ಬಿಕೋ ಎನ್ನುತ್ತಿರುವ ರಸ್ತೆಗಳು

ಸಂಡೂರು :ಏ:27::ತಾಲೂಕಿನಾದ್ಯಂತ ಲಾಕಡೌನ್ ಪರಿಣಾಮಕಾರಿಯಾಗಿದ್ದು ಇದರಿಂದ ಪಟ್ಟಣ ಸೇರಿದಂತೆ ವಿಕೆಂಡ್ ಕಪ್ರ್ಯೂ ಅಗಿದ್ದು ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 11 ಗಂಟೆವರೆಗೆ ಬಿಡಿ ಗ್ರಾಹಕರು ವಹಿವಾಟುಗಳು ನಡೆಸಿದರು, ನಂತರ ಪೋಲಿಸರು ಬಿಗಿ ಬಂದೋಬಸ್ತು ಮಾಡಿದ ಪರಿಣಾಮ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟವು, ಸಾರಿಗೆ ವಾಹನಗಳು ಅಗೊಂದು ಈಗೊಂದು ಎನ್ನುವಂತೆ ಸಂಚರಿಸುತ್ತಿದ್ದು ಹೊಸಪೇಟೆ ಸಾರಿಗೆ ವಾಹನಗಳು ಎಂದಿನಂತೆ ಸಂಚರಿಸಿದವು. 11 ಗಂಟೆಯ ನಂತರ ಅಟೋ ಸಂಚಾರಗಳು ಸ್ತಬ್ದವಾವಾದವು, ಟಯಾಕ್ಸಿಗಳು ಬಹಳ ವಿರಳವಾಗಿ ಕೂಡ್ಲಿಗಿ ಕಡೆ ಪ್ರಯಣಿಕರನ್ನು ಸಾಗಿಸುತ್ತಿದ್ದರು, ಹೋಟಲ್ ಮಾಲೀಕರು ಪಾರ್ಸಲ್‍ಗಾಗಿ ಗ್ರಾಹಕರು ಬರುವುದು ಕಡಿಮೆ ಎನ್ನುವ ಭಾವನಯಿಂದ ವಹಿವಾಟುಗಳನ್ನು ಬಂದ್ ಮಾಡಿ ಅವರು ಊರುಗಳಿಗೆ ತೆರಳಿದರು. ಬಟ್ಟೆ ಅಂಗಡಿ, ಪಬ್, ಮಲ್ ಬ್ರಂದಿ ಷಾಪ್ ಬೇಕರಿ ಇನ್ನೀತರ ವಹಿವಾಟುಗಳು ಸಂಪೂರ್ಣ ಸ್ಥಗಿತಯಗೊಂಡಿದ್ದವು ಒಟ್ಟಾರೆಯಾಗಿ ಸಂಡೂರು ಬಂದ್ ಸಂಪೂರ್ಣ ವಾಗಿ ಯಶಸ್ವಿಯಾಗಿತ್ತು.
ಪೋಟೋ ಸುದ್ದಿಗಳೂ: