ಬಿಕ್ಕಳಿಕೆಗೆ ಮನೆಮದ್ದು

೧. ಎಲಚಿ ಹಣ್ಣಿನ ಬೀಜದೊಳಗಿನ ಪೊಪ್ಪನ್ನು ಹಿಪ್ಪಲಿಯೊಡನೆ ಸೇರಿಸಿ ನುಣ್ಣನೆ ಪುಡಿ ಮಾಡಿ ಜೇನುತುಪ್ಪದ ಜೊತೆ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
೨.ಬಾಳೆಗಿಡದ ಎಲೆಯನ್ನು ಸುಟ್ಟು ಭಸ್ಮ ಮಾಡಿ ಜೇನುತುಪ್ಪದ ಜೊತೆ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ಕಡಿಮೆಯಾಗುತ್ತದೆ.
೩.ಎಳನೀರಿಗೆ ನಿಂಬೆರಸ ಹಿಂಡಿ ಕುಡಿದರೆ ಬಿಕ್ಕಳಿಕೆ ಕಡಿಮೆಯಾಗುತ್ತದೆ.
೪.ಕೆಂಪು ಅಕ್ಕಿಯ ಗಂಜಿ ಮಾಡಿ ಅದಕ್ಕೆ ಶುದ್ಧ ತುಪ್ಪ ಬೆರಸಿ ತಿನ್ನುವುದರಿಂದ ಬಿಕ್ಕಳಿಕೆ ಹತೋಟಿಗೆ ಬರುತ್ತದೆ.
೫.ನವಿಲು ಗರಿಯನ್ನು ಸುಟ್ಟು ಭಸ್ಮ ಮಾಡಿ ಆ ಬೂದಿಯನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವಿಸಿ.
೬.ಹಿಪ್ಪಳಿ ಪುಡಿಯನ್ನು ಜೇನುತುಪ್ಪದ ಜೊತೆ ಸೇವಿಸಿದರೆ ಬಿಕ್ಕಳಿಕೆ ಕಡಿಮೆಯಾಗುತ್ತದೆ.
೭.ಏಲಕ್ಕಿ ಸಿಪ್ಪೆಯನ್ನು ಕುದಿಸಿ ಕಷಾಯ ಮಾಡಿ ಸೇವಿಸುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.
೮.ಒಂದು ಲೋಟ ನೀರನ್ನು ಸ್ವಲ್ಪ ಸ್ವಲ್ಪ ಗುಟುಕು ಗುಟುಕಾಗಿ ಕುಡಿಯುವುದರಿಂದ ಬಿಕ್ಕಳಿಕೆ ಹತೋಟಿಗೆ ಬರುತ್ತದೆ.
೯.ತುಳಸಿ ರಸವನ್ನು ಮೂಗಿನ ಹೊಳ್ಳೆಗಳಿಗೆ ಹಾಕುವುದರಿದ ಬಿಕ್ಕಳಿಕೆ ನಿಲ್ಲುತ್ತದೆ.
೧೦.ಕಲ್ಲುಸಕ್ಕರೆಯನ್ನು ಬಾಯಲ್ಲಿ ಹಾಕಿ ಚಪ್ಪರಿಸುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧