
ಬೀದರ್:ಸೆ.12: ಬಸವ ಕಾಯಕ ದಾಸೋಹ (ಬಿಕೆಡಿ) ಫೌಂಡೇಷನ್ ಭಾಲ್ಕಿ ತಾಲ್ಲೂಕಿನ ಧನ್ನೂರ(ಎಚ್) ಗ್ರಾಮದಲ್ಲಿ ಐವರು ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಿತು.
ಖ್ಯಾತ ಉದ್ಯಮಿ ಕಾಶಪ್ಪ ಧನ್ನೂರ ಅವರ ಲಿಂಗೈಕ್ಯ ಸಂಸ್ಮರಣೆ ನಿಮಿತ್ತ ನಡೆದ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ನದೀಂ ಅಬ್ಬಾಸ್, ಮಲ್ಲಿಕಾರ್ಜುನ ರಾಜಶೇಖರ, ರೇಷ್ಮಾ ಪಾಂಡುರಂಗ ಗೋಂದಳಿ, ಶ್ರದ್ಧಾ ಬಸವರಾಜ ಹೊಸಾಳೆ ಹಾಗೂ ನಿಕಿತಾ ವಿಜಯಕುಮಾರ ಹಾಳೆ ಅವರಿಗೆ ತಲಾ ರೂ. 5 ಸಾವಿರ ವಿದ್ಯಾನಿಧಿ ವಿತರಿಸಲಾಯಿತು.
ಕಲ್ಯಾಣ ಕರ್ನಾಟಕ ಎಜುಕೆಷನ್ ಐಕಾನ್ ಪ್ರಶಸ್ತಿ ಪುರಸ್ಕøತ ಪ್ರೌಢಶಾಲಾ ಶಿಕ್ಷಕ ಶಿವಲಿಂಗ ಹೇಡೆ ಅವರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ಸಾನಿಧ್ಯ ವಹಿಸಿದ್ದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಮಾತನಾಡಿ, ಕಾಶಪ್ಪ ಧನ್ನೂರ ಅವರು ಕಾಯಕ-ದಾಸೋಹಕ್ಕೆ ಹೆಸರಾಗಿದ್ದರು. ನಡೆ-ನುಡಿ ಒಂದಾಗಿಸಿಕೊಂಡಿದ್ದರು ಎಂದು ಬಣ್ಣಿಸಿದರು.
ಸತ್ಯ ಶುದ್ಧ ಕಾಯಕದಿಂದ ಬಂದ ಹಣವನ್ನು ಕುಟುಂಬ, ಸಮಾಜ ಹಾಗೂ ಧರ್ಮ ಕಾರ್ಯಗಳಿಗೆ ವಿನಿಯೋಗಿಸಿ ಆದರ್ಶ ಬದುಕು ಸಾಗಿದ್ದರು ಎಂದು ಹೇಳಿದರು.
ಫೌಂಡೇಷನ್ ವತಿಯಿಂದ ಪ್ರತಿ ವರ್ಷ ಜಾತಿ, ಧರ್ಮಗಳ ಭೇದವಿಲ್ಲದೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಗುತ್ತಿದೆ. ಬಸವ ತತ್ವ ಆಚರಣೆಗೆ ತರುವ ದಿಸೆಯಲ್ಲಿ ಫೌಂಡೇಷನ್ ಅಳಿಲು ಸೇವೆ ಸಲ್ಲಿಸುತ್ತಿದೆ ಎಂದು ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಬಸವಕಲ್ಯಾಣದ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಅಶೋಕ ದಾಮಾ ಉದ್ಘಾಟಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಷಟ್‍ಸ್ಥಲ ಧ್ವಜಾರೋಹಣ ಮಾಡಿದರು. ಪ್ರಮುಖರಾದ ಗುಂಡೇರಾವ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಡಾ. ಚಂದ್ರಕಾಂತ ಗುದಗೆ, ಡಾ. ಓಂಕಾರ ಸ್ವಾಮಿ, ಪ್ರಮುಖರಾದ ಶರಣಪ್ಪ ಮಿಠಾರೆ, ಶಾಮರಾವ್ ಭೀಮರಾವ್, ಡಾ.ಎಸ್.ಎಂ. ಪಾಟೀಲ, ರಾಜೇಂದ್ರ ಜೊನ್ನಿಕೇರಿ, ಜೈರಾಜ ಖಂಡ್ರೆ, ರಾಜಶೇಖರ ಮಂಗಲಗಿ, ಡಾ. ಎ.ಬಿ. ಸೋಲಪುರೆ, ಕಂಟೆಪ್ಪ ದಾನಪ್ಪ, ಸಿದ್ದಯ್ಯ ಕಾವಡಿಮಠ, ಗಂಗಶೆಟ್ಟಿ ಪಾಟೀಲ, ಡಾ. ಸುಭಾಷ್ ಬಶೆಟ್ಟಿ, ಅಣ್ಣಾರಾವ್ ಮೊಗಶೆಟ್ಟಿ, ಸೋಮನಾಥ ಗಂಗಶೆಟ್ಟಿ ಇದ್ದರು.
ಸುವರ್ಣಾ ಬಿ. ಧನ್ನೂರ ಬಸವ ಪೂಜೆ ನೆರವೇರಿಸಿದರು. ಬಸವರಾಜ ಹಾಲಹಳ್ಳಿ ನಿರೂಪಿಸಿದರು. ಸ್ಫೂರ್ತಿ ಧನ್ನೂರ ವಂದಿಸಿದರು.