ಬಿಕಿನಿಯಲ್ಲಿ ಶಿಲ್ಪಾ ಶೆಟ್ಟಿ

ಮುಂಬೈ,ಜೂ.೧೪-ಸಿನಿಮಾ ಹೊರತಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಉಡುಗೆ-ತೊಡುಗೆ, ಯೋಗ, ಫಿಟ್ನೆಸ್ ಬಗ್ಗೆ ಆಗಾಗ ಸುದ್ದಿಯಾಗುತ್ತಿರುತ್ತಾರೆ.
೪೮ರ ಹರೆಯದಲ್ಲೂ ೧೮ರ ಹುಡುಗಿಯಂತೆ ಕಾಣಿಸುವ ಶಿಲ್ಪಾ ಶೆಟ್ಟಿ ಈಗಲೂ ಎಲ್ಲರ ಮೆಚ್ಚಿನ ತಾರೆ.ಫ್ಯಾಷನ್ ಪ್ರೇಮಿಯಾಗಿರುವ ಈ ನಟಿ ತನ್ನ ವಿಭಿನ್ನ ಶೈಲಿಯ ಉಡುಗೆಯಿಂದ ಅನೇಕ ಬಾರಿ ಎಲ್ಲರ ಗಮನ ಸೆಳೆಯುತ್ತಾರೆ. ಮುಖ್ಯವಾಗಿ ಫಿಟ್ನೆಸ್ ಪ್ರೇಮಿಗಳ ಅಚ್ಚು ಮೆಚ್ಚಿನ ಐಕಾನ್ ಎಂದು ಗುರುತಿಸಲ್ಪಡುವ ಈ ನಟಿ
ಇತ್ತೀಚೆಗೆ ತಮ್ಮ ೪೮ನೇ ಹುಟ್ಟುಹಬ್ಬವನ್ನು ಆಚರಿಸಲು ಲಂಡನ್‌ಗೆ ತೆರಳಿದ್ದರು. ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿಗೆ ಚಿತ್ರರಂಗ ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ೪೮ ವರ್ಷ ದಾಟಿದರೂ ಶಿಲ್ಪಾ ಶೆಟ್ಟಿ ಮಾತ್ರ ಯೋಗ ಮತ್ತು ವ್ಯಾಯಾಮದ ಮೂಲಕ ಉತ್ತಮ ಆರೋಗ್ಯ ಮತ್ತು ಸೌಂದರ್ಯ ಕಾಪಾಡಿಕೊಂಡು ೧೮ರ ಹರೆಯದ ಯುವತಿ ಹಾಗೆ ಕಂಗೊಳಿಸುತ್ತಾರೆ
ಲಂಡನ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಶಿಲ್ಪಾ ಶೆಟ್ಟಿ ಅಲ್ಲಿಂದ ಸಾಟರ್ನಿಯಾದ ನೈಸರ್ಗಿಕ ಬಿಸಿ ನೀರಿನ ಕೊಳ ಇರುವಲ್ಲಿಗೆ ತೆರಳಿದ್ದಾರೆ. ನೈಸರ್ಗಿಕವಾಗಿ ಭೂಮಿಯಿಂದ ಬರುವ ಬಿಸಿ ನೀರಿನಲ್ಲಿ ಮಿಂದೆದ್ದಿದ್ದಾರೆ. ಇದೀಗ ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈಗ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ೪೮ ವರ್ಷದ ಶಿಲ್ಪಾ ಶೆಟ್ಟಿ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ವಯಸ್ಸಿನ ರಹಸ್ಯವನ್ನು ಪ್ರಶ್ನಿಸುತ್ತಿದ್ದಾರೆ.
ಬಿಕಿನಿ ಧರಿಸಿ ಫೋಟೋ ಶೇರ್ ಮಾಡಿರುವ ಶಿಲ್ಪಾ ಶೆಟ್ಟಿ, ಜೀವನದಲ್ಲಿ ಒಮ್ಮೆಯಾದರೂ ಸ್ಯಾಟರ್ನಿಯಾದ ನೈಸರ್ಗಿಕ ಥರ್ಮಲ್ ಸ್ನಾನಕ್ಕೆ ಭೇಟಿ ನೀಡಬೇಕು. ಈ ಸ್ಥಳವು ದೈವಿಕವಾಗಿದೆ ಮತ್ತು ಇಲ್ಲಿನ ನೀರು ಪವಿತ್ರವಾಗಿದೆ ಎಂದು ಜನರು ನಂಬುತ್ತಾರೆ. ಒಂದು ಬಿಸಿನೀರಿನ ಬುಗ್ಗೆ ೩೦೦೦ ವರ್ಷಗಳಿಂದ ಭೂಮಿಯ ಮಧ್ಯಭಾಗದಿಂದ ಉಬ್ಬಿಕೊಳ್ಳುತ್ತಿದೆ ಮತ್ತು ಅಪಾರವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಅನುಭವಿಸಿ ಹೊಸ ಚೈತನ್ಯವನ್ನು ಪಡೆಯಿರಿ ಎಂದು ತಿಳಿಸಿದ್ದಾರೆ.