ಬಿಚ್ಚಿದ ಜೋಳಿಗೆ ನಾಟಕ

ಧಾರವಾಡ,ನ16 : ವೈದ್ಯಕೀಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಮತ್ತು ದೇಹದಾನ ಹಾಗೂ ಅಂಗದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ ಬಹುಮುಖ ವ್ಯಕ್ತಿತ್ವದ ಡಾ. ಸ.ಜ ನಾಗಲೋಟಿಮಠ ಎಂದು ಧಾರವಾಡ ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘವು 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವಂಬರ ಇಡೀ ತಿಂಗಳು ಆಯೋಜಿಸಿದ ಕಾರ್ಯಕ್ರಮದ ನಿಮಿತ್ತ 9 ದಿನಗಳ ನಾಟಕೋತ್ಸವದಲ್ಲಿ 3 ನೇ ದಿನಬಿಚ್ಚಿದ ಜೋಳಿಗೆ’ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಅತಿಥಿಗಳಾಗಿ ಆಗಮಿಸಿದ್ದ ಕಲಾವಿದೆ ಆರತಿ ದೇವಶಿಖಾಮಣಿ ಮಾತನಾಡಿ, ಕಲೆಗಳ ನಾಡು, ಸಾಂಸ್ಕøತಿಕ ನಗರಿ ಧಾರವಾಡಕ್ಕೆ ಸಂಘದ ಕೊಡುಗೆ ಅಪಾರವಾಗಿದೆ. ಕಲಾವಿದರನ್ನು ಈ ವೇದಿಕೆಯ ಮೂಲಕ ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ.ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ಸರಳತೆ ಹಾಗೂ ಸಾಧನೆಯ ಸಾಕಾರ ಮೂರ್ತಿ ಡಾ. ಸ.ಜ.ನ ಅವರು ಒಬ್ಬ ನಡೆದಾಡುವ ವೈದ್ಯರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು. ಸಂಘ ಅವರನ್ನು ಈ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅವರ ಆತ್ಮಕಥನದ ನಾಟಕವನ್ನು ಪ್ರದರ್ಶಿಸುವ ಮೂಲಕ ಅವರ ಜೀವನ ಸ್ಮರಣೆ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಧಾರವಾಡದ ಬಾಬಾಜಾನ್ ಮುಲ್ಲಾ ಹಾಗೂ ಮೈಸೂರಿನ ಡಾ. ಗಣೇಶ ಅಮೀನಗಡ ಅವರಿಗೆ ರಂಗಕಲಾ ಸನ್ಮಾನ ಮಾಡಿ ಗೌರವಿಸಲಾಯಿತು. ಡಾ. ಗಣೇಶ ಅಮೀನಗಡ ಸನ್ಮಾನಿತರ ಪರವಾಗಿ ಮಾತನಾಡಿ, ಸಂಘದಿಂದ ತಮಗೆ ಸಾಂಸ್ಕøತಿಕ ಸಂಸ್ಕಾರ ಸಿಕ್ಕಿದ್ದು, ಸಂಘದ ಒಡನಾಟ ಸ್ಮರಿಸಿಕೊಂಡು ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.
ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿ, ವಂದಿಸಿದರು. ಶಿವಾನಂದ ಭಾವಿಕಟ್ಟಿ ಅತಿಥಿಗಳನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಕಾಂತ ಬೆಲ್ಲದ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ ಹಾಗೂ ಡಾ. ಬಾಳಣ್ಣಾ ಶೀಗೀಹಳ್ಳಿ, ಡಾ. ವೀರಣ್ಣ ರಾಜೂರು, ಶಂಕರ ಬೆಟಗೇರಿ, ಎಂ.ಎಂ. ಚಿಕ್ಕಮಠ, ಎಚ್.ಡಿ. ನದಾಫ್, ಎಸ್.ಎಂ. ದಾನಪ್ಪಗೌಡರ, ಡಾ. ಬಸವರಾಜ ಸಾದರ, ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ, ಶಾಂತಾ ನಾಗಲೋಟಿಮಠ, ಎಸ್.ಎಸ್. ಹಿರೇಮಠ, ಡಾ. ಶಿವಾನಂದ ಶೆಟ್ಟರ, ಎಂ.ಜಿ. ಮುಳಕೂರ, ಮಡಿವಾಳಪ್ಪ ಶಿರಿಯಣ್ಣವರ, ಎನ್.ಎಫ್. ಹಿರೇಮಠ, ಪ್ರಕಾಶ ಬಾಳಿಕಾಯಿ, ಹರ್ಷವರ್ಧನ ಶೀಲವಂತ, ವೀರಣ್ಣ ಪತ್ತಾರ, ಡಾ. ಟಿ.ಜಿ. ಪಾಟೀಲ, ಪ್ರಭು ಹಂಚಿನಾಳ, ಕೋಟಿಗೌಡರ, ಸಂಗಳದ, ರೋಣದ ಮುಂತಾದವರು ಪಾಲ್ಗೊಂಡಿದ್ದರು.
ನಂತರ ಡಾ. ಗಣೇಶ ಅಮೀನಗಡ ರಂಗರೂಪದ, ಜಗದೀಶ ಆರ್. ಜಾಣಿ (ಎನ್.ಎಸ್.ಡಿ) ಸಂಗೀತ, ವಿನ್ಯಾಸ, ನಿರ್ದೇಶನದ `ಬಿಚ್ಚಿದ ಜೋಳಿಗೆ’ ನಾಟಕವನ್ನು ರಂಗಾಯಣ, ಕಲಬುರ್ಗಿ ತಂಡದವರು ಸೊಗಸಾಗಿ ಪ್ರದರ್ಶನ ನೀಡಿ, ಜನಮನ ಗೆದ್ದರು.