ದಾವಣಗೆರೆ.ಮಾ.೨೩: ನಗರದ ಬಾಪೂಜಿ ತಾಂತ್ರಿಕ ಮತ್ತು ಇಂಜಿನಿಯರಿಂಗ್ ಕಾಲೇಜು ವತಿಯಿಂದ ಇದೇ 24, 25 ಮತ್ತು 26ರಂದು ‘ನಮ್ಮ ದವನ -23 ಕಾರ್ಯಕ್ರಮ’ ವನ್ನು ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಕಾಲೇಜಿನ ಬಯೋಟೆಕ್ ಮುಖ್ಯಸ್ಥ ಜಿ.ಪಿ.ದೇಸಾಯಿ ತಿಳಿಸಿದವರು.ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ದಾವಣಗೆರೆ ಮಟ್ಟದ ಅಂತರ ಕಾಲೇಜುಗಳಲ್ಲಿ ಮತ್ತು ಅಂತರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಒಟ್ಟು 13 ರಿಂದ 15 ತಂಡ ಭಾಗವಹಿಸಲಿವೆ. ಪ್ರತಿ ತಂಡದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.ಬಿಐಇಟಿ ಕಾಲೇಜಿನ ಫುಟ್ಬಾಲ್ ಆಟದ ಮೈದಾನದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನದ ಕಾರ್ಯಕ್ರಮ 24ರ ಸಂಜೆ 6.30ಕ್ಕೆ ರಾಣೆಬೆನ್ನೂರಿನ ಎಸ್ ಟಿ ಜೆ ಐ ಟಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಇ. ಶಿವಶಂಕರ್ ಹೊನ್ನಾಳಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಬಿಐಇಟಿ ಕಾಲೇಜು ಪ್ರಾಚಾರ್ಯ ಡಾ.ಹೆಚ್.ಬಿ.ಅರವಿಂದ್, ಬಯೋಟೆಕ್ ಮುಖ್ಯಸ್ಥ ಜಿ.ಪಿ.ದೇಸಾಯಿ, ನಿರ್ದೇಶಕ ಪ್ರೊ.ವೈ. ವೃಷಬೇಂದ್ರಪ್ಪ, ಎಂ. ಸಿ. ಪಾಟೀಲ್, ಡಾ.ಕೆ.ಸಿ. ದೇವೇಂದ್ರಪ್ಪ, ಡಾ.ಹೆಚ್.ಪಿ. ವಿನುತ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.25ರಂದು ಎರಡನೇ ಕಾರ್ಯಕ್ರಮ ಸಂಜೆ 7ಕ್ಕೆ ನಡೆಯಲಿದ್ದು, ಅಥಣಿ ವೀರಣ್ಣ ಆಗಮಿಸಲಿದ್ದಾರೆ. ನಿರ್ದೇಶಕ ಪ್ರೊ.ವೈ. ವೃಷಬೇಂದ್ರಪ್ಪ ಅಧ್ಯಕ್ಷತೆ ವಹಿಸುವರು. ಡಾ.ಎಸ್.ಎನ್.ರಮೇಶ್, ಕಾಲೇಜು ಪ್ರಾಚಾರ್ಯ ಡಾ.ಹೆಚ್.ಬಿ.ಅರವಿಂದ್, ಡಾ.ಎಸ.ಬಿ.ಮಲ್ಲಿಕಾರ್ಜುನ, ಪ್ರೊ.ಭಾಗ್ಯ ಶಾಂತಕುಮಾರ, ಪ್ರೊ.ಕರಿಬಸಬರಾಜು, ಪ್ರೊ.ವಾಸುದೇವ ನಾಯಕ ಆಗಮಿಸಲಿದ್ದಾರೆ ಎಂದು ಹೇಳಿದರು.ಮಾ. 26ರ ಸಂಜೆ 6.30ಕ್ಕೆ ಅದೇ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಜಂಟಿ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜುನ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವೇಳೆ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯ ಡಾ.ಹೆಚ್.ಬಿ. ಅರವಿಂದ್, ಡಾ.ಎಸ್.ಎನ್.ರಮೇಶ್, ಪ್ರೊ.ವೈ. ವೃಷಬೇಂದ್ರಪ್ಪ ಆಗಮಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಟಿ ಯಲ್ಲಿ ಕಾಲೇಜು ಪ್ರಾಚಾರ್ಯ ಡಾ.ಹೆಚ್.ಬಿ. ಅರವಿಂದ್, ಡಾ.ವಿನುತಾ, ಪ್ರೊ. ಭಾಗ್ಯ, ವಾಸುದೇವ ನಾಯಕ, ಗಿರೀಶ್, ವೇಣುಕುಮಾರ್, ಕರಿಬಸಬರಾಜು ಇತರರು ಇದ್ದರು.