ಬಿಜಿಎಸ್,ಶಿಲ್ಪಾ ಪೌಂಡೇಶನ್ ಕಾರ್ಯ ಶ್ಲಾಘನೀಯ

ಮಾವಿನಕೆರೆ ಹುಳು ತೆಗೆಯುವ ಕಾರ್ಯ-ಶಾಸಕ ಚಾಲನೆ
ರಾಯಚೂರು. ಜು.೪.ನಗರ ಇತಿಹಾಸದಲ್ಲಿ ಭಾರತೀಯ ಜೈನ್ ಸಂಘಟನಾ ಮತ್ತು ಶಿಲ್ಪಾ ಪೌಂಡೇಶನ್ ವತಿಯಿಂದ ಮಾವಿನ ಕೆರೆ ಹೂಳು ತೆಗೆಯುವ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕೈ ಜೋಡಿಸಿರುವುದು ಶ್ಲಾಘನೀಯ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ನಗರದ ಮಾವಿನಕೆರೆಯಲ್ಲಿ ಭಾರತೀಯ ಜೈನ್ ಸಂಘಟನಾ ಹಾಗೂ ಶಿಲ್ಪಾ ಪೌಂಡೇಶನ್ ಸಂಸ್ಥೆಗಳು ನಗರಾಭಿವೃದ್ಧಿ ಪ್ರಾಧಿಕಾರದ ಜೊತೆಗೂಡಿ
ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಗರ ಇತಿಹಾಸದಲ್ಲಿ ಮಾವಿನ ಕೆರೆಯನ್ನು ಯಾರು ಹುಳು ತೆಗೆದಿದ್ದಿಲ್ಲ ಜಿಲ್ಲಾಡಳಿತವು ಬಿಜೆಎಸ್ ಹಾಗೂ ಶಿಲ್ಪಾ ಪೌಂಡೇಶನ್‌ಗೆ ಮನವಿ ಮಾಡಿದಾಗ ತಕ್ಷಣವೇ ಒಪ್ಪಿಗೆ ನೀಡಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಇಂದು ದೊಡ್ಡ ಮಟ್ಟಿಗೆ ಕಾರ್ಯಕ್ರಮವನ್ನು ಮಾಡಲು ಆಗಲಿಲ್ಲ ಮುಂದಿನ ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ೧೦ ಕೋಟಿ ರೂ. ಗಳ ಹಣಕಾಸಿನ ಲಭ್ಯತೆ ಮಾಡಲು ಪ್ರಸ್ತಾವನೆಯನ್ನು ಬೆಂಗಳೂರಿಗೆ ಕಳುಹಿಸಿದ್ದೇವೆ ವೈ.ಗೋಪಾಲ ರೆಡ್ಡಿ ಅಧ್ಯಕ್ಷರ ಅವಧಿಯಲ್ಲಿ ಈ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡಿ ಮಾವಿನ ಕೆರೆಯನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸುಂದರ ಪ್ರವಾಸಿ ತಾಣವನ್ನು ಮಾಡಲು ಬಯಸುತ್ತೇನೆ.
ಸಾರ್ಥಕ ಕೆಲಸ ಮಾಡಲು ನಾನು ನಗರಾಭಿವೃದ್ಧಿ ಅಧ್ಯಕ್ಷ, ಸದಸ್ಯರ ಬೆನ್ನೆಲುಬಾಗಿ ನಿಂತು ಅಭಿವೃದ್ಧಿ ಕೆಲಸಕ್ಕೆ ಮುಂದಾಗುತ್ತೇನೆ ಎಂದು ಹೇಳಿದರು.
ನಗರ ಸಭೆ ಅಧ್ಯಕ್ಷ ಈ.ವಿನಯ ಕುಮಾರ ಅವರು ಮಾತನಾಡುತ್ತ ಬಿಜಿಎಸ್,ಶಿಲ್ಪಾ ಪೌಂಡೇಶನ್ ಸಂಸ್ಥೆಗಳು ಜಿಲ್ಲೆಗೆ ಉತ್ತಮವಾದ ಸೇವೆ ಸಲ್ಲಿಸುತ್ತಿದ್ದಾರೆ.
ಮಾವಿನ ಕೆರೆಯಲ್ಲಿ ತ್ಯಾಜ್ಯ ಕಸ,ಹುಳು ತೆಗೆಯುವ ಕಾರ್ಯಕ್ಕೆ ಯಾರು ಹಾಕಿರಲಿಲ್ಲ ಶಾಸಕರು,ಬಿಜಿಎಸ್ ಹಾಗೂ ಶಿಲ್ಪಾ ಪೌಂಡೇಶನ್ ಮುಂದಾಗಿದ್ದು ಒಳ್ಳೆಯ ವಿಷಯ ವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ ಡಿ ಎ ಅಧ್ಯಕ್ಷ ವೈ. ಗೋಪಾಲರೆಡ್ಡಿ, ಶಿಲ್ಪಾ ಪೌಂಡೇಶನ್ ಮುಖ್ಯಸ್ಥ ವಿಷ್ಣುಕಾಂತ,ಕಮಲ ಸೆಟ್,ರವೀಂದ್ರ ಜಲ್ದಾರ್,ಕದಗೋಲ್ ಅಂಜನೇಯ,ಎ. ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.