ಬಿಕೋ ಎನ್ನುತ್ತಿರುವ ಕಪಿಲಾ ನದಿ

ನಂಜನಗೂಡು:ಏ:17:ಕಪಿಲಾ ನದಿ ಭಕ್ತಾದಿಗಳು ಇಲ್ಲದೆ ಬಿಕೋ ಎನ್ನುತ್ತಿದೆ
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಪಿಲಾ ನದಿ ಮತ್ತು ದೇವಸ್ಥಾನಕ್ಕೆ ಭಕ್ತಾದಿಗಳ ಬರುವಿಕೆ ಇಳಿಮುಖವಾಗಿದೆ ಆದ್ದರಿಂದ ಕಪಿಲಾ ನದಿಯಲ್ಲಿ ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ.
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಕೆಎಸ್ಸಾರ್ಟಿಸಿ ನೌಕರರ ಮುಷ್ಕರ ಒಂದು ಕಡೆ ರೈಲಿನ ವ್ಯವಸ್ಥೆ ಇನ್ನೂ ಕೂಡ ಆರಂಭವಾಗಿಲ್ಲ ಆದ್ದರಿಂದ ದೇವಸ್ಥಾನಕ್ಕೆ ಹೊರರಾಜ್ಯಗಳಿಂದ ಬರುವ ಭಕ್ತಾದಿಗಳ ಸಂಖ್ಯೆ ಇಳಿಮುಖ ಒಂದಿದೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಕಪಿಲಾ ನದಿಯಲ್ಲಿ ಪುಣ್ಯಸ್ಥಾನ ಮಾಡಿ ದೇವರ ದರ್ಶನ ಮಾಡುತ್ತಿದ್ದರು ಆದರೆ ಕರೋನವೈರಸ್ ಎರಡನೇ ಅಲೆ ಆರಂಭವಾಗಿರುವುದರಿಂದ ಭಕ್ತರ ಸಂಖ್ಯೆ ಕಡಿಮೆಯಾಗಿ ಕಪಿಲಾ ನದಿಯಲ್ಲಿ ಪುಣ್ಯಸ್ಥಾನ ಮಾಡಲು ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ.