ಬಿಕ್ಷಾಟನೆಯಲ್ಲಿದ್ದ ಮಕ್ಕಳ ರಕ್ಷಣೆ

ಮಾನ್ವಿ,ಮೇ.೨೫- ಜಿಲ್ಲಾ ಮಕ್ಕಳ ರಕ್ಷಣ ಘಟಕದ ಬಾಲಕಾರ್ಮಿಕ ಯೋಜನಾಧಿಕಾರಿ ಮಂಜುನಾಥರೆಡ್ಡಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ತಂಡದಿಂದ ನಗರದ ಬಸ್ ನಿಲ್ದಾಣ ಹಾಗೂ ಎ.ಪಿ.ಎಂ.ಸಿ ಸಮಿತಿ ಆವರಣದಲ್ಲಿ ದಾಳಿ ನಡೆಸಿ ಬಸ್ ನಿಲ್ದಾಣ ಹತ್ತಿರ ಮೂರಕ್ಕೂ ಹೆಚ್ಚು ಮಕ್ಕಳು ಭಿಕ್ಷಾಟನೆಯಲ್ಲಿದ್ದ ಮಕ್ಕಳನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆದ ಮಕ್ಕಳನ್ನು ತಹಸೀಲ್ದಾರ್ ಕಚೇರಿಯಲ್ಲಿ ಮಕ್ಕಳ ಪಾಲಕರ ಮಾಹಿತಿ ಪಡೆದು ಪಾಲಕರಿಗೆ ತಿಳಿಹೇಳಿ ಮಕ್ಕಳಿಂದ ಭೀಕ್ಷೆ ಬೇಡಿಸುವುದು ಅಪಾರದವಾಗಿದ್ದು ಸರಕಾರವು ೧೪ವರ್ಷದ ವರಗೆ ಕಡ್ಡಾಯ ಶಿಕ್ಷಣ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಶಾಲೆಗಳಿಗೆ ದಾಖಲಿಸಿ ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣವನ್ನು ಕೋಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣ ಘಟಕದ ಕಾನೂನು ಅಧಿಕಾರಿ ಶಿವಕುಮಾರ್ ಪಾಟಿಲ್, ಸಹಾಯಕ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶಿವಗಂಗಮ್ಮ, ಶಿಕ್ಷಣ ಇಲಾಖೆಯ ಸಿ.ಆರ್.ಪಿ.ಗಳಾದ ಶ್ರೀಧರ ದೇಸಾಯಿ, ಸೊಮಶೇಖರ್, ವಿನಾಯಕ್ ರಾವ್ ತಾ.ಕಾರ್ಮಿಕ ಅಧಿಕಾರಿ ಶಾಂತಮೂರ್ತಿ ಸೇರಿದಂತೆ ಇನ್ನಿತರರು ಇದ್ದರು.