ಬಿಐಇಟಿಯಲ್ಲಿ ಡಿ.೧೦-೧೧ ರಂದು ಕಾರ್ಯಾಗಾರ

ದಾವಣಗೆರೆ.ಡಿ.೯; ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಳೆ  ಮತ್ತು ಡಿ.11 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಸಂಪರ್ಕ ಡೀನ್ ಡಾ
ಜಿ.ಪಿ.ದೇಸಾಯಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ನಾಳೆ
ಬೆಳಿಗ್ಗೆ 10 ಗಂಟೆಗೆ ಬಿಐಇಟಿ ಆವರಣದಲ್ಲಿರುವ ಎಸ್.ಎಸ್ . ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ . ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ . ಕರಿಸಿದ್ದಪ್ಪ , ಕುಲಸಚಿವರಾದ ಡಾ. ಎ.ಎಸ್.ದೇಶಪಾಂಡೆ , ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ . ಸಿದ್ಧಪ್ಪ ಮತ್ತು ಬಿ.ಐ.ಇ.ಟಿ. ಕಾಲೇಜಿನ ನಿರ್ದೇಶಕರಾದ ಪ್ರೊ . ವೈ . ವೃಷಭೇಂದ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸುವರು , ಬಿ.ಐ.ಇ.ಟಿ. ಪ್ರಾಂಶುಪಾಲರಾದ ಎಚ್.ಬಿ.ಅರವಿಂದ  ಸಮಾರಂಭದ ಅಧ್ಯಕ್ಷತೆ ವಹಿಸುವರು. ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಯ ಹಕ್ಕಾಗಿದ್ದು , ಅವರ ಜೀವನವನ್ನು ರೂಪಿಸುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ . ಶಿಕ್ಷಣ ವ್ಯವಸ್ಥೆ ಮತ್ತು ನೀತಿಗಳು ಕಾಲಕ್ಕೆ ಅನುಗುಣವಾಗಿದ್ದು ನವೀನ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ . ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತಂದು ಆಧುನೀಕರಣಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿ -2020 ನ್ನು ರೂಪಿಸಲಾಗಿದೆ . ಹೊಸ ಶಿಕ್ಷಣ ನೀತಿಯು , ಹೊಸ ಶಿಕ್ಷಣ ನೀತಿಯು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣಕ್ಕೆ ಸಮಗ್ರ ಚೌಕಟ್ಟಾಗಿದ್ದು , ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ವೃತ್ತಿಪರ ತರಬೇತಿ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ.ರಾಜ್ಯದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳ ಸುಮಾರು 400 ಜನ ಉಪನ್ಯಾಸಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಕೋವಿಡ್ -19 ರ ನಿಯಮಾವಳಿಗಳಂತೆ , ಈ ಕಾರ್ಯಾಗಾರವನ್ನು ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ರೀತಿಯಲ್ಲಿ ಆಯೋಜಿಸಲಾಗಿದೆ . ಈ ಕಾರ್ಯಾಗಾರದ ಉದ್ದೇಶ  ಹೊಸ ಶಿಕ್ಷಣ ನೀತಿ 2020 ನ್ನು ಅರ್ಥೈಸುವುದು ಮತ್ತು ವಿಶ್ಲೇಷಿಸುವುದು , ಕೌಶಲ್ಯ ತರಬೇತಿ , ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ನಡುವಿನ ಅಂತರ ಕಡಿಮೆ ಮಾಡುವುದು , ನೀತಿಯ ಅನುಷ್ಠಾನದಲ್ಲಿ ವಿದ್ಯಾರ್ಥಿಗಳ , ಶಿಕ್ಷಕರ ಮತ್ತು ಸಮಾಜದ ಪಾತ್ರವನ್ನು ಚರ್ಚಿಸುವುದು ಮುಂತಾದವುಗಳಾಗಿವೆ ಎಂದರು.
ಬಿಐಇಟಿ ಕಾಲೇಜಿಗೆ ಅಖಿಲ ಭಾರತೀಯ ೫೭ ನೇ ರ್ಯಾಂಕ್ ಹಾಗೂ ರಾಜ್ಯ ಮಟ್ಟದಲ್ಲಿ ೧೪ ನೇ ರ್ಯಾಂಕ್ ದೊರೆತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ಹೆಚ್.ಬಿ ಅರವಿಂದ್, ಪ್ರೋ.ವೈ.ವೃಷಬೇಂದ್ರಪ್ಪ,ಸಿ.ಆರ್ ನಿರ್ಮಲ, ಕಲ್ಲೇಶಪ್ಪ ಇದ್ದರು.Attachments area