ಬಿಕೋ.. ಎನ್ನುತ್ತೀದ್ದ ಹೊಸಪೇಟೆಯ ಮುಖ್ಯರಸ್ತೆಗಳು.ಅಗತ್ಯವಸ್ತು ಸೇರಿದಂತೆ ಹಣ್ಣು ತರಕಾರಿ ಇಂದಿನಿಂದ ಮನೆ ಬಾಗಿಲಿಗೆ

ಹೊಸಪೇಟೆ ಜೂ2 : ಕರೋನಾ ಮಹಾಮಾರಿಯ ಲಾಕ್‍ಡೌನ್ ಮುಂದಿನ 5 ದಿನಗಳ ನಿರ್ಭಂದದ ಹಿನ್ನೆಲೆಯಲ್ಲಿ ಇಂದು ಹೊಸಪೇಟೆ ಪ್ರಮುಖ ರಸ್ತೆಗಳು ಸೇರಿದಂತೆ ಮಾರುಕಟ್ಟೆ ಬಹುತೇಕ ಬಣಗುಡುತ್ತಿತು.
ಬಳ್ಳಾರಿ ಜಿಲ್ಲಾಡಳಿತ ಬ್ಯಾಂಕ್, ಸಹಕಾರಿ ಸಂಘಗಳು ಸೇರಿದಂತೆ ಎಲ್ಲಾ ಆರ್ಥಿಕ ವ್ಯವಹಾರಗಳು ಸಹ ಇಂದಿನಿಂದ ಶನಿವಾರದವರೆಗೂ ನಿರ್ಭಂಧಿಸಿರುವ ಕಾರಣ ಆಸ್ಪತ್ರೆ ಹೊರತುಪಡಿಸಿ ಯಾವುದೆ ಸಂಚಾರವಿಲ್ಲದಿರುವುದು ಇಂದು ಹೊಸಪೇಟೆ ಸ್ಥಬ್ದವಾಗಲು ಕಾರಣವಾಗಿದೆ.
ಹಾಲು, ಹಣ್ಣು ತರಕಾರಿ ನಗರದ ಓಣಿ ಓಣಿಗಳಲ್ಲಿ ಬಂದದ್ದು ಬಿಟ್ಟರೆ ಮುಖ್ಯರಸ್ತೆಗಳಲ್ಲಿ ಪೊಲೀಸರು, ಕರೋನಾ ವಾರಿಯರ್ಸ್‍ಗಳು, ಮಾಧ್ಯಮ ಪ್ರತಿನಿಧಿಗಳನ್ನು ಹೊರತುಪಡಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾದ ರೋಗಿಗಳ ಬಂಧುಗಳು ಮಾತ್ರ ಕಾಣುತ್ತಿದ್ದರು.
ಇನ್ನು ಅನಗತ್ಯವಾಗಿ ತಿರುಗುವವರನ್ನು ತಡೆದು ಕಾರಣ ಕೇಳುವ ಕಾರ್ಯವನ್ನು ನಗರದ ಬಹುತೇಕ ಮುಖ್ಯರಸ್ತೆಗಳಾದ ಹಂಪಿ ರಸ್ತೆ, ಡ್ಯಾಂ ರಸ್ತೆ, ಬಳ್ಳಾರಿ ರಸ್ತೆ, ಮೇನ್ ಬಜಾರ್‍ಗಳು ಸೇರಿದಂತೆ ಜನನಿಬಿಡ ವಸತಿಪ್ರದೇಶವಾದ ಆಚಾದ್ ನಗರ, ಮೂರಂಗಡಿ ವೃತ್ತಗಳಲ್ಲಿಯೂ ವಿವಿಧ ಠಾಣೆಯ ಸಿಬ್ಬಂದಿಗಳು ತಪಾಸಣೆಯಲ್ಲಿ ತೊಡಗಿದ್ದು. ಕಾರಣವಿಲ್ಲದೆ ತಿರುಗುವ ವಾಹನಗಳನ್ನು ಹಾಗೂ ಜನರನ್ನು ವಶಕ್ಕೆ ಪಡೆಯುವ ಕಾರ್ಯದಲ್ಲಿ ಪೊಲೀಸರು ಮಗ್ನರಾಗಿದ್ದರು.
ವಿಶೇಷ ಎಂಬಂತೆ ವಾಹನಗಳನ್ನು ಹಿಡಿಯುತ್ತಿದಂತೆಯೇ ದೂರವಾಣಿ ಕರೆಯನ್ನು ಮಾಡಿ ಶಿಫಾರಸ್ತು ಮಾಡಲು ಮುಂದಾಗಿದ್ದ ಕೆಲವರ ಕರೆಯನ್ನು ಸಹ ಪೊಲೀಸರು ಸ್ವೀಕರಿಸದೆ ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ನಗರಠಾಣೆ, ಗ್ರಾಮೀಣ ಚಿತ್ತವಾಡಿಗಿ ಹಾಗೂ ಸಂಚಾರಿ ಠಾಣೆಯ ಇನ್ಸ್‍ಪೇಕ್ಟರ್‍ಗಳು ಸಹ ತಮ್ಮ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ವಾಕಿಂಗ್ ಮಾಡಿ ಸಂಚಾರ ನಿರ್ಭಂದಕ್ಕೆ ಮುಂದಾಗಿರುವುದು ಕಂಡುಬಂತು. ತರಕಾರಿ ಮಾರುವವರು ಒಂದಡೆ ನಿಂತರೆ ಸಾಕು ಬೈದು ಓಡಿಸುವ ಮೂಲಕ ಜನದಟ್ಟಣೆಯಾಗದಂತೆ ಬಿಗಿ ಕ್ರಮಕೈಗೊಂಡಿದ್ದರು.