ಬಿಗ್ ಬಾಸ್ ಶೋನಲ್ಲಿ ಕಿತ್ತಾಟ ಮುರಿದ ಹಲ್ಲು, ಕೈ ಕಾಲಿಗೆ ಪೆಟ್ಟು

ಬೆಂಗಳೂರು, ಮಾ.೩೧- ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಗಳಿಬ್ಬರು ನಡುವೆ ಮೇಲುಗೈ ಸಾಧಿಸಲು ಬಾರಿ ಪೈಪೋಟಿ ನಡೆದು ಒಬ್ಬ ಹಲ್ಲು ಮುರಿದುಕೊಂಡಿದ್ದರೆ, ಮತ್ತೊಬ್ಬ ಸ್ಪರ್ಧಿ ಕೈಗೆ ದೊಡ್ಡ ಪೆಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ.
ಕಿತ್ತಾಟ, ಜಂಗಿಕುಸ್ತಿಯನ್ನು ಮನೆಯ ಇತರ ಸದಸ್ಯರು ಮೂಕವಿಸ್ಮಿತರಾಗಿ ನೋಡುತ್ತಿದ್ದರೆ ಅವರ ಇಬ್ಬರನ್ನು ಬಿಡಿಸುವ ಗೋಜಿಗೆ ಹೋಗಿಲ್ಲ ಹೀಗಾಗಿ ಸ್ಪರ್ಧಿಗಳಲ್ಲಿ ಒಬ್ಬರಾದ ಮಂಜು ಪಾವಗಡ ಹಲ್ಲು ಮುರಿದುಕೊಂಡಿದ್ದಾರೆ. ಮತ್ತೊಬ್ಬ ಸ್ಪರ್ಧಿ ರಾಜು ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಇಬ್ಬರೂ ಸ್ಪರ್ಧಿಗಳು ಕಿತ್ತಾಟ ನಡೆಸಿರುವುದು ಟಾಸ್ಕ್ ಗಾಗಿ ಹೊರತು ವೈಯಕ್ತಿಕ ಕಾರಣಗಳಿಂದಾಗಿಲ್ಲ.
ಬಿಗ್ ಬಾಸ್ ನಿನ್ನೆ ರಾತ್ರಿ ಎರಡು ಗುಂಪುಗಳಿಗೆ ಗುಡಿಗೋಪುರ ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಲ್ಲಿ ದಿವ್ಯಾ ಉರುಡುಗ ನೇತೃತ್ವದ ಅನುಬಂಧ ಟೀಂ ಹಾಗೂ ಶುಭಾ ಪೂಂಜಾ ನೇತೃತ್ವದ ಜಾತ್ರೆ ಟೀಂ ಎರಡು ತಂಡಗಳು ಭಾಗವಹಿಸಿದ್ದವು. ಎರಡು ಟೀಂ ಎದುರಾಳಿ ತಂಡ ಟೀಂ ಗೋಪುರ ಕಟ್ಟಲು ಸಂಗ್ರಹಿಸಿಟ್ಟಿದ್ದ ಇಟ್ಟಿಗೆಯನ್ನು ಹೊಡೆಯವ ಅವಕಾಶ ಇದಾಗಿತ್ತು.ಈ ವೇಳೆ ಜಾತ್ರೆ ಟೀಂನ ಮಂಜು ಅನುಬಂಧ ಟೀಂನ ಇಟ್ಟಿಗೆ ಹೊಡೆದು ಹಾಕಲು ಬಂದಾಗ ಇದೇ ಅನುಬಂಧ ಟೀಂನ ರಾಜೀವ್ ಗೆ ಅಡ್ಡ ಬಂದಿದ್ದಾರೆ. ಆಗ ರಾಜೀವ್ ಮುಂಗೈ ಮಂಜು ಹಲ್ಲಿಗೆ ಜೋರಾಗಿ ತಾಕಿದೆ. ಆ ತಕ್ಷಣ ಮಂಜು ಹಲ್ಲು ಅರ್ಧ ಮುರಿದು ನೆಲಕ್ಕೆ ಬಿದ್ದಿದೆ. ಇದರಿಂದ ರಾಜೀವ್ ಕೈಗೆ ಭಾರೀ ಪೆಟ್ಟು ಮಾಡಿಕೊಂಡರು.
ಹಲ್ಲು ಕಳೆದುಕೊಂಡ ಮಂಜು ನೋಡಿ ರಾಜೀವ್ ಬೇಸರ ವ್ಯಕ್ತಪಡಿಸಿದರು. ನೀನೊಬ್ಬ ಕಲಾವಿದ. ಹೀಗೆ ಆಗಬಾರದಿದತ್ತು ಎಂದು ಮಂಜು ಬಳಿ ನೋವು ಹೊರಹಾಕಿದ್ದರು. ಆಗ ಮಂಜು ಆಟ ಅಂದಮೇಲೆ ಇವೆಲ್ಲಾ ಕಾಮನ್ ಎಂದು ರಾಜೀವ್ ಸಮಾಧಾನ ಮಾಡಿದರು. ಈ ಘಟನೆಯಿಂದ ಮನೆಮಂದಿಯಲ್ಲಾ ಶಾಕ್ ಆಗಿದ್ದಂತು ಸುಳ್ಳಲ್ಲ.ಬಿಗ್ ಬಾಸ್ ನಿಯಮದ ಪ್ರಕಾರ ಹೊಡೆದಾಟ-ಬಡಿದಾಟ ಮಾಡುವಂತಿಲ್ಲ. ಹಾಗೊಂದು ವೇಳೆ ಮಾಡಿದರೆ ಅವರನ್ನು ಬಿಗ್ ಬಾಸ್‌ನಿಂದಲೇ ಎಲಿಮಿನೇಟ್ ಮಾಡಲಾಗುತ್ತದೆ. ಆದರೆ ನನ್ನ ನಡೆದ ಘಟನೆ ಟಾಸ್ಕ್‌ಗೆ ಸಂಬಂಧಿಸಿದಾಗಿದೆ.