ಬಿಕಿನಿಯಲ್ಲಿ ಪೂಜಾ ಬೇಡಿ ಪುತ್ರಿ ಅಲಯಾ

ಮುಂಬೈ, ಜೂ.೨೭-ಬಾಲಿವುಡ್ ಬೆಡಗಿ ಆಲಯಾ ಎಫ್.ಬಿಕಿನಿ ಧರಿಸಿ ಬೀಚ್ ನಲ್ಲಿ ಸುತ್ತಾಡುತ್ತಿರುವ ಹಾಟ್ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ರಿಲ್ಯಾಕ್ಸ್ ಮೂಡ್ ನಲ್ಲಿರುವ ಬಾಲಿವುಡ್ ಬೆಡಗಿ, ಪೂಜಾ ಬೇಡಿ ಪುತ್ರಿ ಅಲಯಾ ಎಫ್.ಬೀಚ್‌ನಲ್ಲಿ ಬಿಕಿನಿ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಸುಂದರಿ ತಮ್ಮ ಹಾಟ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಆ ಮೂಲಕ ಅಭಿಮಾನಿಗಳ ಬಿಸಿ ಹೆಚ್ಚಿಸಿದ್ದಾರೆ. ರೆಡ್ ಫ್ಲೋರಲ್ ಪ್ರಿಂಟ್ ಬಿಕಿನಿಯನ್ನು ಧರಿಸಿರುವ ಅಲಯಾ ಅವರು ಸಮುದ್ರತೀರದಲ್ಲಿ ಅಡ್ಡಾಡುತ್ತಿರುವಾಗ ತನ್ನ ದೇಹ ಸೌಂದರ್ಯ ಪ್ರದರ್ಶಿಸಿದ್ದಾಳೆ. ತುಂಡುಡುಗೆಯೊಂದಿಗೆ ಹೂಪ್ ಇಯರ್ ರಿಂಗ್ ಧರಿಸಿ ಸೂರ್ಯನಿಗೆ ಸೆಡ್ಡು ಹೊಡೆಯುವಂತೆ ಫೋಟೊಗೆ ಪೋಸ್ ನೀಡಿದ್ದಾಳೆ ಈ ಹರೆಯದ ಬಾಲೆ.
ಕೂದಲು ಹಾರಾಡಲು ಬಿಟ್ಟು, ತಮ್ಮ ಚರ್ಮ ಆರೋಗ್ಯ, ಸುಂದರ ಚರ್ಮ ಹಾಗೂ ಮೈ ಕಟ್ಟನ್ನು ಚಿತ್ರದಲ್ಲಿ ಪ್ರದರ್ಶಿಸಿದ್ದಾರೆ ಈ ಬೆಡಗಿ. ಇವರ ಈ ಹಾಟ್ ಫೋಟೊಗಳಿಗೆ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರ ಹರಿಸಿದ್ದಾರೆ.

ಬೀಚ್‌ನಲ್ಲಿ ತನ್ನ ವಿರಾಮದ ಕ್ಷಣಗಳನ್ನು ಆರಾಮವಾಗಿ ಕಳೆಯುತ್ತಿರುವ ಸುಂದರಿ, “ನೀಲಿ ಸಮುದ್ರದ ಮಧ್ಯದಲ್ಲಿ ನನ್ನ ಮನಸ್ಸು ಸ್ಪಷ್ಟವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಫೋಟೋಗಳ ಸರಮಾಲೆಯನ್ನೇ ಹಂಚಿಕೊಂಡಿದ್ದಾರೆ.