ಬಿಗ್ ಬಾಸ್‍ಗೆ ಭಾಲ್ಕಿ ಯುವಕ

ಬೀದರ್À:ಜ.28: ಬಾಲಿವುಡನ ಬಿಗ್ ಬಾಸ್‍ಗೆ ಜಿಲ್ಲೆಯ ಯುವಕ ಆಯ್ಕೆಯಾಗಿ ಗಮನ ಸೆಳೆದಿದ್ದಾನೆ.
ಭಾಲ್ಕಿ ತಾಲೂಕಿನ ರಾಚಪ್ಪ ಗೌಡಗಾಂವ ನಿವಾಸಿ ಅರುಣ ಬಾಬುರಾವ ಮಶೆಟ್ಟಿ ಬಿಗ್ ಬಾಸ್‍ಗೆ ಆಯ್ಕೆಯಾಗಿ, ಇದೀಗ ಫೈನಲ್ ಹಂತದಲ್ಲಿದ್ದಾನೆ.
ಮೂಲತಃ ಯೂಟ್ಯೂಬರ್ ಆಗಿರುವ ಅರುಣ ಬಿಗ್ ಬಾಸ್‍ಗೆ ಆಯ್ಕೆಯಾಗಿ ವಿವಿಧ ಹಂತದಲ್ಲಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಟಾಪ್ ಐದರಲ್ಲಿ ಅರುಣ ಇದ್ದಾರೆ. ಚಿನ್ನದ ವ್ಯಾಪಾರಕ್ಕಾಗಿ ಹೈದರಾಬಾದಗೆ ತೆರಳಿದ್ದ ಅರುಣ ಕುಟುಂಬ ಇದೀಗ ಅಲ್ಲಿಯೇ ನೆಲೆಸಿದೆ.
ವಿಶೇಷ ಪೂಜೆ: ಬಿಗ್ ಬಾಸ್‍ನ ಅಂತಿಮ ಹಂತದಲ್ಲಿರುವ ಅರುಣ ಮಾಶೆಟ್ಟಿ ವಿಜೇತರಾಗಬೇಕು ಎಂದು ಪ್ರಾರ್ಥಿಸಿ ಬೆಂಬಲಿಗರು ನಗರದ ಪಾಪನಾಶ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿಸಿದರು. ಮಲ್ಲಿಕನಾಥ ಮಡಗೆ ನೇತೃತ್ವದಲ್ಲಿ ಪಾಪನಾಶ ಲಿಂಗಕ್ಕೆ ಪೂಜೆ ನೆರವೇರಿಸಲಾಯಿತು. ಜಿಲ್ಲೆಯವರಾದ ಅರುಣ ಮಾಶೆಟ್ಟಿ ಬಿಗ್ ಬಾಸ್‍ನ ಎಲ್ಲ ಹಂತಗಳನ್ನು ಉತ್ತಮವಾಗಿ ಆಡಿ ಇದೀಗ ಅಂತಿಮ ಹಂತದಲ್ಲಿದ್ದಾರೆ. ಇವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವ ಮೂಲಕ ಕನ್ನಡಿಗನಿಗೆ ಬೆಂಬಲಿಸಬೇಕು ಎಂದು ಮಡಗೆ ಕೋರಿದ್ದಾರೆ. ನಾಗರಾಜ ಜೋಗಿ, ಪಿಲೀಪ್, ಬ್ಲ್ಯಾಂಡಿ, ರಾಹುಲ್, ಅಜಯ, ಸೋನು, ಅಭಿನವ್, ಆಕಾಶ, ಸಚಿನ್, ವಿಲ್ಸನ್ ಇತರರಿದ್ದರು.