ಬಿಜೆಪಿಗೆ ಕೈಕೊಟ್ಟು ಜೆಡಿಎಸ್ ಪಾಲಾದ ಮಶಿಹಾಳ ಗ್ರಾ.ಪಂ.ಸದಸ್ಯ

ಗಬ್ಬೂರು,ಮಾ.೧೨- ಕೆಲ ದಿನಗಳಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಹೀರೆಬೂದುರು ಗ್ರಾಮ ಪಂಚಾಯತಿ ಸದಸ್ಯರಾದ ಮಹೇಶ ಸಾಹುಕಾರ್ ಮಶಿಹಾಳ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ದೇವದುರ್ಗ ವಿಧಾನಸಭೆಯ ಜೆಡಿಎಸ್ ಅಭ್ಯರ್ಥಿಯಾದ ಜಿ.ಕರೇಮ್ಮ ನಾಯಕಿ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬುಡ್ಡನಗೌಡ ಜಾಗಟಗಲ್ ಅವರ ಸಮ್ಮುಖದಲ್ಲಿ ಹೀರೆಬೂದುರು ಗ್ರಾಮದಲ್ಲಿ ನಡೆದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿಗೆ ಕೈಕೊಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಶಾಸಕ ಶಿವನಗೌಡ ನಾಯಕರಿಗೆ ನನಗೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ ಅವರ ಹಿಂಬಾಲಕರಿಂದ ನಾನು ಬಹಳ ತೊಂದರೆಗಳನ್ನು ಅನುಭವಿಸಿದ್ದೇನೆ ಆದ ಕಾರಣ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಹೀರೆಬೂದುರು ಗ್ರಾಮ ಪಂಚಾಯತಿ ಸದಸ್ಯರಾದ ಮಹೇಶ ಸಾಹುಕಾರ್ ಮಶಿಹಾಳ ಅವರು ಸಂಜೆವಾಣಿ ಪತ್ರಿಕೆಗೆ ತಿಳಿಸಿದರು.