ಬಿಜೆಪಿಗೆ ಚುನಾವಣೆಯಲ್ಲಿ ತಕ್ಕಪಾಠ

ದೇವದುರ್ಗ,ಮಾ.೩೦- ಬಿಜೆಪಿಯಿಂದ ಗಂಗಾಮತಸ್ಥರ ಸಮಾಜಕ್ಕೆ ಅನ್ಯಾಯವಾಗಿದೆ. ಕಳೆದ ಚುನಾವಣೆಯಲ್ಲಿ ಗಂಗಾಮತಸ್ಥ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದಾಗಿ ವಚನ ನೀಡಿ, ಬೇಡಿಕೆ ಈಡೇರಿಸದೆ ಬಿಜೆಪಿ ವಂಚನೆ ಮಾಡಿದೆ ಎಂದು ಗಂಗಾಮತಸ್ಥ ಸಮಾಜದ ತಾಲೂಕ ಅಧ್ಯಕ್ಷ ನಾಗಪ್ಪ ಗಿರಣಿ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಗುರುವಾರ ಮಾತನಾಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿಂದಗಿ ಮತ ಕ್ಷೇತ್ರದಲ್ಲಿ ಎಸ್‌ಟಿಗೆ ಸೇರ್ಪಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಹಾಗೂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ವರಿಷ್ಠರು ವಾಗ್ದಾನ ಮಾಡಿದ್ದರು. ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಸಮಾಜ ಮುಖಂಡರು ಸಭೆ ಕರೆದು ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಸಲಹೆ ಪಡೆಯಲಾಗುವುದು. ತಾಲೂಕಿನಲ್ಲಿ ೨೨ ಸಾವಿರಕ್ಕೂ ಅಧಿಕ ಗಂಗಾಮತಸ್ಥರ ಮತಗಳು ಇವೆ. ಸೋಲು-ಗೆಲುವಿನಲ್ಲಿ ಸಮಾಜ ನಿರ್ಣಾಯಕ ಪಾತ್ರವಹಿಸುತ್ತದೆ. ನಮ್ಮ ಸಮಾಜಕ್ಕೆ ರಾಜಕೀಯವಾಗಿ ಸ್ಥಾನಮಾನ ಕಲ್ಪಿಸುವ ಹಾಗೂ ಎಸ್.ಟಿ ಸೇರ್ಪಡೆ ಮಾಡುವ ಪಕ್ಷಕ್ಕೆ ಬೆಂಬಲಿಸಲಾಗುವುದು ಎಂದು ಹೇಳಿದರು.
ಈಸಂದರ್ಭದಲ್ಲಿ ನಾರಾಯಣ ಗೌಡ, ನರಸಪ್ಪ ಅಂಚೆಸೂಗೂರು, ಲಕ್ಷ್ಮಣ ಹೊನ್ನಕಾಟಮಳ್ಳಿ. ಗೋಪಾಲಕೃಷ್ಣ ಅಂಬಿಗೇರ, ಶಿವರಾಜ ಅಂಬಿಗೇರ ಇದ್ದರು.