ಸಂಜೆವಾಣಿ ವಾರ್ತೆ
ಬಳ್ಳಾರಿ,ಜೂ,6- ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ ನಲ್ಲಿ ಐಸಿಸಿ, ಮತ್ತು ಎನ್.ಎಸ್.ಎಸ್., ಐಕ್ಯೂಎಸಿ, ಸಹಯೋಗದಲ್ಲಿ 60 ಸಸಿಗಳನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಉಪಸ್ಥಿತಿಯಲ್ಲಿ ನೆಡಲಾಯಿತು ಮತ್ತು ಪ್ಲಾಂಟೇಶನ್ ಡ್ರೈವ್ ಅಡಿಯಲ್ಲಿ “ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ” ಎಂಬ ಶೀರ್ಷಿಕೆಯಡಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಕೆ.ಎಸ್.ಲೋಕೇಶ್ ರವರು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ, ಪರಿಸರ ಸುಸ್ಥಿರತೆ ಕುರಿತು ಮಾತನಾಡುತ್ತಾ “ಮಾನವನ ಚಟುವಟಿಕೆ ಕ್ರಿಯೆಯ ಪರಿಣಾಮದಿಂದ ಗಾಳಿ, ನೀರು, ಮಣ್ಣು ಹೇಗೆ ಕಲುಷಿತಗೊಂಡಿದೆ ಮತ್ತು ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತಿದೆ ಮತ್ತು ಮನುಷ್ಯ, ಪ್ರಕೃತಿ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಪ್ಲಾಸ್ಟಿಕ್ ಮಾಲಿನ್ಯ ಹೇಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ” ಎನ್ನುವುದನ್ನು ವಿವರಿಸಿ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವುದು, ಮರುಬಳಕೆ ಮತ್ತು ವಿವಿಧ ನಿಯಂತ್ರಣ ವಿಧಾನಗಳಾದ ಕಾಗದ, ಬೊಂಬು, ಇತರ ನೈಸರ್ಗಿಕವಾಗಿ ಕೊಳತುಹೋಗುವಂತಹ ಪದಾರ್ಥಗಳಿಂದ ಮಾಡಿದ ವಸ್ತುಗಳನ್ನು ಬಳಸಬೇಕು, ಪ್ರತಿಯೊಬ್ಬರೂ ಇದನ್ನು ಪಾಲಿಸಿದಲ್ಲಿ ಪರಿಸರವನ್ನು ನಾವು ರಕ್ಷಿಸಬಹುದು ಮತ್ತು ಮುಂದಿನ ಪೀಳಿಗೆಗೆ ಒಳ್ಳೆಯ ಭವಿಷ್ಯವನ್ನು ನೀಡಬಹುದು ಎಂದು ತಿಳಿಸಿದರು.
ಬಿಐಟಿಎಂನ ಪ್ರಾಚಾರ್ಯ ಡಾ.ಯಡವಳ್ಳಿ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎನ್.ಗುರುರಾಜ್ ಐಕ್ಯೂಎಸಿ ಸಂಯೋಜಕ, ಡಾ.ಶರಣಕುಮಾರ್ ಟಿ.ಎಂ, ಮತ್ತು ಡಾ.ವೀರೇಂದ್ರ ಕುಮಾರ್ ಎ.ಕೆ, ಡಾ.ಚಿದಾನಂದ, ಶ್ರೀ ಅಶೋಕ್, ಎನ್‌ಎಸ್‌ಎಸ್, ಪಿಒ, ಶ್ರೀ ಯೋಗಾನಂದ ಪತ್ತಾರ್, ಉಪಸ್ಥಿತರಿದ್ದರು.
ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ.ಸುರೇಶ್ ಸ್ವಾಗತಿಸಿದರು. ಡಾ.ವೀಣಾ ವಿ. ಮತ್ತು ಶ್ರೀಮತಿ ವಿಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಧರಣಿ ಎನ್. ವಂದಿಸಿದರು.