ಬಿಗ್‌ಬಾಸ್ ದೀಪ್‌ಗೆ ೪ ಕೋ. ರೂ. ಸಂಭಾವನೆ

ಬೆಂಗಳೂರು, ಏ.೨೨- ಬಿಗ್‌ಬಾಸ್ ೮ನೇ ಸೀಸನ್’ನಲ್ಲಿ ಸುದೀಪ್ ೪ ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಸೀಸನ್ ೧ ರಿಂದ ಕನ್ನಡ ಬಿಗ್‌ಬಾಸ್ ಅನ್ನು ಸುದೀಪ್ ಅವರೇ ನಡೆಸಿಕೊಡುತ್ತಿದ್ದಾರೆ. ಇದೀಗ ಈ ಸೀಸನ್‌ಗೆ ಕಿಚ್ಚ ಭರ್ಜರಿ ಸಂಭಾವನೆ ಪಡೆದಿದ್ದಾರೆ

ಕೊನೆಯ ಐದು ಸೀಸನ್‌ಗೆ ಸುದೀಪ್ ೨೦ ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಅಂದರೆ, ಒಂದು ಸೀಸನ್‌ಗೆ ೪ ಕೋಟಿ ರೂಪಾಯಿ ಆಗಲಿದೆ.

ಮುಂದಿನ ಸೀಸನ್’ಗಳಿಗೂ ಸುದೀಪ್ ಅವರೇ ಬಿಗ್ ಬಾಸ್ ನಡೆಸಿಕೊಡುವ ಸಾಧ್ಯತೆ ಇದೆ. ಸೀಸನ್ ಮುಗಿದ ಕೂಡಲೇ ಮತ್ತೆ ೮ರ ಆವೃತ್ತಿ ಕಲರ್ಸ್ ಕನ್ನಡದಲ್ಲಿ ಈಗಾಗಲೇ ೫೦ ದಿನ ಪೂರ್ಣಗೊಳಿಸಿದೆ.

ಕಳೆದ ೮ ದಿನಗಳಿಂದ ಬಿಗ್‌ಬಾಸ್ ರಿಯಾಲಿಟಿ ಶೋ ನಡೆಸಿಕೊಳ್ಳುತ್ತಿರುವ ಕಿಚ್ಚ ಸುದೀಪ್ ಅವರು ತಮ್ಮ ನಿರೂಪಣೆಗಾಗಿ ಕೋಟಿ ಕೋಟಿ ಜೇಬಿಗೆ ಇಳಿಸಿಕೊಂಡಿದ್ದಾರೆ.