ಬಿಜನಳ್ಳಿ ಗ್ರಾಮಸ್ಥರಿಂದ ಸಚಿವ ಡಾ.ಪಾಟೀಲರಿಗೆ ಸ್ವಾಗತ ಸನ್ಮಾನ

ಸೇಡಂ,ಜು,07: ಮಳಖೇಡ ಗ್ರಾಮದ ಬಿಜನಳ್ಳಿ ಕ್ರಾಸ್ ನಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಾದ ಸನ್ಮಾನ್ಯ ಶ್ರೀ ಡಾ. ಶರಣಪ್ರಕಾಶ್ ಪಾಟೀಲ್ ಅವರು ಸಚಿವರಾಗಿ ಮೊದಲನೇ ಬಾರಿ ಸೇಡಂ ಗೆ ಆಗಮಿಸುತ್ತಿರುವ ಮಾರ್ಗದಲ್ಲಿ ಡಾ. ಪಾಟೀಲರಿಗೆ ಬಿಜನಳ್ಳಿ ಗ್ರಾಮಸ್ಥರು ಸನ್ಮಾನಿಸಿ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿ ಸ್ವಾಗತಿಸಿದರು. ಈ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ರಾಮಚಂದ್ರ ಪಾಟೀಲ್, ಮಹೇಶ್ ಪಾಟೀಲ್, ಕಾಂಗ್ರೆಸ್ ಹಿರಿಯ ಮುಖಂಡರಾದ ಹನುಮಂತರಾವ್ ಪೆÇಲೀಸ್ ಪಾಟೀಲ್,ಸಿದ್ದಣ್ಣ ಎಕಮಯಿ, ಮಾಜಿ ಗ್ರಾಮ್ ಪಂಚಾಯತ್ ಸದಸ್ಯರಾದ, ದೇವಿಂದ್ರಪ್ಪ ಗೌಡ, ಬಾಬುರಾವ್ ಮೂಲಿಮನಿ, ಮಲ್ಲಿಕಾರ್ಜುನ ಹೊಸಮನಿ, ಅಣವೀರಪ್ಪ, ಗಣೇಶ್, ಶ್ರೀನಾಥ್, ಮೇಘನಾಥ್, ಸಿದ್ದಪ್ಪ ಹರಳಕಟ್ಟಿ, ಮಂಜುನಾಥ್ ರಾವೂರ್, ಸೇರದಂತೆ ಅನೇಕರು ಇದ್ದರು.