ಬಿಕಿನಿಯಲ್ಲಿ ಮಿಂಚಿದ ರಾಕುಲ್

ದುಬೈ,ಜು.೨೫-ಬಾಲಿವುಡ್ ಖ್ಯಾತ ನಟಿ ಪಂಜಾಬಿ ಮೂಲದ ರಾಕುಲ್ ಪ್ರೀತ್ ಸಿಂಗ್ ಸದ್ಯ ದುಬೈ ಪ್ರವಾಸದಲ್ಲಿ ಇದ್ದಾರೆ.
ರಾಕುಲ್ ಪ್ರೀತ್ ಸಿಂಗ್ ಮೊದಲು ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರಲಿಲ್ಲ, ಆದರೆ ಇತ್ತೀಚೆಗೆ ತುಸು ಹೆಚ್ಚೇ ಬೋಲ್ಡ್ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.


ಅಂತರವಿಲ್ಲದೇ ಒಂದರ ಹಿಂದೆ ಒಂದರಂತೆ ಫೋಟೋಶೂಟ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಚಿತ್ರಗಳು ಕಡಿಮೆಯಾದರೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿದ್ದು ಮೂಲಕ ಅಭಿಮಾನಿಗಳ ಸನಿಹದಲ್ಲೇ ಇರುತ್ತಾರೆ.
ಪ್ರತಿನಿತ್ಯ ಆಧುನಿಕ ಉಡುಗೆಯಲ್ಲಿ ತಮ್ಮ ದೇಹದ ಅಂಕುಡೊಂಕು ಪ್ರದರ್ಶನ ಮಾಡುತ್ತಾರೆ. ಸದ್ಯ ದುಬೈನ ಪ್ರವಾಸದಲ್ಲಿರುವ ರಾಕುಲ್ ಅಲ್ಲಿನ ಸುಂದರ ಸ್ಥಳಗಳಲ್ಲಿ ಮೈಮರೆತು ಹಸಿರು ಬಣ್ಣದ ಬಿಕಿನಿ ಧರಿಸಿ ಮಿಂಚಿದ್ದಾರೆ. ಮೈಮರೆತು ಕುಣಿದು ಮಸ್ತ್ ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ.
ಯಂಗ್ ಮತ್ತು ಹಾಟ್ ಬ್ಯೂಟಿ ರಾಕುಲ್ ಪ್ರೀತ್ ಸಿಂಗ್ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಿಕಿನಿ ಧರಿಸಿ ಬಿಂದಾಸ್ ಆಗಿ ಪೋಸ್ ಕೊಟ್ಟಿದ್ದಾರೆ . ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ರಾಕುಲ್ ತಮ್ಮ ಹಾಟ್ ಗ್ಲಾಮರ್ ಫೋಟೋಗಳಿಂದ ಯುವಕರು ಎದೆ ಬಡಿತ ಹೆಚ್ಚಿಸಿದ್ದಾರೆ.ಬೀಚ್ ನಲ್ಲಿ ಕುರ್ಚಿ ಮೇಲೆ ಕುಳಿತು
ಥೈಸ್ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದಿದ್ದಾರೆ.


ಸದ್ಯ ರಾಕುಲ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಮತ್ತು ನೆಟಿಜನ್‌ಗಳು ಹಾಟ್ ಮತ್ತು ಬೋಲ್ಡ್ ಕಾಮೆಂಟ್ ಹರಿಬಿಟ್ಟಿದ್ದಾರೆ.
ಇನ್ನು ರಾಕುಲ್ ಪ್ರೀತ್ ಸಿಂಗ್ ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಲ್ಲಿದ್ದಾರೆ.ರಾಕುಲ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು. ಈ ಹಿಂದೆಯೂ ರಾಕುಲ್ ಮದುವೆ ಬಗ್ಗೆ ವದಂತಿ ಹಬ್ಬಿತ್ತು. ಹಿಂದಿಯ ಯುವ ನಿರ್ಮಾಪಕ ಮತ್ತು ನಟ ಜಾಕಿ ಭಗ್ನಾನಿ ಅವರನ್ನು ರಾಕುಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಇದೆ.
ಸಿನೆಮಾಗಳ ಶೂಟಿಂಗ್ ನಿಂದ ಆಕೆ ಬಿಡುವು ಸಿಕ್ಕರೇ ವೇಕೇಷನ್ ಗಳಿಗೆ ಹಾರುತ್ತಿರುತ್ತಾರೆ. ಇದೀಗ ದುಬೈನಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿರುತ್ತಾರೆ.
ಸಧ್ಯ ಕಮಲ್ ಹಾಸನ್ ಇಂಡಿಯನ್-೨, ಶಿವ ಕಾರ್ತಿಕೇಯನ್ ಜೊತೆಗೆ ಆಯಾಲಾನ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.