ಬಿಗ್‌ಬಾಸ್: ವರ್ತೂರು ಗೆಲುವಿಗೆ ಬೈಕ್ ರ್‍ಯಾಲಿ

ಕೆ.ಆರ್.ಪುರ, ಜ.೨೪- ಬಿಗ್ ಬಾಸ್ ಸೀಸನ್ ೧೦ರ ಪೈನಲ್‌ಗೆ ಆಯ್ಕೆಯಾಗಿರುವ ವರ್ತೂರು ಸಂತೋಷ್ ಗೆದ್ದು ಬರಲಿ ಎಂದು ಹಾರೈಸಿ ವರ್ತೂರು ಸಂತೋಷ್ ಅವರ ನೂರಾರು ಅಭಿಮಾನಿಗಳು ಮಹದೇವಪುರ ಕ್ಷೇತ್ರದ ಬಳಗೆರೆಯಿಂದ ವಿವಿಧೆಡೆ ಬೈಕ್ ರ್‍ಯಾಲಿ ನಡೆಸಿದರು.
ವರ್ತೂರಿನಲ್ಲಿ ಸಂತೋಷ್ ಅಭಿಮಾನಿಗಳು ಪಟಾಕಿ ಸಿಡಿಸಿ, ಬೈಕಗಳ ಮೂಲಕ ವರ್ತೂರು ಸಂತೋಷ್ ಅವರ ಪರವಾಗಿ ಪ್ರಚಾರ ನಡೆಸಿ ಮನೆಮಗನ ಗೆಲುವಿಗೆ ಮತಚಲಾಯಿಸುವಂತೆ,ಸಂತೋಷ್ ಭಾವಚಿತ್ರ ಹಾಗೂ ಹಳ್ಳಿಕಾರ್ ಎತ್ತುಗಳ ಮೆರವಣಿಗೆ ಮಾಡುವ ಮೂಲಕ ಗೆದ್ದು ಬಾ ವರ್ತೂರ್ ಎಂದು ಆಶಯ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಪ್ಪಿ ಮಂಜುನಾಥ ಅವರು ಹಳ್ಳಿಕಾರ್ ತಳಿಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಳ್ಳಿಕಾರ್ ಒಡೆಯ ಅವರ ಬಿಗ್ ಬಾಸ್ ಗೆಲುವಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ರೈತರ ಪ್ರತಿನಿಧಿಯಾಗಿ ಬಿಗ್ ಬಾಸ್ ಗೆ ಆಯ್ಕೆಯಾಗಿರುವ ವರ್ತೂರು ಸಂತೋಷ್ ಅವರ ಕಾರ್ಯ ಮಹತ್ವದಾಗಿದ್ದು,ಶೋ ಕೊನೆಯ ವರೆಗೆ ಹಳ್ಳಿಕಾರ್ ತಳಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ವರ್ತೂರು ಸಂತೋಷ್ ಸಹೋದರರಾದ ರಘು ಅವರು ಮಾತನಾಡಿ ಹಳ್ಳಿಕಾರ್ ಒಡೆಯ ಸಂತೋಷ್ ಅವರಿಗೆ ನಾಡಿನ ಜನತೆ ಪ್ರೋತ್ಸಾಹ ನೀಡುತ್ತಿದ್ದು, ಪೈನಲ್ ನಲ್ಲಿ ಗೆಲುವಿಗೆ ಮತ ಚಾಲಯಿಸುವ ಮೂಲಕ ಗೆಲ್ಲಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ನೂರಾರು ಅಭಿಮಾನಿಗಳು, ಬೆಂಬಲಿಗರು, ಇಂದು ಅ ಬೆಂಬಲಿಗರು ಸೇರಿ ವರ್ತೂರು, ಸರ್ಜಾಪುರ ರಸ್ತೆ, ಮಾರತ್‌ಹಳ್ಳಿ ರಸ್ತೆ ಮುಖ್ಯರಸ್ತೆ ಸೇರಿದಂತೆ, ಹಲವೆಡೆ ಸಂಚಾರಿಸಿ ಸಾರ್ವಜನಿಕರನ್ನು ಬೆಂಬಲಿಸುವಂತೆ ಮನವಿ ಮಾಡಿದರು.