ಬಿಕ್ಕಳಿಕೆ ನಿಲ್ಲಿಸಲು ಟಿಪ್ಸ್

ಕೆಲವೊಮ್ಮೆ ಹೆಚ್ಚು ಸೇವಿಸಿದಾಗ, ಗಡಿಬಿಡಿಯಲ್ಲಿ ತಿಂದಾಗ ಅಥವಾ ಮಸಾಲೆಯುಕ್ತ ಆಹಾರಸೇವನೆ ಬಿಕ್ಕಲಿಕೆ ಎದುರಾಗಬಹುದು. ಕೆಲವರು ಬಿಕ್ಕಳಿಕೆಯಿಂದ ಅತಿಯಾದ ಭಯ, ಒತ್ತಡ ಅಥವಾ ಉದ್ವೇಗ ಮೊದಲಾದ ಭಾವನೆಗಳನ್ನು ಪ್ರಕಟಿಸಬಹುದು.

ಜೇನು ಮತ್ತು ಹರಳೆಣ್ಣೆ
ಆಯುರ್ವೇದ ಬಿಕ್ಕಳಿಕೆಯ ಚಿಕಿತ್ಸೆಗಾಗಿ ಈ ವಿಧಾನವನ್ನು ಸೂಚಿಸುತ್ತದೆ. ಒಂದು ವೇಳೆ ಬಿಕ್ಕಳಿಕೆ ಸತತವಾಗಿ ಮುಂದುವರೆಯುತ್ತಲೇ ಇದ್ದರೆ ಈ ವಿಧಾನವನ್ನು ಅನುಸರಿಸಬಹುದು. ಒಂದು ಚಿಕ್ಕಚಮಚ ಜೇನು ಹಾಗೂ ಒಂದು ಚಿಕ್ಕಚಮಚ ಹರಳೆಣ್ಣೆಯನ್ನು ಬೆರೆಸಿ ಬೆರಳಿನಲ್ಲಿ ಅದ್ದಿ ಬೆರಳನ್ನು ಚೀಪಿ ನುಂಗಬೇಕು. ದಿನಕ್ಕೆ ಎರಡರಿಂದ ಮೂರು ಬಾರಿ ಪುನರಾವರ್ತಿಸಬೇಕು.

ತಕ್ಷಣದ ಬಿಕ್ಕಳಿಕೆ ಕಡಿಮೆಯಾಗಲು ತಕ್ಷಣ ತಣ್ಣೀರನ್ನು ಕುಡಿಯಬೇಕು. ಇದು ಸಂಕುಚಿತಗೊಂಡಿದ್ದ ವಪೆಯನ್ನು ಮತ್ತೊಮ್ಮೆ ಮೊದಲಿನ ಸ್ಥಿತಿಗೆ ತರಲು ನೆರವಾಗುತ್ತದೆ. ಇನ್ನೂ ಉತ್ತಮ ಪರಿಣಾಮ ಪಡೇಯಲು ನೀರಿಗೆ ಕೊಂಚ ಜೇನು ಬೆರೆಸಿ ಕುಡಿದರೆ ತಕ್ಷಣ ಬಿಕ್ಕಳಿಕೆ ಇಲ್ಲವಾಗುತ್ತದೆ.

ಬಿಕ್ಕಳಿಕೆ ಕಡಿಮೆಯಾಗಲು ಸಕ್ಕರೆ ಸಹಾ ಉತ್ತಮ ಆಯ್ಕೆಯಾಗಿದೆ. ಸಕ್ಕರೆಯ ಸೇವನೆಯಿಂದ ಜೀರ್ಣಾಂಗ, ಮೆದುಳು, ಹೃದಯ, ಶ್ವಾಸಕ್ರಿಯೆ ಮೊದಲಾದ ಪ್ರಮುಖ ಕಾರ್ಯಗಳಿಗೆ ಸಂಪರ್ಕ ಒದಗಿಸುವ ಮುಖ್ಯ ನರವಾದ ವೇಗಾಸ್ ನರ್ವ್ ಎಂಬ ನರಕ್ಕೆ ಪ್ರಚೋದನೆ ನೀಡುತ್ತದೆ ಹಾಗೂ ತನ್ಮೂಲಕ ತಕ್ಷಣವೇ ಬಿಕ್ಕಳಿಕೆ ಇಲ್ಲವಾಗಲು ನೆರವಾಗುತ್ತದೆ. ಒಂದು ಚಿಕ್ಕಚಮಚ ಸಕ್ಕರೆಯನ್ನು ನೇರವಾಗಿ ಬಾಯಿಗೆ ಹಾಕಿಕೊಂಡು ಬಾಯಿಯಲ್ಲಿ ಸಕ್ಕರೆ ಕರಗುವಂತೆ ಮಾಡಿ, ಅಗಿಯಬೇಡಿ. ಜೊಲ್ಲಿನಲ್ಲಿ ಸಕ್ಕರೆ ಚೆನ್ನಾಗಿ ಕರಗಿದೆ ಎಂದಾಗ ಕೊಂಚ ನೀರಿನೊಂದಿಗೆ ನುಂಗಬೇಕು.

ಬಿಕ್ಕಳಿಕೆಯ ನಿವಾರಣೆಗೆ ಇನ್ನೊಂದು ಸುಲಭ ವಿಧಾನವೆಂದರೆ ಸಾಮಾನ್ಯ ಶಿರ್ಕಾ ಸೇವನೆ. ಇದರ ಹುಳಿಯಾದ ರುಚಿ ಬಿಕ್ಕಳಿಕ ಕಡಿಮೆ ಮಾಡಲು ನೆರವಾಗುತ್ತದೆ. ಇದಕ್ಕಾಗಿ ಕೇವಲ ಅರ್ಧ ಚಿಕ್ಕ ಚಮಚ ಶಿರ್ಕಾವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯಬೇಕು.

ಈ ಆಹಾರದ ಸೇವನೆಯಿಂದಲೂ ಉಸಿರಾಟದಲ್ಲಿ ಆಗಿದ್ದ ಏರುಪೇರು ಸರಿಯಾಗುತ್ತದೆ ಹಾಗೂ ಇದು ಸತತವಾದ ಬಿಕ್ಕಳಿಕೆಯಿಂದ ಮುಕ್ತಿ ದೊರಕುತ್ತದೆ. ಒಂದು ಚಿಕ್ಕ ಚಮಚ ಪೀನಟ್ ಬಟರ್ ಅನ್ನು ಬಾಯಿಗೆ ಹಾಕಿಕೊಂಡು ಕೊಂಚ ಹೊತ್ತು ಹಾಗೇ ಬಿಟ್ಟು ಜೊಲ್ಲಿನಲ್ಲಿ ಕರಗುವಂತೆ ಮಾಡಬೇಕು. ಬಳಿಕ ನಿಧಾನವಾಗಿ ನುಂಗಬೇಕು.

ಬಿಕ್ಕಳಿಕೆಯನ್ನು ಕಡಿಮೆ ಮಾಡಲು ಲಿಂಬೆ ಸಹಾ ಉತ್ತಮ ಆಯ್ಕೆಯಾಗಿದೆ. ಇದರ ಹುಳಿಯಾದ ರುಚಿ ಬಿಕ್ಕಳಿಕೆಗೆ ಕಾರಣವಾಗಿದ್ದ ನರಗಳ ಪ್ರಚೋದನೆಯನ್ನು ಶಮನಗೊಳಿಸಿ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಇದಕ್ಕಾಗಿ ಅರ್ಧ ಚಿಕ್ಕ ಚಮಚ ಲಿಂಬೆರಸವನ್ನು ನೇರವಾಗಿ ಸೇವಿಸಬೇಕು. ಲಿಂಬೆಯ ಹುಳಿ ಸಹಿಸಲು ಸಾಧ್ಯವಾಗದಿದ್ದರೆ ಈ ರಸವನ್ನು ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯಬಹುದು.

ಬಿಕ್ಕಳಿಕೆ ಕಡಿಮೆಯಾಗಲು ಏಲಕ್ಕಿ ಉತ್ತಮ ಆಯ್ಕೆಯಾಗಿದೆ. ಇದರ ಸ್ನಾಯುಗಳನ್ನು ಸಡಿಲಿಸುವ ಗುಣ ಬಿಕ್ಕಳಿಕೆ ಕಡಿಮೆಮಾಡಲು ನೆರವಾಗುತ್ತದೆ. ಇದಕ್ಕಾಗಿ ಒಂದು ಚಿಕ್ಕ ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ಬಿಸಿನೀರಿನಲಲ್ಲಿರಿಸಿ ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ಈ ನೀರನ್ನು ಸೋಸಿ ನಿಧಾನವಾಗಿ ಕುಡಿಯಿರಿ.