ಬಿಗ್ ಬಾಸ್ ಸೀಸನ್ ಗೆ ಬಂದ ಸಮಂತಾ


ಹೈದರಾಬಾದ್ : ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 4 ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ನಟ ನಾಗಾರ್ಜುನ ನಿರೂಪಕರಾಗಿದ್ದಾರೆ.

ಈ ನಡುವೆ ನಟ ನಾಗಾರ್ಜುನ್ ಅವರು ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಿದ್ದಾರೆ. ಆ ವಾರ ದಸರಾ ವಿಶೇಷ ದಿನವಾಗಿದ್ದರಿಂದ ಕಾರ್ಯಕ್ರಮ ಆಯೋಜಕರು ನಟಿ ಸಮಂತಾ ಅವರೊಂದಗೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದಾರೆ.

ನಟಿ ಸಮಂತಾ ಸಮಂತಾ ಆಯೋಜಿಸಿದ್ದ ಪ್ರದರ್ಶನವನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಮತ್ತು ಪ್ರದರ್ಶನವು ಕೂಡ ಯಶಸ್ವಿಯಾಗಿ ಕೊನೆಗೊಂಡಿತ್ತು. ಇದರಿಂದಾಗಿ ಪ್ರಸ್ತುತ ನಟಿ ಸಮಂತಾ ನಡೆಸಿಕೊಟ್ಟ ಎಪಿಸೋಡ್ ಗೆ 11.7 ಟಿಆರ್ ಪಿ ರೇಟಿಂಗ್ ಇದೆ ಎನ್ನಲಾಗಿದೆ. ಈ ರೀತಿ ಹೆಚ್ಚಿನ ಟಿಆರ್ ಪಿ ಬಂದಿರುವುದಕ್ಕೆ ಅವರ ಅಭಿಮಾನಿಗಳು ಈ ಮಾಹಿತಿಯನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ ಎನ್ನಲಾಗಿದೆ.