ಬಿಎಸ್ ವೈ ಶೀಘ್ರ ಗುಣಮುಖರಾಗಲಿ; ಹಾರೈಕೆ

ಚಿತ್ರದುರ್ಗ.ಏ.೧೭; ಕೋರೋನಾ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರು ಬೇಗನೆ ಗುಣಮುಖರಾಗಲೆಂದು ನಗರಸಭೆ ನಾಮನಿರ್ದೇಶನ ಮಾಜಿ ಸದಸ್ಯ ಎನ್.ಇ. ನಾಗರಾಜ್ ಹಾರೈಸಿದ್ದಾರೆ. ಯಡಿಯೂರಪ್ಪ ರವರು ರಾಜ್ಯಾದ್ಯಾಂತ ಜನಪ್ರಿಯತೆ ಗಳಿಸಿದ್ದು, ರಾಜ್ಯದ ಜನರ ಸಮಸ್ಯೆಗಳನ್ನು ಆಲಿಸಲು ರಾಜ್ಯಾದ್ಯಾಂತ ಸುತ್ತಾಡುತ್ತಿದ್ದಾಗ ಕೊರೋನಾ ಸೋಂಕು ತಗುಲಿರುವುದರಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿ.ಎಸ್.ಯಡಿಯೂರಪ್ಪ ರವರು ಶೀಘ್ರವೆ ಗುಣಮುಖರಾಗಿ ರಾಜ್ಯದ ಜನತೆಯ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ನಗರಸಭೆ ನಾಮನಿರ್ದೇಶನ ಮಾಜಿ ಸದಸ್ಯ ಎನ್.ಇ. ನಾಗರಾಜ್ ಪ್ರಾರ್ಥಿಸಿದ್ದಾರೆ.