ಬಿಜೆಪಿ,ಕಾಂಗ್ರೆಸ್ಸ್ ಪಕ್ಷಗಳಿಂದ ದಲಿತರಿಗೆ ಅನ್ಯಾಯ

ರಾಯಚೂರು.ಜ.೧೨-
ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗ ಕಾರ್ಯಕರ್ತರ ಸಭೆ ಹಾಗೂ ಪಂಚರತ್ನ ಯೋಜನೆ ಪೂರ್ವಭಾವಿ ಸಭೆಯನ್ನು ಗುರುವಾರ ಸ್ಥಳ ಅತ್ತನೂರ್ ಕಲ್ಯಾಣ ಮಂಟಪ ಫಂಕ್ಷನ್ ಹಾಲ್ ಹಮ್ಮಿಕೊಳ್ಳಲಾಗಿತ್ತುಈ ಕಾರ್ಯಕ್ರಮ ಉದ್ಘಾಟಿಸಿದ ಮಳವಳಿ ಶಾಸಕ ಡಾ ಅನ್ನದಾನಿ ಮಾತನಾಡಿ ” .ಕಾಂಗ್ರೆಸ್ ಮತ್ತು ಬಿ ಜೆ ಪಿ ಪಕ್ಷಗಳು ದಲಿತರ ಬಗ್ಗೆ ಕೇವಲ ಬೂಟಾಟಿಕೆ ಕಾಳಜಿ ಹೊಂದಿವೆ. ಕಾಂಗ್ರೆಸ್‌ಗೆ ದಲಿತರ ಏಳಿಗೆ ಬಗ್ಗೆ ಮನಸ್ಸಿದ್ದರೆ, ತಮಗೆ ದೊರೆತ ೬೦ ವರ್ಷಗಳ ಅಧಿಕಾರಾವಧಿಯಲ್ಲಿ ಸಂಪೂರ್ಣವಾಗಿ ಅವರ ಏಳಿಗೆಗೆ ಕೊಡುಗೆ ನೀಡಬಹುದಿತ್ತು. ಬದಲಿಗೆ ಅವರು ದಲಿತರನ್ನು ಕೇವಲ ಮತ ಬ್ಯಾಂಕ್‌ಗಾಗಿ ಬಳಸಿಕೊಂಡರು. ಹಾಗಾಗಿಯೇ ಅವರ ಸ್ಥಿತಿ ಸುಧಾರಿಸಿಲ್ಲ, ಈಗ ಬಿಜೆಪಿಯು ಅದನ್ನೇ ಮಾಡುತ್ತಿದೆ ಕೇವಲ ಓಲೈಸುವ ಕಾರ್ಯ ಮಾಡುತ್ತಿದ್ದಾರೆ ಆವತ್ತು ಕಾಂಗ್ರೆಸ್ಸಿನವರು ಬಾಬಾಸಾಹೇಬ ಅಂಬೇಡ್ಕರ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು ಇಂದು ಮಲ್ಲಿಕಾರ್ಜುನ ಖರ್ಗೆ ವರನ್ನು ಮುಖ್ಯ ಮಂತ್ರಿಯ ಮಾಡಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ಸಿನ ದಲಿತರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಟೀಕಿಸಿದರು.
ಮಾನ್ವಿ ಶಾಸಕರಾದ ರಾಜವೆಂಕಟಪ್ಪನಾಯಕ ದೊರೆ ಮಾತನಾಡಿ ” ಬಿ ಜೆ ಪಿ ಯಾವುದೇ ಉದ್ದೇಶ ಇಲ್ಲದೇ ಜನ ಸಂಕಲ್ಪ ಸಮಾವೇಶ ಮಾಡುತ್ತಿದೆ ಇದರಿಂದ ರಾಜ್ಯದ ಜನತೆಗೆ ಯಾವುದೇ ಉಪಯೋಗ ಇಲ್ಲ ಶೇಕಡ ೪೦ ಕಮೀಷನ ಪಡೆಯುವ ಸರ್ಕಾರವಾಗಿದೆ ಆದರೆ ಕುಮಾರಣ್ಣ ಪಂಚರತ್ನ ಯಾತ್ರೆಯುಲ್ಲಿ ರಾಜ್ಯ ಜನತೆಗೆ ಆರೋಗ್ಯ, ಶಿಕ್ಷಣ, ಮಹಿಳೆ, ಯುವ ಸಬಲೀಕರಣ ,ವಸತಿ ಸೌಲಭ್ಯ ಕಲ್ಪಿಸುವ ಸ್ಪಷ್ಟ ಉದ್ದೇಶ ಹೊಂದಿದೆ ಅದಕಾರಣ ಜಿಲ್ಲೆಯ ಜನತೆ ಕುಮಾರಣ್ಣ ಬೆಂಬಲಿಸಬೇಕು ಎಂದರು
ಜೆಡಿಎಸ್ ರಾಜ್ಯ ಪರಿಶಿಷ್ಟ ಘಟಕದ ರಾಜ್ಯಾಧ್ಯಕ್ಷ ಅಮರನಾಥ ಮಾತನಾಡಿ, ‘ ದಲಿತ ಸಮುದಾಯದ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದಿಸುವ ಕುಮಾರಣ್ಣ ನೇತೃತ್ವದ ಸರ್ಕಾರ ಬರಲು ಸಮುದಾಯ ಬೆಂಬಲಿಸಬೇಕು’ ಒಳ ಮೀಸಲಾತಿ ಜಾರಿಗೆಯಾಗಬೇಕೆಂದು ಕುಮಾರಣ್ಣನವರ ನಾಗಮೋಹನ್ ದಾಸ್ ಸಮಿತಿ ರಚಿಸಿದ್ದರು ಇದು ನಿಜವಾದ ಕುಮಾರಣ್ಣ ಅವರ ದಲಿತ ಪರ ಇರುವ ಕಾಳಜಿ ಆದರೆ ಎರಡು ರಾಷ್ಟ್ರೀಯ ಪಕ್ಷಗಳು ಮೀಸಲಾತಿ ನಾವು ಮಾಡಿದ್ದವೆ ಬಿಂಬಿಸುವ ಯತ್ನ ಮಾಡುತ್ತಿದ್ದಾರೆ ಎಂದರು
ಜಿಲ್ಲಾಧ್ಯಕ್ಷ ಎಂ ವಿರುಪಕ್ಷಿ “ಪರಿಶಿಷ್ಟ ಜನಾಂಗದವರಿಗೆ ರಾಜಕೀಯ ಪ್ರಜ್ಞೆ ಬೆಳೆದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ ಪರಿಶಿಷ್ಟ ಜನಾಂಗದ ಅಭಿವೃದ್ಧಿಪಡಿಸಲ ಜೆಡಿಎಸ್ ಬದ್ಧವಾಗಿವೆ ಕುಮಾರಣ್ಣ ಅವರು ತಮ್ಮ ಪಂಚರತ್ನಯೋಜನೆಯಲ್ಲಿ ಪರಿಶಿಷ್ಟರ ಸಬಲೀಕರಣಕ್ಕೆ ಪ್ರಾಮುಖ್ಯತೆ ನೀಡಿದೆ ಅದರನ್ವಯ ಪರಿಶಿಷ್ಟರ ಸಂಘಟನೆಯ ಆದ್ಯತೆಯನ್ನು ನೀಡಲಾಗುವದು” ಹೇಳಿದರು .
ಎನ್ ಶಿವಶಂಕರ ವಕೀಲರು ಕಾರ್ಯಾಧ್ಯಕ್ಷ ಮಾತನಾಡಿ ಮಾಜಿ ಪ್ರಧಾನಿಗಳಾದ ದೇವೇಗೌಡರವರ ಪರಿಶಿಷ್ಟ ಜನಾಂಗದವರಿಗೆ ರಾಜಕೀಯಲ್ಲಿ ಸೂಕ್ತ ಸ್ಥಾನಮಾನ ನೀಡಿ ಅವರಿಗೆ ಮೀಸಲಾತಿ ನೀಡಲು ಪ್ರತಿಪಾದಿಸಿದ ಏಕೈಕ ವ್ಯಕ್ತಿ ಆದರೆ ರಾಷ್ಟ್ರೀಯ ಪಕ್ಷಗಳಿಂದ ಪರಿಶಿಷ್ಟರಿಗೆ ಯಾವುದೇ ಸ್ಥಾನ ಮಾನ ನೀಡುತ್ತಿಲ್ಲ ಪರಿಶಿಷ್ಟ ಜನಾಂಗದವರಿಗೆ ಮೀಸಲಿಟ್ಟಿರುವ ಹಣ ದುರುಪಯೋಗುತ್ತಿದ್ದೆ ಕುಮಾರಣ್ಣ ಮತ್ತೊಮ್ಮೆ ಮುಖ್ಯ ಮಂತ್ರಿಯಾಗಲು ನಾವು ಶ್ರಮಿಸೋಣ ಎಂದರು.
ಪರಿಶಿಷ್ಟ ಜಿಲ್ಲಾಧ್ಯಕ್ಷರಾದ ವಿಶ್ವನಾಥ ಪಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ. ಗೌರವ ಅಧ್ಯಕ್ಷ ಯೂಫಸ್ ಖಾನ್ ರಾಜ್ಯ ಪರಿಶಿಷ್ಟ ಘಟಕದ ಪದಾಧಿಕಾರಿಗಳಾದ ಬಾಬುದಿನ್ನಿ ಕಿರಣ, ಅಶೋಕ, ರಾಜಶೇಖರ ಕೃಷ್ಣಪ್ಪ ನಗರ ಅಧ್ಯಕ್ಷ ತಿಮ್ಮರೆಡ್ಡಿ, ಜಿಲ್ಲಾ ಯುವ ಅಧ್ಯಕ್ಷ ಪವನಕುಮಾರ ರಾಮನಗೌಡ ಮಹಿಳಾ ಅಧ್ಯಕ್ಷರಾದ ಪಾತಿ ಅಕ್ಬರ್ ನಾಗುಂಡಿ, ,ನರಸಿಂಹಲು ಈರಣ್ಣ ಯಾದವ, ಪಾರ್ಥ, ,ನರಸಿಂಹಲು ಇಂದಿರಾನಗರ, ವಾಸುದೇವ, ಮಹೇಶ ಕುಮಾರ ಪಾರ್ಥ ಸಾರಥಿ,ಅವಿಲ್ , ಬಿ ಕೆ ಬಾಬು ಶರಣಪ್ಪ ಮ್ಯಾತ್ರಿ ಕುಮಾರಸ್ವಾಮಿ,ಕೆ ಸಂತೋಷ ರಾಮಿರಡ್ಡಿ ,ಅಮಿತ್ ಸುಂಕಾರಿ.