ಬಿಜೆಪಿಗಾಗಿ ದಿಲ್ ಕಿ ಬಾತ್ ಎಂದ ಕಂಗನಾ

ಮುಂಬೈ,ಮಾ.೨೫-ಬಾಲಿವುಡ್ ನ ಜನಪ್ರಿಯ ನಟಿ ಕಂಗನಾ ರಣಾವತ್ ಈ ಬಾರಿ ಬಿಜೆಪಿ ಎಂಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.೫ನೇ ಪಟ್ಟಿಯಲ್ಲಿ ಈ ನಟಿಗೆ ಅವಕಾಶ ನೀಡಲಾಗಿದೆ.ಬಿಜೆಪಿಯಿಂದ ಟಿಕೆಟ್ ಪಡೆದ ನಂತರ ಕಂಗನಾ ರಣಾವತ್ ಅವರ ಮೊದಲ ಪ್ರತಿಕ್ರಿಯೆ ವ್ಯಕ್ತವಾಗಿದೆ.ಅವರು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬಿಜೆಪಿಗಾಗಿ ದಿಲ್ ಕಿ ಬಾತ್ ಬರೆದಿದ್ದಾರೆ.
ಕಂಗನಾ ರಣಾವತ್ ಬಿಜೆಪಿ ಪ್ರವೇಶಿಸಿದ್ದಾರೆ. ಬಿಜೆಪಿ ಅವರನ್ನು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಿದೆ. ಈ ಸಂತಸದ ಸುದ್ದಿಯನ್ನು ಹಂಚಿಕೊಂಡ ಕಂಗನಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ, ಅವರು ಪಕ್ಷಕ್ಕೆ ಧನ್ಯವಾದಗಳನ್ನು ಅರ್ಪಿಸಿ ಸುದೀರ್ಘ ಸಂದೇಶವನ್ನು ಬರೆದಿದ್ದಾರೆ.
’ನನ್ನ ಪ್ರೀತಿಯ ಭಾರತ ಮತ್ತು ಭಾರತೀಯ ಜನರ ಸ್ವಂತ ಪಕ್ಷ ಅಂದರೆ ಭಾರತೀಯ ಜನತಾ ಪಕ್ಷ (ಬಿಜೆಪಿ), ನನಗೆ ಯಾವಾಗಲೂ ಬೇಷರತ್ ಬೆಂಬಲವಿದೆ. ಇಂದು ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ನನ್ನ ಜನ್ಮಸ್ಥಳವಾದ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭೆಯ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಹೈಕಮಾಂಡ್ ನಿರ್ಧಾರವನ್ನು ಅನುಸರಿಸುತ್ತೇನೆ. ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲು ನನಗೆ ಗೌರವವಿದೆ ಮತ್ತು ಉತ್ಸುಕನಾಗಿದ್ದೇನೆ. ಧನ್ಯವಾದ!’ಎಂದಿದ್ದಾರೆ.
ಕಂಗನಾ ಅವರ ಈ ಪೋಸ್ಟ್ ನಂತರ, ಕಂಗನಾ ರನಾವತ್ ಅವರನ್ನು ಅಭಿಮಾನಿಗಳು ಅಭಿನಂದಿಸಲು ಪ್ರಾರಂಭಿಸಿದ್ದಾರೆ.