
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,3- ನಗರದ ಬಿಜೆಪಿ ಅಭ್ಯರ್ಥಿಗೆ ಆರ್ಯ ವೈಶ್ಯ ಸಮಾಜದ ಬಹುತೇಕ ಬೆಂಬಲ ಇದೆ ಎಂಬುದನ್ನು ಅಸ ಸಮಾಜದ ಮುಖಂಡರು ಇಂದು ಬೆಳಿಗ್ಗೆ ನಗರದ ಅಗಡಿ ಮಾರೆಪ್ಪ ಕಾಂಪೌಂಡ್ ನಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಗಾಲಿ ಸೋಮಶೇಖರ ರೆಡ್ಡಿ ಅವರಿಂದ ನಡೆದ ಮತ ಯಾಚನೆಯ ಸಮಾರಂಭದಲ್ಲಿ ವ್ಯಕ್ತವಾಗಿದೆ.
ಸಬವೆಯಲ್ಲಿ ಸಮಾಜದ ಮುಖಂಡರುಗಳಾದ ಡಾ.ಡಿ.ಎಲ್.ರಮೇಶ್ ಗೋಪಾಲ್, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಪೋಲಾ ರಾಧಕೃಷ್ಣ, ಜಯಪ್ರಕಾಶ್ ಜೆ ಗುಪ್ತ, ರಾಮಕೃಷ್ಣ, ಸುಬ್ಬುರಾಜ್, ವೆಂಕಟೇಶುಲು ಮೊದಲಾದವರು ಬಿಜೆಪಿಗೆ ಬೆಂಲ ನೀಡುವ ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಅವರು ಬಿಜೆಪಿ ಪಕ್ಷ ಕೊಟ್ಟ ಮಾತಿನಂತೆ ನಿಮ್ಮ ಸಮಾಜಕ್ಕೆ ಬುಡಾ ಅಧ್ಯಕ್ಷ ಸ್ಥಾನ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಉನ್ನತದ ಸ್ಥಾನಗಳನ್ನು ಕಲ್ಪಿಸಲಿದೆ. ಪಕ್ಷದ ಪರ ನೀವು ಹೊಂದಿರುವ ಅಭಿಮಾನ ಸದಾ ಸ್ಮರಣೀಯ ಎಂದರು.