ಬಿಗ್ ಬಿ, ಕೆಬಿಸಿ ಮೆಕರ್‍ಸ್ ವಿರುದ್ಧ ಎಫ್‌ಐಆರ್

ಮುಂಬೈ, ನ. ೩- ಕೌನ್ ಬನೆಗಾ ಕರೋಡ್ ಪತಿ ಕಾರ್ಯಕ್ರಮದ ನಿರೂಪಕ ಹಾಗೂ ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಸೋನಿ ಟಿವಿ ಕಾರ್ಯಕ್ರಮದ ಮೇಕರ್‍ಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಕಳೆದ ಶುಕ್ರವಾರ ಕರಮ್ ವೀರ್ ಎಂಬ ಶೀರ್ಷಿಕೆಯಡಿ ನಡೆದ ವಿಶೇಷ ಸಂಚಿಕೆಯಲ್ಲಿ ಬಚ್ವನ್ ಕೇಳಿದ ಪ್ರಶ್ನೆಗೆ ಎಫ್ ಐಆರ್ ದಾಖಲಾಗಿದೆ.
ಲಕ್ನೋದಲ್ಲಿ ಅಮಿತ್ ಬಚ್ಚನ್ ವಿರುದ್ಧ ಎಫ್ ಐಆರ್ ದಾಖಲಾಗಿರುವ ಬಗ್ಗೆ ವರದಿಗಳು ದೃಢಪಡಿಸಿದೆ. ನಟ ಅನೂಪ್ ಸೋನಿ ಮತ್ತು ಸಾಮಾಜಿಕ ಕಾರ್ಯಕರ್ತ ಬೆಜ್ವಾಡ ವಿಲ್ಸನ್ ಎಂಬುವರು ಹಾರ್ಟ್ ಸೀಟ್ ನಲ್ಲಿ ಕುಳಿತಿದ್ದರು.
ಬಿಗ್ ಬಿ ೬ ಲಕ್ಷದ ೪೦ ಸಾವಿರ ರೂಪಾಯಿಯ ನಗದು ಬಹುಮಾನಕ್ಕೆ ಕೇಳಿದ ಪ್ರಶ್ನೆಗೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದವು.
೧೯೨೭ರ ಡಿಸೆಂಬರ್ ೨೫ ರಂದು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟುಹಾಕಿದ್ದವು. ವಿಷ್ಣು ಪುರಾಣ, ಭಗವದ್ಗೀತೆ, ಋಗ್ವೇದ, ಮನುಸ್ಮೃತಿ ಆಯ್ಕೆಗಳನ್ನು ನೀಡಲಾಗಿತ್ತು.
ಸ್ಪರ್ಧೆಗಳು ಮನುಸ್ಮೃತಿಯನ್ನು ಉತ್ತರವಾಗಿ ಹೇಳಿದರು. ಇದು ಸರಿ ಉತ್ತರವೆಂದು ಘೋಷಿಸಿದ ಬಿಗ್ ಬಿ, ಡಾ. ಬಿ.ಆರ್. ಅಂಬ್ಕೇಡರ್ ಅವರು ಪ್ರಾಚೀನ ಹಿಂದೂ ಧರ್ಮದ ಗ್ರಂಥದ ಪ್ರತಿಗಳನ್ನು ಖಂಡಿಸಿ ಹುಟ್ಟುಹಾಕಿದರು ಎಂದು ವಿವರಣೆ ನೀಡಿದ್ದರು.
ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಹಾಗೂ ಟೀಕೆಗೆ ಗುರಿಯಾಗಿತ್ತು. ನೆಟ್ಟಿಗರು ಟ್ವೀಟರ್ ನಲ್ಲಿ ಕಾರ್ಯಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ನೆಟ್ಟಿಗರು ಇದನ್ನು ಎಡಪಂಥೀಯ ಎಂದರೆ ಇನ್ನೂ ಕೆಲವರು ಈ ಕಾರ್ಯಕ್ರಮ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.