ಬಿಜನಳ್ಳಿಯಲ್ಲಿ ಉಚಿತ ಪಶು ತಪಾಸಣೆ ಚಿಕಿತ್ಸಾ ಶಿಬಿರ

ಸೇಡಂ,ಜ,19: ತಾಲೂಕಿನ ಬಿಜನಳ್ಳಿ ಗ್ರಾಮದಲ್ಲಿಂದು ಅಲ್ಟ್ರಾಟೆಕ್ ಕಮ್ಯೂನಿಟಿ ವೆಲ್ಫೇರ್ ಫೌಂಡೇಶನ್ ಯೂನಿಟ್ ರಾಜಶ್ರೀ ಸಿಮೆಂಟ್ ವರ್ಕ್ ಮಳಖೇಡ ಮತ್ತು ಸಹನಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ (ರಿ) ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಪಶು ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಪಶು ತಪಾಸಣಾ ಚಿಕಿತ್ಸಾ ಶಿಬಿರದಲ್ಲಿ ಗ್ರಾಮದಲ್ಲಿರುವ ಸುಮಾರು ದನ ಕರುಗಳಲ್ಲಿ ನಾಯಿಗಳಿಗೆ, ಕಾಣಿಸುವ ಹಲವಾರು ರೋಗಿಗಳಿಗೆ ಸ್ಥಳದಲ್ಲಿಯೇ ಇಂಜೆಕ್ಷನ್,ನೀಡುವ ಮೂಲಕ ರೋಗ ಲಕ್ಷಣಗಳು ತಡೆಯುವುದರ ಜೊತೆಗೆ ಬರುವಂತ ರೋಗಗಳಿಗೆ ಮುಂಜಾಗ್ರತೆ ವಹಿಸಲು ರೈತರಿಗೆ ಸಲಹೆ ನೀಡಿದರು. ಈ ವೇಳೆಯಲ್ಲಿ ಸರ್ಕಾರಿ ಪಶು ಸಂಗೋಪನಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಣ್ಣಾರಾವ್ ಪಾಟೀಲ್, ಸಿಎ???ರ್ ಕಚೇರಿ ಸಿಬ್ಬಂದಿ ಸೋಮಶೇಖರ್, ರೈತರಾದ ಬಸವರಾಜ್ ಹೆಗ್ಗ, ಅಣವೀರಪ್ಪ, ಕಲ್ಯಾಣಿ ಪೂಜಾರಿ, ದೇವೇಂದ್ರಪ್ಪ ಗೌಡ, ನಾಗರಾಜ, ಸೇರಿದಂತೆ ಹಲವರು ಇದ್ದರು.