ಬಿಜೆಪಿ,ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಗೊಂದಲ: ಆಕಾಂಕ್ಷಿಗಳ ಎದೆ ಡವಡವ

ದುರುಗಪ್ಪ ಹೊಸಮನಿ
ಲಿಂಗಸುಗೂರು,ಮಾ.೧೯- ತಾಲೂಕಿನಲ್ಲಿ ೨೦೨೩ ಚುನಾವಣೆ ಹಿನ್ನಲೆಯಲ್ಲಿ ಕಳೆದ ೬ ತಿಂಗಳಿನಿಂದ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಆಫ್ ಪಕ್ಷಗಳು ಸೇವಾಕಾಂಕ್ಷಿಗಳಿಂದ ಅಬ್ಬರದ ಪ್ರಚಾರ ಮಾಡುತ್ತಿದ್ದು ಕೇವಲ ಜೆ.ಡಿ.ಎಸ್. ಪಕ್ಷದಲ್ಲಿ ಮಾತ್ರ ಸಿದ್ದುಬಂಡಿ ಹೆಸರು ಘೋಷಣೆ ಮಾಡಿದ್ದಾರೆ.
ಆದರೆ ಚುನಾವಣೆ ಹತ್ತಿರ ಬಂದಾಗ ಯಾರು ಅಭ್ಯರ್ಥಿ ಎಂದು ನಿಖರವಾಗಿ ಊಹಿಸಲು ಕಷ್ಟ ಎಂದು ಕ್ಷೇತ್ರದ ಜನರು ಮಾತಾನಾಡುತ್ತಿದ್ದು, ಆದರೆ ಕಾಂಗ್ರೆಸ್, ಬಿ.ಜೆ.ಪಿ ಪಕ್ಷದಲ್ಲಿ ಸೇವಾಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ಹನುಮಾನ ಬಾಲದಂತೆ ಬೆಳೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಶಾಸಕರಾದ ಡಿ.ಎಸ್.ಹುಲಗೇರಿ, ಆರ್.ರುದ್ರಯ್ಯ, ಹೆಚ್.ಬಿ.ಮುರಾರಿ, ಅಲ್ಕೋಡ್ ಹನುಮಂತಪ್ಪ, ಪಾಮಯ್ಯ, ಮುರಾರಿ, ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗಾಗಿ, ಆಕಾಂಕ್ಷಿಗಳು, ಅಬ್ಬರದ ಪ್ರಚಾರದಲ್ಲಿ, ತೊಡಗಿದ್ದು ಈಗಗಾಲೇ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಹಲವು ಬಗೆಯ ಸಭೆ ಸಮಾರಂಭಗಳಲ್ಲಿ ಆಕಾಂಕ್ಷಿಗಳು ಚುನಾವಣೆಯಲ್ಲಿ ಸ್ಪರ್ದಿಸಿ, ಗೆಲ್ಲಿಸಿ ಎಂದು ಹಲವು ಬಗೆಯ ಬೇಡಿಕೆಳನ್ನು ಈಡೇರಿಸುವುದಾಗಿ ಸಭೆಗಳಲ್ಲಿ ಮಾತನಾಡುವುದು ರೋಡಿಯಾಗಿದೆ. ಬೇಸಿಗೆ ಇರುವುದರಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಬೀದಿಬದಿಯ ವ್ಯಾಪರಿಗಳಿಗೆ ಸೇವಾಕಾಂಕ್ಷಿಯಾದ ಅಭ್ಯರ್ಥಿಗಳು ನೇರಳಿಗಾಗಿ ತಮ್ಮ ಪಕ್ಷದ ಗುರುತು ಇರುವ ಹಾಗೂ ಅವರ ಭಾವಚಿತ್ರ ಇರುವ ಛತ್ರಿಗಳನ್ನು ಹಂಚಿದ್ದು, ನೀರಿನ ಅರವಟಿಗೆ ಕ್ರಿಕೆಟ್ ಟೋರ್ನಮೆಂಟ್ ಅಯೋಜಿಸುತ್ತಿದ್ದು, ಹೀಗೆ ಕ್ಷೇತ್ರದಲ್ಲಿ ಚುನಾವಣೆ ಅಬ್ಬರದ ಪ್ರಚಾರ ಪ್ರಾರಂಭವಾಗಿದೆ.
ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಇನ್ನು ಯಾರಿಗೆ ಟಿಕೆಟ್ ಎಂದು? ಚಿಹ್ನೆಯಾಗಿ ಉಳಿದಿದೆ. ಈಗಾಗಲೇ ಸೇವಾಕಾಂಕ್ಷಿಗಳು ಕಳೆದ ೬ ತಿಂಗಳಿನಿಂದ ತಮಗೆ ಟಿಕೆಟ್ ಸಿಗುವುದು ಎಂದು ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದು, ಟಿಕೆಟ್ ತಮಗೆ ಸಿಗುತ್ತದೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದು ಸೇವಾಕಾಂಕ್ಷಿ ಅಭ್ಯರ್ಥಿಗಳಲ್ಲಿ ಡವ್‌ಡವ್ ಶುರುವಾಗಿದೆ.

ಲಿಂಗಸೂರು: ಎಚ್.ಬಿ.ಮುರಾರಿ ಇವರಿಗೆ ಟಿಕೆಟ್ ಕೊಡ್ದೆ ಇದ್ರೆ ಲಿಂಗಸುಗೂರಿನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ- ನಾಗರಿಕರು ಅಭಿಪ್ರಾಯ

ಲಿಂಗಸುಗೂರ ತಾಲೂಕಿನಲ್ಲಿ ಈ ಬಾರಿ ಬಿ.ಜೆ.ಪಿ. ಅಧಿಕಾರಕ್ಕೆ ಬರುತ್ತದೆ. ಸಾಮಾಜಿಕ ಕಾರ್ಯಕರ್ತ ಉಮೇಶ ಸರ್ಜಾಪುರ್.

ಎರಡು ಬಾರಿ ಸೋತರು ಎದೆಗುಂದದೆ ಲಿಂಗಸುಗೂರ ಕ್ಷೇತ್ರದಲ್ಲಿ ಯುವಕರು ಹಾಗೂ ಹೆಣ್ಣುಮಕ್ಕಳು ಅಲ್ಪಸಂಖ್ಯಾತರು ತನು ಮನದಿಂದ ಜೆ.ಡಿ.ಎಸ್.ಅಭ್ಯರ್ಥಿ. ಸಿದ್ದುಬಂಡಿ ಗೆಲ್ಲುವುದು ಖಚಿತ.
ಇಮ್ತಿಯಾಜ್ ಪಾಷಾ.