ಬಿಜೆಪಿ,ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ

ಗಬ್ಬೂರು:-ದೇವದುರ್ಗ ತಾಲೂಕಿನ ಸುಕ್ಷೇತ್ರ ಗೂಗಲ್ ಅಲ್ಲಮಪ್ರಭುಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಜೆಡಿಎಸ್ ಪಕ್ಷದ ಕಾರ್ಯಕ್ರಮದಲ್ಲಿ ಬಿಜೆಪಿ,ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಜೆಡಿಎಸ್ ಅಭ್ಯರ್ಥಿಯಾದ ಜಿ.ಕರೇಮ್ಮ ನಾಯಕಿ ಮತ್ತು ತಾಲ್ಲೂಕು ಅಧ್ಯಕ್ಷ ಬುಡ್ಡನಗೌಡ ನೇತೃತ್ವದಲ್ಲಿ
ಅನೇಕರು ಸೇರ್ಪಡೆಯಾದರು.
ಗೂಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗಾಗಲ್, ಇಟಗಿ,ಯಾಟಗಲ್, ಹೇರೂರು,ಮಾತ್ಪಳ್ಳಿ, ಮಸಿಹಾಳ ಗ್ರಾಮದವರು ಜಾತ್ಯತೀತ ಜನತಾದಳ ಪಕ್ಷಕ್ಕೆ ಶನಿವಾರ ಸೇರ್ಪಡೆಯಾದರು.
ಜೆಡಿಎಸ್ ಶಾಲನ್ನು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡ ಜೆಡಿಎಸ್ ಅಭ್ಯರ್ಥಿ ಜಿ.ಕರೇಮ್ಮ ನಾಯಕಿ ಮಾತನಾಡಿ,ದೇವದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಇತ್ತೀಚೆಗೆ ಅನೇಕರು ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ತೊರೆದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಹೆಚ್ಚಿನ ಬಲ ಸಿಕ್ಕಂತಾಗಿದೆ.ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ದೇವದುರ್ಗ ಕ್ಷೇತ್ರದಲ್ಲಿ ಗೆಲವು ಸಾಧಿಸುವ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷ ರೇಣುಕಾ ಸ್ವಾಮಿ, ಖಾಜಾಗೌಡ ಗಬ್ಬೂರು, ವಿರೂಪಾಕ್ಷಿ ಬಳೆ ಮಸರಕಲ್, ಸಿದ್ದನಗೌಡ ಮುಡಲಗುಂಡ, ಮಟ್ಲ ಬಸವರಾಜ ನಾಯಕ ಕೊತ್ತದೊಡ್ಡಿ, ಬಸವರಾಜ ಯರಮಸಾಳ,ಮಹೇಶಗೌಡ ಕಾಕರಗಲ್, ಸಲೀಂ ಕಾಕರಗಲ್, ಚಂದ್ರಹಾಸ ನಾಯಕ ಮಿಯ್ಯಪುರು, ಶಂಕರ್ ಹೇಮನೂರು ಹನುಮಂತ ನಗರಗುಂಡ, ಕೆ.ಮಲ್ಲು ಕೊತ್ತದೊಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.