೆಪಿಗೆ ಜನಾರ್ಧನರೆಡ್ಡಿ ಕೊಡುಗೆ ಬಾಳಾ ಇದೆ: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.01: ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರು ಬಿಜೆಪಿ ಪಕ್ಷದ ಬಗ್ಗೆ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಬಿಜೆಪಿಗೆ ಜನಾರ್ದನ ರೆಡ್ಡಿ ಅವರ ಕೊಡುಗೆ ಬಾಳ ಇದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ರಾಜ್ಯೋತ್ಸವ ಸಮಾರಂಭದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಿಜೆಪಿ ಮೇಲೆ‌ ಮುನಿಸು ವಿಚಾರದ ಬಗ್ಗೆ ಪ್ರತಿಕ್ರಿಯಿಸಿ.ಅವರು  ಯಾಕೆ ಹಾಗೆ ಮಾತಾಡಿದ್ದಾರೆ ಗೊತ್ತಿಲ್ಲ ಅವರ ಮನವೊಲಿಸುವ ಕೆಲಸ ಮಾಡ್ತೀವಿ. ಪಕ್ಷ ಕಟ್ಟುವಲ್ಲಿ ಜನಾರ್ದನ ರೆಡ್ಡಿ ಪಾತ್ರ ಅಪಾರವಾಗಿದೆ ಅವರನ್ನು ಪಕ್ಷ  ತಿರಸ್ಕಾರ ಮಾಡಲ್ಲ. ಹಿಂದೆಯೂ ಮತ್ತು ಈಗಲೂ ಮಾನಸಿಕವಾಗಿ ಜನಾರ್ದನ ರೆಡ್ಡಿ ಅವರು  ಬಿಜೆಪಿಯಲ್ಲಿದ್ದಾರೆಂದರು.
 ಬಿಜೆಪಿ ಎಲ್ಲರ ಪಕ್ಷ:
ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳದ ವಿಚಾರದಲ್ಲಿ ವ್ಯಂಗ್ಯವಾಡಿದವರಿಗೆ ಈಗಾಗಲೇ ಉತ್ತರ ಸಿಕ್ಕಿದೆ. ಜಗತ್ತೇ ಒಂದಾಗಿ ಮೀಸಲಾತಿ ವಿಚಾರದಲ್ಲಿ ಶ್ರೀರಾಮುಲು ಕೈಯಲ್ಲಿ ಅಗಲ್ಲವೆಂದಿದ್ರು.
ಬಿಜೆಪಿ ಬ್ರಾಹ್ಮಣ ಮತ್ತು ಲಿಂಗಾಯತರ ಪಕ್ಷವೆನ್ನುತ್ತಿದ್ರು. ಆದ್ರೇ ಈ‌ ಮೀಸಲಾತಿ ಹೆಚ್ಚಳದ ಮೂಲಕ ಬಿಜೆಪಿ ಎಲ್ಲರ ಪಕ್ಷ ಎನ್ನುವುದು ಸಾಬೀತಾಗಿದೆಂದರು.