ಬಿಐಎಲ್‌ನಲ್ಲಿ ಪಿಲ್ಲರ್‌ಗೆ ಬಸ್‌ಡಿಕ್ಕಿ 15 ಮಂದಿಗೆ ಗಾಯ

ಬೆಂಗಳೂರು,ಜೂ.೧೮- ಟರ್ಮಿನಲ್ ೨ ರಿಂದ ಟರ್ಮಿನಲ್ ೧ಕ್ಕೆ ಪ್ರಯಾಣಿಕರನ್ನು ಸ್ಥಳಾಂತರ ಮಾಡುವಾಗ ಶೇಟಲ್ ಬಸ್ ಟರ್ಮಿನಲ್ ೨ ಪಿಲ್ಲರ್‌ಗೆ ಡಿಕ್ಕಿ ಹೊಡೆದು ೧೫ ಮಂದಿ ಗಾಯಗೊಂಡಿರುವ ದುರ್ಘಟನೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಗಾಯಗೊಂಡ ಬಸ್ ನಲ್ಲಿದ್ದ ೧೫ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿಯನ್ನು ಏರ್ಪೋರ್ಟ್‌ನಲ್ಲಿರುವ ಅಸ್ಟರ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಗಂಭೀರವಾಗಿ ಗಾಯಗೊಂಡ ಐವರು ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಟರ್ಮಿನಲ್ ೨ ರಿಂದ ಟರ್ಮಿನಲ್ ೧ಕ್ಕೆ ಪ್ರಯಾಣಿಕರನ್ನು ಸ್ಥಳಾಂತರ ಮಾಡುವಾಗ ಶೇಟಲ್ ಬಸ್ ಬೆಳಗ್ಗೆ ೫.೧೫ಕ್ಕೆ ಈ ದುರ್ಘಟನೆ ಸಂಭವಿಸಿದ್ದು
ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕ ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಿದ್ದ. ಮುಂಜಾನೆ ನಿದ್ರೆಗೆ ಜಾರಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಇಂದು ಮುಂಜಾನೆ ನಡೆದ ಘಟನೆಯಿಂದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.